ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲಾಭವು. 77 ಬೇಟೆಗಾರನನ್ನು ಒಂದು ತಿಂಗಳು ತಿನ್ನು ವೆನು ; ಹಂದಿ ಮೃಗಗಳನ್ನು ಎರಡು ತಿಂಗಳು ಭಕ್ಷಿಸುವೆನು ; ಈ ಬಿಲ್ಲಿನ ನಾರಿಯನ್ನು ಈ ದಿವಸಕ್ಕೆ ಆಹಾರ ಮಾಡಿಕೊಳ್ಳುವನು-ಎಂದು ಆಲೋಚಿಸಿ, ಮುಂಚೆ ಬೆಸ್ತನು ಏರಿಸಿಯಿದ್ದ ಬಿಲ್ಲಿನ ತುದಿಯನ್ನು ಎದೆಗೆ ಆನಿಸಿಕೊಂಡು ನಾರಿಯನ್ನು ಕಚ ಲು, ಆ ತುದಿಯು ಪೆಟ್ಟು ತಗುಲಿ ನರಿ ಸತ್ತಿತು. ಆದುದರಿಂದ ಅತಿಲೋಭಿಯಾದವನು ಮುಂದೆ ಬರುವ ಕೇಡನ್ನು ತಿಳಿದುಕೊಳ್ಳಲಾ ರನು, ತುಂಬ ಕೂಡಹಾಕಬೇಕೆಂದೆಣಿಸದೆ ಅತ್ಯಾವಶ್ಯಕವಾದ ಪದಾ ರ್ಥಗಳನ್ನು ಸ್ವಲ್ಪಸ್ವಲ್ಪ ಮಿಗಿಸಿಡದೆ ಇದ್ದರೆ ಆ ಸಂಸಾರವು ಮುಂದಕ್ಕೆ ಬಂದೀತೇ ?-ಎಂದನು. A strange Bargain. ಅದಕ್ಕೆ ಹೆಂಡತಿಯು-ಎಳ್ಳ ಅಕ್ಕಿಯ ಸ್ಪಲ್ಪ ಕೂಡಿಟ್ಟಿ ಗೈನೆ, ನಾಳೆ ತಿಲಾನ್ನವನ್ನು ಮಾಡುತ್ತೇನೆ ಎಂದು, ಎಳನ್ನು ಚೆನ್ನಾಗಿ ತೊಳೆದು ಒಣಹಾಕಿದಳು, ಆಗ ಒಂದು ಕೋಳಿ ಬಂದು ಆ ಎಳನ್ನು ಕಾಲಿನಿಂದ ಕೆದಕಿತು. ಆ ಬ್ರಾಹ್ಮಣನು ಅದನ್ನು ನೋಡಿ - ಬ್ರಾಹ್ಮಣಭೋಜನಕ್ಕೆ ಈ ಎಳ್ಳು ಸರಿ ಬೀಳದು; ಆದುದರಿಂದ ಇದನ್ನು ಯಾರಿಗಾದರೂ ಕೊಟ್ಟು ಬೇರೆ ಎಳು ತಾ-ಎಂದು ಹೇಳಿದನು. ಆ ಬ್ರಾಹ್ಮಣ ಮಾರನೆಯ ದಿನ ನಾನು ಭಿಕಕ್ಕೆ ಹೋಗಿದ್ದ ಮನೆಗೆ ಬಂದು, ' ಉಜ್ಜಿದ ಎಳ್ಳು ತೆಗೆದುಕೊಂಡು ಉಣ್ಣದ ಎಳ್ಳು ಕೊಡು ತೀರಾ ? ' ಎಂದು ಮನೆಯವರನ್ನು ಕೇಳಿದಳು. ಆ ಮನೆಯ ಹೆಂಗಸು ಈ ಮಾತು ಕೇಳಿ ಸಂತೋಷಿಸಿ ಒಳಗಿನಿಂದ ಎಳ್ಳು ತೆಗೆದುಕೊಂಡು ಬಂದು ಅದಕ್ಕೆ ಬದಲಾಗಿ ಉಜ್ಜಿದ ಎಳ್ಳು ತೆಗೆದುಕೊಳ್ಳುತ್ತಿರುವ ಸಮ ಯದಲ್ಲಿ, ಆ ಮನೆಯ ಬ್ರಾಹ್ಮಣನು ಬಂದು --ಏನು ಬೇರವನ್ನು ಮಾಡುತ್ತೀಯೆ ? -ಎಂದು ಹೆಂಡತಿಯನ್ನು ಕೇಳಿದನು. ' ಬಗಸೆ ಎಳ್ಳುಕೊಟ್ಟ ಅಪ್ಪು ಉಬ್ಬಿದ ಎಳ್ಳು ಮಾರಿಸಿಕೊಳ್ಳುತ್ತೇನೆ' ಎಂದು ಅವಳು ನುಡಿದಳು, “ಎಲೇ ಹುಚ್ಚಳ, ಸೇರೆ ಎಳ್ಳು ತೆಗೆದುಕೊಂಡು ಅಷ್ಟು ಉಜ್ಜಿದ ಎಳ್ಳು ಕೊಡುವವರು ಎಲ್ಲಾದರೂ ಉಂಟೆ ?