ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

72 `Q M ಚ ಪಂಚತಂತ್ರ ಕಥೆಗಳು. ಸಂಭವಿಸೀತು. ಆದಕಾರಣ ದುಪ್ಪರಿಂದ ಭಯವುಂಟು-ಎಂದು ನುಡಿಯಿತು, ಅದನ್ನು ಕೇಳಿ ಕಾಗಿಯು -ನೀನು ನುಡಿದ ನೀತಿ ವಾಕ್ಯಗಳ ನ್ನೆಲ್ಲಾ ತಿಳಿದುಕೊಂಡೆನು. ಸರ್ವಪ್ರಯತ್ನದಿಂದಲೂ ನಾನು ನಿನ್ನೆ ಡನೆ ಸ್ನೇಹಿಸಬೇಕು. ನನ್ನನ್ನು ಇಷ್ಮನಾಗಿ ಕೈಕೊಳ್ಳು ; ಇಲ್ಲವೇ ನಾನು ಆಹಾರವನ್ನು ತಿನ್ನದೆ ದೇಹವನ್ನು ಬಿಡುವೆನು. ದ್ರವತ್ಯಾತರಲೋಹಾನಾಂ ನಿಮಿತ್ತಾಗ ಪಕ್ಷಣಾಂ | . ಭಯಾಕ್ಷೀಭಾಷ್ಟ್ರ ಮೂರ್ಖಾಣಾಂ ಸಂಗತಂ ದರ್ಶನಾತ್ಸತಾಂ || ಕರಗಿದರೆ ಲೋಹವೆಲ್ಲಾ ಒಂದಾಗಿ ಕೊಡುವುದು. ನಿಮಿತ್ತ ದಿಂದ ಮೃಗಗಳಾದ ಪಕ್ಷಿಗಳಾದರೂ ಸೇರಿಕೊಳ್ಳುವುವು. ಭಯ ದಿಂದಾದರೂ ಲೋಭದಿಂದಾದರೂ ದುಷ್ಮನು ಸ್ನೇಹಮಾಡುವನು; ದರ್ಶನಮಾತ್ರದಿಂದಲೇ ಸತ್ಪುರುಷನು ಸ್ನೇಹಮಾಡುವನು, ದುರ್ಜ ನನ ಸ್ನೇಹವು ಮಣ್ಣು ಮಡಿಕೆಯ ಹಾಗೆ ಸುಲಭವಾಗಿ ಒಡೆಯಲಾಗ ತಕ್ಕುದಾಗಿಯೂ, ಮರಳಿ ಬೆಸೆಯಕೂಡದುದಾಗಿಯೂ ಇರುತ್ತದೆ; ಸುಜ ನನ ಸ್ನೇಹವು ಚಿನ್ನದ ಬಿಂದಿಗೆಯ ಹಾಗೆ ಒಡೆಯಲಾಗದುದಾಗಿಯೂ, ತಿರುಗಿ ಬೆಸೆಯಲಾಗುವುದಾಗಿಯೂ ಇರುತ್ತದೆ ಎಂದು ಹೇಳಿತು, ಅದಕ್ಕೆ ಹಿರಣ್ಯಕನು-ನಾನು ನಿನಗೆ ಎಷ್ಟು ಹೇಳಿದರೂ ಬಿಡದೆ ನನಗೆ ಅಗತ್ಯವಾಗಿ ಸ್ನೇಹವಾಗಬೇಕೆಂದು ಹೇಳುತ್ತೀಯೆ, ನನಗೆ ಸಂತೋಷ ವಾಯಿತು. ನಿನ್ನ ಮಾತಿಗೆ ನಾನು ಸಮ್ಮತಿಸಿದೆನು. ತನಗೆ ಒಂದು ಉಪಕಾರ ಮಾಡಿದುದರಿಂದ ಮಿತ್ರನೆಂದೂ, ಅಪಕಾರ ಮಾಡಿದುದರಿಂದ ಶತ್ರುವೆಂದೂ ಎಣಿಸಕೂಡದು. ಉಪಕಾರಾಪಕಾರಗಳು ಮಿತ್ರ ಶತ್ರು ಗಳಿಗೆ ಲಕ್ಷಣಗಳಲ್ಲವು; ದೋಷವಿಲ್ಲದೆ ಇರುವುದು ಮಿತ್ರ ಶಿಕ್ಷಣ, ದೋಷವುಂಟಾಗಿರುವುದು ಶತ್ರುಲಕ್ಷಣ-ಎಂದು ನುಡಿದನು. ಆಮೇಲೆ ಇಲಿಯ ಕಾಗೆಯೂ ಪರಸ್ಪರಸ್ನೇಹದಿಂದ ಒಂದಾದುವು. ತರುವಾಯ ಹಿರಣ್ಯಕನು ಕಾಗೆಯನ್ನು ತೃಪ್ತಿಪಡಿಸಿ ಕಳುಹಿಸಿಕೊಟ್ಟು ತನ್ನ ಮನೆಗೆ ಹೋದನು. ಕಾಗೆಯ ಸ್ವಸ್ಥಾನಕ್ಕೆ ತಲಪಿತು. ಅನಂತರ