ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76. ಸುಹೃಲ್ಲಾಭವು. ದಲ್ಲಿ ಊಟಮಾಡಿ ಮಿಕ್ಕ ಅನ್ನವನ್ನು ಒಂದು ಪಾತ್ರದಲ್ಲಿ ಇಟ್ಟು ನಿದ್ದೆ ಹೋಗುತ್ತಿದ್ದನು. ನಾನದನ್ನು ತಿಂದು ತೃಪ್ತಿ ಹೊಂದುತ್ತಿದ್ದೆನು. ಹೀಗಿರಲಾಗಿ ಒಂದು ದಿನ ಮತ್ತೊಬ್ಬ ಸಂನ್ಯಾಸಿ ಎಂದು ಅವನ ಸಂಗಡ ನಾನಾವಿಧವಾಗಿ ಪುಣ್ಯಕಥೆಗಳನ್ನು ಮಾತನಾಡುತ್ತಿದ್ದನು. ಆಗ ನಾನು ಅನ್ನವನ್ನು ತಿನ್ನಬೇಕೆಂದು ಪ್ರಾತ್ರದ ಹತ್ತಿರಕ್ಕೆ ಹೋಗಲು, ಚೂಡಾ ಕರ್ಣನು ಕೋಲಿನಿಂದ ನನ್ನನ್ನು ಬೆದರಿಸಿ ಅಟ್ಟಿಬಿಡುತ್ತಿದ್ದನು. ಆ ಸಮಯದಲ್ಲಿ ಆ ಇನ್ನೊಬ್ಬ ಸಂನ್ಯಾಸಿ ಚೂಡಾಕರ್ಣನನ್ನು ನೋಡಿಈಗ ನಾನೇನು ಹೇಳಿದೆನು, ನೀನೇನು ಕೇಳಿದೆ ? ನಿನ್ನ ಮನಸ್ಸು ಬೇರೆ ಹೋದಹಾಗೆ ಇದೆ. ಅದು ಏತರಿಂದ ? ಎಂದು ಕೇಳಿದನು. ಚೂಡಾಕರ್ಣನು--ನೀನು ಹೇಳುತ್ತಿದ್ದ ಕಥೆಗಳ ಮೇಲೆ ನನ್ನ ಮನಸ್ಸು ಸಾವಧಾನವಾಗದೆ ಇರುವುದು ನಿಜವೇ, ಅದನ್ನು ನೀನು ತಿಳಿದುಕೊಂಡೆ. ಅದಕ್ಕೆ ಕಾರಣವನ್ನು ಹೇಳುತ್ತೇನೆ, ಕೇಳು:-ಒಂದಿಲಿಯು ಪ್ರತಿದಿನವೂ ನನ್ನ ಅನ್ನವನ್ನು ತಿಂದು ಹೋಗುತ್ತದೆ. ಇದರಿಂದ ನಾಸೀ ಮಠವನ್ನು ಬಿಡಬೇಕಾಗಿ ಬಂದಿದೆ. ನನ್ನ ಮನಸ್ಸು ಸಾವಧಾನವಾಗದೆ ಇರುವುದಕ್ಕೆ ಇದೇ ಕಾರಣ-ಎಂದು ನುಡಿದನು. ಈ ಮಠದಲ್ಲಿ ಒಂದೇ ಇಲಿ ಯುಂಟೋ, ಅನೇಕ ಇಲಿಗಳು ಉಂಟೋ ? -ಎಂದು ಆತನು ಕೇಳಿ ದನು. ( ಅನೇಕ ಇಲಿಗಳಿಲ್ಲ, ಒಂದೇ ಇಲಿ ಇದೆ,' ಎಂದು ಕೂಡಾ ಕರ್ಣನು ಹೇಳಿದನು. ಅದಕ್ಕೆ ಆ ಸಂನ್ಯಾಸಿ-ಇದು ಒಂದೇ ಈ ಮಠ ದಲ್ಲಿ ಇರಲಿಕ್ಕೆ ಏನೋ ಕಾರಣವಿರಬೇಕು. ಶಾಂಡಿಲಿಮಾತಾ ಎಂಬ ಹೆಂಗಸು ಉಜ್ಜಿ ಒಣಗಿಸಿದ ಬಿಳಿಯಳ್ಳಿಗೆ ಸರಿಯಾಗಿ ಬರಿಯಳನ್ನು ಕೇಳಲು, ಅವರ ಕಾರಣವನ್ನು ಒಬ್ಬ ಬ್ರಾಹ್ಮಣನು ತಿಳಿದುಕೊಂಡಂತೆ ಇಲಿಯು ಇಲ್ಲಿ ಒಂಟಿಯಾಗಿ ಇರಲಿಕ್ಕೆ ಕಾರಣವನ್ನು ನಾವು ತಿಳಿದುಕೊಳ್ಳ ಬೇಕು-ಎನಲು, ಚೂಡಾಕರ್ಣನು-ಆ ಕಥೆಯನ್ನು ಸಾಂಗವಾಗಿ ಹೇಳಂದನು. ಇನ್ನೊಬ್ಬ ಸಂನ್ಯಾಸಿ ಹೇಳುತ್ತಾನೆ ಚಿಕ್ಕು ನಾನೊಬ್ಬ ಬ್ರಾಹ್ಮಣನ ಮನೆಗೆ ಭಿಕ್ಷಕ್ಕೋಸ್ಕರ ಹೋಗಿರಲಾಗಿ, ಆ ಮನೆಯ ಬ್ರಾಹ್ಮಣನು ಹೆಂಡತಿಯನ್ನು ನೋಡಿ