ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

74 ಪಂಚತಂತ್ರ ಕಥೆಗಳು, ವಿಸಿ, ತಕ್ಕ ಸತ್ಕಾರವನ್ನು ಶೀಘ್ರವಾಗಿ ಮಾಡಿ ಸ್ನೇಹಿತನನ್ನು ನೋಡಿಎಲೈ ಮಿತ್ರನೇ, ಈ ಇಲಿ ಎಲ್ಲಿಯದು? ಇದನ್ನು ಇಲ್ಲಿಗೆ ಏಕೆ ತಂದೆ? --- ಎಂದು ಕೇಳಿದನು. ಅದಕ್ಕೆ ಕಾಗೆಯು ಕರ್ಮವನ್ನು ನೋಡಿ ಮಿತ್ರನೇ, ಈತನು ಹಿರಣ್ಯಕನೆಂಬ ಮೂಷಿಕರಾಜನು, ನನ್ನ ಸ್ನೇಹಿತನು, ದೈವವಶದಿಂದ ಈತನಿಗೆ ಒಂದು ವ್ಯಸನವು ಸಂಪ್ರಾಪ್ತವಾಯಿತು. ಆದುದರಿಂದ ನಿನ್ನನ್ನು ನೋಡ ಬಂದನು. ಚಾತುರವುಳ ನಿನ್ನ ಮಾತುಗಳಿಂದ ಈತನ ದುಃಖವನ್ನು ಶಮನಮಾಡು. ಸಾವಿರ ಮುಖಗಳುಳ್ಳ ಶೇಷನೂ ದೇವಗುರುವಾದ ಬೃಹಸ್ಪತಿಯ ಈತನ ಸುಗುಣಗಳನ್ನು ಎಣಿಸ ಲಾರರು. ಆಮರಣಾಂತಾಃ ಪ್ರಣಯಾತಿ ಕೋಶಾಸ್ತಶಿಕ್ಷಣಭಂಗುರಾಃ | ಪರಿತ್ಯಾಗಾಶ್ಚ ನಿಸ್ಸಂಗಾ ಭವಂತಿ ಹಿ ಮಹಾತ್ಮನಾಂ || ಸ್ನೇಹವನ್ನು ಬಹುಕಾಲ ಬೆಳಯಿಸುವುದೂ ಕೋಪವನ್ನು ಕ್ಷಣ ದಲ್ಲಿ ಬಿಡುವುದೂ ನಿಸ್ಸ೦ಗನಂತೆ ದಾನಮಾಡುವುದೂ ಮಹಾತ್ಮರ ಗುಣ ಗಳು -ಎಂದು, ಮತ್ತೂ ಚಿತ್ರಗ್ರೀವನ ವೃತ್ತಾಂತ ಮೊದಲುಗೊಂಡು ಹಿರಣ್ಯಕನ ಗುಣಗಳನ್ನೆಲ್ಲಾ ತಿಳಿಸಿ, ಆ ಮೇಲೆ ತನಗೂ ಆತನಿಗೂ ನಡೆದ ಸ್ನೇಹವನ್ನು ಸವಿಸ್ತಾರವಾಗಿ ಹೇಳಿ,-ಈತನನ್ನು ನನಗಿಂತ ಇಸ್ಮನಾದ ಸಖನನ್ನಾಗಿ ಕೈಕೊಳ್ಳು-ಎಂದು ಅವನನ್ನು ಕರ್ಮ ರಾಜನಿಗೆ ಒಪ್ಪಿಸಿತು. ಆಗ ಕೂಲ್ಕರಾಜನು ಬಹಳ ಆಶ್ಚ ರಪಟ್ಟು ಹಿರಣ್ಯಕನನ್ನು ನೋಡಿ,--ಎಲೈ ದೊರವೆಂದು ವಿಚಾರಿಸದೆ ನಿರ್ಜನ ವಾದ ಈ ವನಕ್ಕೆ ಬರುವುದಕ್ಕೆ ಕಾರಣವೇನು ? ಸವಿಸ್ತಾರವಾಗಿ ಹೇಳುಎನಲು, ಹಿರಣ್ಯಕನಿಂತೆಂದನು. The Story of Chúdákarna and Hiranyaka. ಒಂದು ಪಟ್ಟಣದ ಹೊರಗೆ ಬಂದು ಮಠವುಂಟು. ಅದರಲ್ಲಿ ಚೂಡಾಕರ್ಣನೆಂಬ ಸಂನ್ಯಾಸಿ ವಾಸಮಾಡುತ್ತಿದ್ದನು. ಆತನು ನಿತ್ಯವೂ ಬ್ರಾಹ್ಮಣರ ಮನೆಗಳಿಗೆ ಹೋಗಿ ಭಿಕ್ಷವ ತಂದು ಅನ್ನವನ್ನು ಮಠ