ವಿಷಯಕ್ಕೆ ಹೋಗು

ಪುಟ:ಪಂಡಿತರಾಜ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, ..., , , , , , , , , ಗದ್ಯದಿಂದಲೂ “ ತೈಲಂಗಾನ್ವಯ ಮಂಗಲಾಲಯ ಮಹಾಲಕ್ಷ್ಮೀದಯಾಲಾಲಿತಃ ” ಎಂದು ಪ್ರಾಣಾಭರಣ ಕಾವ್ಯದಲ್ಲಿ ಹೇಳಿರುವ ಈ ಪದ್ಯಭಾಗದಿಂದಲೂ ಗೊತ್ತಾಗುವದು. ಕೆಲವರು ತೈಲಂಗವೆಂಬುವದು ಕುಲನಾಮವೆನ್ನುವರು ; ಹಾಗಾದರೆ ವೇಗಿನಾಡಕುಲದ ವನು ಎಂಬ ಮುಂದಿನ ವಚನಕ್ಕೆ ಬಾಧೆಬರುತ್ತದೆಂದರೆ ತೈಲಂಗಕುಲಾಂತರ್ಭೂತವಾದ ವೇಗಿನಾಡ ಕುಲವೆಂದು ಹೇಳಿ ಬಾಧೆ ಇಲ್ಲದಂತೆ ಮಾಡುವರು. ಜಗನ್ನಾಥನ ಜನ್ಮಭೂಮಿ ನಿಶ್ಚಯವಾಗಿ ತಿಳಿಯದಿದ್ದರೂ ಅವನ ಪೂರ್ವಜರ ನಿವಾಸಿಷ್ಠಾನವು ತೈಲಂಗಪ್ರದೇಶ ಎಂದು ಸಿದ್ಧವಾಗುವದು, ನಿರ್ಣಯನಾಗರ ಮುದ್ರಾಲಯದ ಪಂಡಿತರು ಕಾವ್ಯಮಾಲೆ ಯಲ್ಲಿ ಈ ಪಂಡಿತನು ತೆಲಂಗಾವ್ಯಾಖ್ಯವಾದ ಕುಲಗಳೊಳಗಿನ ವೇಗಿನಾಡ ಸಂಕುಲ ದಲ್ಲಿ ಹುಟ್ಟಿದನು ಎಂದು ಹೇಳಿರುವರು. - ಇವನ ತಂದೆ ಸಮಸ್ತ ಪಂಡಿತಮಂಡಲೀಮುಂಡನನಾದ ಪೇರನ (ಪೇರು ) ಭಟ್ಟ ನೆಂಬವನು. ಇವನು ಅತಿ ಪ್ರಶಂಸನೀಯನಾದ ಅಧ್ಯಾಪಕನಾಗಿದ್ದನು. ಇವನ ವೈದುಷ್ಯಾ ದಿ ವಿಷಯದಲ್ಲಿ ರಸಗಂಗಾಧರವೆಂಬ ಗ್ರಂಥದ ಆರಂಭದಲ್ಲಿ ಪಂಡಿತರಾಜನು ಅನ್ನು ದೇ ನಂದರೆ:- श्रीमदज्ञानेंद्रभिक्षोधिगतसकलब्रह्मविद्याप्रपंचः ॥ काणादीराक्षपदीपि गहनगिरो यो महेंद्रादवदीत् ।। देवादेवाध्यगीष्ट स्मरहरनगरे शामनं जैमिनोयं ।। शेषांकपातशेषाहृयभणितिरभूत्सर्वविद्याधरो यः ।। ವಾರಾಣಸೀನಗರದಲ್ಲಿ ಜ್ಞಾನೇಂದ್ರಭಿಕ್ಷುವಿನಿಂದ ವೇದಾಂತಶಾಸ್ತ್ರವನ್ನೂ ಮಹೇಂದ್ರ ಪಂಡಿತನಿಂದ ನ್ಯಾಯವೈಶೇಷಿಕ ದರ್ಶನಗಳನ್ನೂ ಖಂಡದೇವನಿಂದ ಪೂರ್ವ ಮೀಮಾಂಸೆ ಯನ್ನೂ ಶೇಷೋಪಾಹ್ವವೀರೇಶ್ವರ ಪಂಡಿತನಿಂದ ಪಾತಂಜಲ ಮಹಾಭಾಷ್ಯವನ್ನೂ ಕಲಿತು ಯಾವನು ಸರ್ವ ವಿದ್ಯಾಧರನಾಗಿದ್ದನೋ पाषाणादपि पीयूषं स्पंदते यस्य लीलया ।। तं वंदे पेरुभट्टाख्यं लक्ष्मीकांत महागुरुम् ।।। ಮತ್ತು ಯಾವನ ಲೀಲೆಯಿಂದ ವಾಷಾಣದಿಂದ ( ಮೂರ್ಖನಿಂದ ) ಕೂಡ ಅಮೃತವು (ಸರಸಸರಸ್ವತಿಯು) ಹೊರಡುವದೋ, ಅಂಥಹ ಲಕ್ಷ್ಮೀಕಾಂತನಾದ ನನ್ನ ತಂದೆಯನ್ನು ( ಪೇರಮಭಟ್ಟನನ್ನು ) ನಮಿಸುವೆನು. • ಪಾಷಾಣಾದಪಿ ' ಎಂಬ ಶ್ಲೋಕದಿಂದ ಪೇರುಭ ಟೈನು ಉತ್ತಮ ಅಧ್ಯಾಪಕನಾಗಿದ್ದನೆಂದು ತಿಳಿಯುವದು. ಮತ್ತು ಇದೇ ಪದ್ಯದಲ್ಲಿದ್ದ ಮಹಾಗುರುಪದದಿಂದ ಜಗನ್ನಾಥನು ತಂದೆಯ ಬಳಿಯ ಲ್ಲಿಯೇ ಪ್ರಾಯಃ ಎಲ್ಲ ಶಾಸ್ತ್ರಗಳನ್ನು ಕಲಿತನೆಂದು ಗೊತ್ತಾಗುವದು. ಮನೋರಮಾಕು