ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78, ಪಂಚತಂತ್ರ ಕಥೆಗಳು ಈಕೆ ಹೀಗೆ ಕೊಡುವುದಕ್ಕೆ ಏನೋ ಕಾರಣವಿರಬೇಕು' ಎಂದು ಗಂಡನು ಹೇಳಿದನು. ಅದಕ್ಕೆ ಮುಂಚೆಯೇ ನಾನು ಅವರ ಮನೆಗೆ ಭಿಕಕ್ಕೆ ಹೋಗಿದ್ದೆನಾದುದರಿಂದ ಈ ಮಾತು ನನ್ನ ಕಿವಿಗೆ ಬಿದ್ದಿತು. ಈ ಇಲಿಯು ಕಾರಣವಿಲ್ಲದೆ ಇಲ್ಲಿ ಇರಲಾರದು-ಎಂದು ಸಂನ್ಯಾಸಿ ಹೇಳಿದನು. ಅದನ್ನು ಕೇಳಿ ಚೂಡಾಕರ್ಣನು ಒಂದು ಗುದ್ದಲಿಯನ್ನು ತೆಗೆದು ಕೊಂಡು ನಾನು ವಾಸವಾಗಿದ್ದ ಬಿಲವನ್ನು ಅಗೆದು, ಬಹುಕಾಲದಿಂದ ನಾನು ಕೂಡಹಾಕಿದ್ದ ಧನವನ್ನೆಲ್ಲಾ ತೆಗೆದುಕೊಂಡನು. ಬಳಿಕ ನಾನು ಧನವಿಲ್ಲದವನಾದುದರಿಂದ ಬಲ ಕುಗ್ಗಿ ಉತ್ಸಾಹ ತಪ್ಪಿ ಆಹಾರ ಸಹ ಸಂಪಾದಿಸಲಾರದೆ ಹಸಿವಿನಿಂದ ಬಹಳ ಸಂಕಟಪಡುತ್ತಾ ಮರಳಿ ಭಿಕ್ಷಾ ಪಾತ್ರವನ್ನು ಅಲ್ಲಾಡಿಸಲಾಗಿ, ಚೂಡಾಕರ್ಣನು ನನ್ನನ್ನು ನೋಡಿಧನವನ್ನೆಲ್ಲಾ ತೆಗೆದುಕೊಂಡರೂ ನಾಚಿಕೆಯಿಲ್ಲದೆ ತಿರುಗಿ ನನ್ನ ಭಿಕ್ಷಾ ಪಾತ್ರವನ್ನು ಹೇಗೆ ಕದಲಿಸುತ್ತದೆ ಎಂದು ನುಡಿದನು. ಆ ಮೇಲೆ ನಾನು ಮೆಲ್ಲಮೆಲ್ಲಗೆ ಆಚೆ ಹೋದೆನು. ಆಗ ಆತನು ಇಂತೆಂದನು. The power of wealth. ಅರ್ಥೆನ ಪರಿಹೀನಸ್ಯ ಪುರುಷಸ್ಯಾಲ್ಪಮೇಧಸಃ || ಕ್ರಿಯಾಸ್ಪದ್ಯಾ ವಿನಶ್ಯಂತಿ ಗ್ರೀಷ್ಮೆ ಕುಸುತೋ ಯಥಾ || ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ಯ ಬಾಂಧವಾಃ | ಯಸ್ಯಾರ್ಥಾಸ್ಪಪುರ್ವಾ ಲೋಕೇ ಯಸ್ಯಾರ್ಥಾಸ್ಪತು ಪಂಡಿತಃ || ಧನವುಳವನೇ ಬಲವಂತನು, ಧನವುಳ್ಳವನೇ ಪಂಡಿತನು, ಧನವಿ ಲ್ಲದುದರಿಂದ ಈ ಇಲಿ ತನ್ನ ಜಾತಿಯೊಂದಿಗೆ ಸಾಮ್ಯವನ್ನು ಹೊಂದಿತು ನೋಡು, ದರಿದ್ರನೂ ಬುದ್ಧಿಹೀನನೂ ಆದವನ ಕಾರಗಳು ಬೇಸಗೆ ಯಲ್ಲಿ ಕಾಲುಹೊಳಗಳು ಬತ್ತಿ ಹೋಗುವ ಹಾಗೆ ಕೊನೆಸಾಗುವುದಿಲ್ಲವು. ಧನವುಳ್ಳವರಿಗೆ ಸ್ನೇಹಿತರು ನಿಕ್ಕುವರು, ಧನವುಳ್ಳವನ ಹತ್ತಿರಕ್ಕೆ ನಂಟರು ಬರುವರು, ಧನವುಳ್ಳವನೇ ಗಂಡಸು, ಧನವುಳ್ಳವನೇ ತಿಳಿದವನು. ನಂಟರಿಂದ ದೇಶವೂ, ಗಂಡುಮಕ್ಕಳಿಲ್ಲದ ಮನೆಯ, ಮೂರ್ಖನ