ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಪಂಚತಂತ್ರ ಕಥೆಗಳು, ಗ್ರೀವನ ಬಂಧಗಳನ್ನು ಬಿಡಿಸಿದುವನ್ನು ಕಂಡು ನಿನ್ನ ಸ್ನೇಹ ಮಾಡಬೇ ಕೆಂದು ಬಂದೆನು. ನಾನು ಬೂರುಗದ ಮರದ ಮೇಲೆ ಇರುವಂಥವನು. ನನ್ನ ಹೆಸರು ಲಘುಪತನಕನು, ಕಾಗೆಗಳನ್ನೆಲ್ಲಾ ನನ್ನ ಪ್ರಜೆಗಳಾಗಿ ಮಾಡಿಕೊಂಡು ನಾನು ಅರಸನಾಗಿ ಇರುವನು.-ಎನಲು, ಹಿರಣ್ಯಕನು ಕೇಳೆ-ಎಲೈ ಹುಚ್ಚನೇ, ನಿನಗೂ ನನಗೂ ಹೇಗೆ ಸ್ನೇಹವಾದೀತು ? ಯದ್‌ನ ಯುಜ್ಯತೇ ಲೋಕೇ ಬುಧಸ್ತನ ಯೋಜಯೇತಿ | ಅಹಮನ್ನಂ ಭರ್ವಾ ಭೋಕ್ತಾ ಕಥಂ ಪ್ರೀತಿರ್ಭವಿಷ್ಯತಿ || ಯಾರಿಗೆ ಎಂಥವರ ಸಂಗಡ ಸ್ನೇಹವೊಗೀತೋ ಅವರು ಅಂಥ ವರ ಸಂಗಡ ಸ್ನೇಹಿಸಬೇಕು. ನನ್ನ ಶರೀರವು ನಿನಗೆ ಅನ್ನ ವು ನೀನು ನನ್ನನ್ನು ಭುಜಿಸುವನು; ಆದುದರಿಂದ ನಮ್ಮಿಬ್ಬರಿಗೂ ಸ್ನೇಹವು ಸರಿ ಬೀಳದು ಎಂದು ಹೇಳಿದನು. ಅದನ್ನು ಕೇಳಿ ಲಘುಪತನಕನು ಎಲೈ ಸ್ನೇಹಿತನೇ, ನನ್ನನ್ನು ಅಂಥ ಪಾಪಾತ್ಮನಾಗಿ ಎಣಿಸಬೇಡ, ನಿನ್ನನ್ನು ತಿಂದ ಮಾತ್ರದಿಂದ ನನ್ನ ಹಸಿವು ತೀರೀತೇ ? ನಾನು ಅಂಥ ಕೆಲಸಕ್ಕೆ ಬರುವವನಲ್ಲ. ಚಿತ್ರಗೀವನ ಸಂಗಡ ಹೇಗೆ ಸ್ನೇಹ ಮಾಡಿದೆಯೋ ಹಾಗೆ ನನ್ನೊಡನೆ ಸ್ನೇಹಕ್ಕೆ ಸಮ್ಮತಿಸು. ನನ್ನ ಮೇಲಿನ ಅನುಮಾನವನ್ನು ಬಿಟ್ಟು ನನಗೆ ಕೈಕೊಡು, ಶಿರಗ್ರಂತು ಗಳಿಗೆ ನಿಶ್ಚಯವಾದ ನಂಬುಗೆಯನ್ನು ನಾನೀಗ ನೋಡಿದೆನು ನೀನು ಅನೇಕ ಸುಗುಣಗಳನ್ನುಳ್ಳವನು. ನಿನ್ನೊಡನೆ ಸ್ನೇಹವನ್ನು ಅಗತ್ಯ ವಾಗಿ ಮಾಡಬೇಕು. ದುಷ್ಯನಾದವನು ಅಸೂಯೆಯಿಂದ ಸಜ್ಜನನನ್ನು ಬೈದರೂ ಅವನು ಗರ್ವವಿಲ್ಲದವನಾದುದರಿಂದ ಆ ಬೈಗುಳಿಂದ ಒಂದು ವಿಕಾರವನ್ನೂ ಹೊಂದನು, ತೃಣಾಗ್ನಿಯನ್ನು ಹಾಕಿದ ಮಾತ್ರದಿಂದಲೇ ಸಮುದ್ರದ ನೀರು ಬೆಚ್ಚಗೆ ಆದಿತೋ ?-ಎಂದು ಬಹುಪ್ರಕಾರವಾಗಿ ನುಡಿದನು. ಹಿರಣ್ಯಕನು-ನೀನು ಚಪಲಚಿತ್ತನು. ಇತರರನ್ನು ಕಾಪಾಡುವ ಶಕ್ತಿ ನಿನಗೆ ಹೇಗೆ ಉಂಟಾದೀತು ? ಚಪಲನಾದವನು ಸಕಲಕಾರಗಳನ್ನೂ ಕೆಡಿಸುವನು. ಆದುದರಿಂದ ನಿನಗೂ ನನಗೂ ಗೆಳತನವಾಗಲಾರದು-ಎಂದು ಹೇಳಿದನು. ಅದಕ್ಕೆ ಲಘುಪತನ