ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲ್ಲಾಭವು. 79 ಮನಸೂ ತನ್ನಗಳು, ಹೀನದತೆಯಿಂದ ವರ್ತಿಸುವ ದರಿದ್ರನು ಅದ ಕ್ಕಿಂತಲೂ ಶೂನೃನು, ವಿಕಲವಾಗದ ಇಂದ್ರಿಯಗಳೂ, ಅಪ್ರತಿಹತ ವಾದ ಬುದ್ದಿಯ, ಚತುರವಾದ ವಾಕ್ಯಪದ್ದತಿಯ, ಪ್ರಸಿದ್ಧವಾದ ಹೆಸರೂ, ಮುಂಚಿನವಾದರೂ ಮನುಷ್ಯನು ಧನವನ್ನು ಕಳೆದುಕೊಂ ಡಾಗ ಕ್ಷಣದಲ್ಲಿ ಅನ್ನನಾಗುತ್ತಾನೆ. ಇದು ಬಹಳ ಆಕ್ಷರ-ಎಂದು ಚೂಡಾಕರ್ಣನು ಹೇಳಲು ಇನ್ನು ಮೇಲೆ ಇಲ್ಲಿರಕೂಡದು, ಮ ತ್ತೊಂದು ಸ್ಥಳಕ್ಕೆ ಹೋಗಬೇಕು ಎಂದು ನನಗೆ ತೋರಿತು. @ 7. ಮಾನಕ್ಕೆ ಹಾನಿಯಿಲ್ಲದ ತಾಪಿನಲ್ಲಿ ಇರಬೇಕು, ಮಾನಕ್ಕೆ ಹಾನಿ ಯಾಗುವ ಸ್ಥಳದಲ್ಲಿ ಇರಕೂಡದು. ದೇವತೆಗಳೊಡನೆ ವಿಮಾನ ಸಿಕ್ಕಿ ದರೂ, ಅದು ಮಾನಹಾನಿಕರವಾದರೆ ಅದನ್ನು ಬಿಟ್ಟುಬಿಡಬೇಕು. ಮುಂಚೆ ನಾನಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ಬಂದರೂ ನಾನು ಒಬ್ಬ ರನ್ನು ಕೇಳಲಾರೆನು. ಒಬ್ಬರನ್ನು ಕೇಳುವವನು ಜೀವನ ತನು. ಅದು ಹೇಗೆಂದರೆ, ಕೇಳಹೋಗುವಾಗ ಕಾಲು ತಡೆವುದು, ಮೈ ನಡಗುವುದು, ಬೆವರು ಸುರಿವುದು, ತುಂಬ ಭಯವುಂಟಾಗುವುದು. ಇಂಥ ದುರವಸ್ಥೆಗಳೊಂದಿಗೆ ಕೇಳುವ ಯಾಚಕನಿಗೆ ಮರಣಕಾಲದಲ್ಲಿ ಸಂಭವಿಸುವ "ಚಿಹ್ನೆಗಳಲ್ಲಾ ಉಂಟಾಗುವುವು. ಅರ್ಥಹೀನನಾಗಿ ಇರುವುದಕ್ಕಿಂತ ಅಗ್ನಿ ಪ್ರವೇಶಮಾಡಿ ಪ್ರಾಣಬಿಡುವುದು ಮೇಲು. ಉಪಚಾರದ ಮಾತುಗಳಿಂದ ಲೋಭಿಯನ್ನು ಕೇಳುವುದು ಒಳ್ಳೆಯದಲ್ಲ. ಬಡತನದಿಂದ ನಾಚಿಕೆಯುಂಟಾಗುವುದು, ನಾಚಿಕೆಯಿಂದ ಸತ್ತವು ಶಿಥಿಲ ವಾಗುವುದು, ಸತ್ವವಿಲ್ಲದರಿಂದ ತಿರಸ್ಕಾರ ಬರುವುದು, ತಿರಸ್ಕಾರದಿಂದ ಬೇಸರ ಹುಟ್ಟುವುದು, ಬೇಸರದಿಂದ ದುಃಖ ಸಂಭವಿಸುವುದು, ದುಃಖದಿಂದ ಬುದ್ದಿ ಕೆಟ್ಟು ಹೋಗುವುದು, ಬುದ್ಧಿ ಹೀನನಾದುದರಿಂದ ಕೀರ್ತಿ ನಶಿಸು ವುದು, ಅಪಕೀರ್ತಿ ಬರುತ್ತಲೇ ಎಲ್ಲರೂ ಹಾಸ್ಯಮಾಡುವರು. ಆದಕಾ ರಣ ನಿರರ್ಥಕನಾದವನು ಈ ವಿಪತ್ತುಗಳಿಗೆಲ್ಲಾ ಗುರಿಯಾಗುವನು. ಅವನನ್ನು ಯಾರೂ ಲಕ್ಷ್ಯಮಾಡರು-ಎಂದು ಹಿರಣ್ಯಕನು ನುಡಿದು ಮತ್ತೂ ಇಂತೆಂದನು.