ಪುಟ:ಪಂಡಿತರಾಜ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ಚಮರ್ದನ ಗ್ರಂಥದಲ್ಲಿ ತನ್ನ ತಂದೆಯ ಗುರುವಾದ ಶೇಷೋಪಾದ್ಧ ವೀರೇಶ್ವರ ಪಂಡಿತನಲ್ಲಿ ಕಿಂಚಿತ್ತು ಅಧ್ಯಯನ ಮಾಡಿದ್ದನೆಂದು ಹೇಳಲ್ಪಟ್ಟಿದೆ. ಉಪರಿತನ ಪದ್ಯದಲ್ಲಿ ನಿರ್ದಿಶ್ಯಮಾ ನರಾದ ಜ್ಞಾನೇಂದ್ರಭಿಕ್ಷು, ಮಹೇಂದ್ರ, ಮೊದಲಾದ ವಿದ್ವಾಂಸರ ಕಾಲವು ನೆಟ್ಟಗೆ ಗೊತ್ತಾಗುವದಿಲ್ಲ. ಸುಶಿಕ್ಷಿತನಾದ ಪೇರಮಭಟ್ಟನ ಪ್ರಭಾವವನ್ನು ಎಷ್ಟೆಂದು ವರ್ಣಿಸುವ; ಆ ಮಹಾ ಮಹಿಮನ ಪ್ರಭಾವದಿಂದಲೇ ಅಶೇಷ ಪಂಡಿತ ಜನರ ಗರ್ವವನ್ನು ಹರಣಮಾಡಲು ಸಮ ರ್ಥನಾದ ಜಗನ್ನಾಥನು ಉಂಟಾಗಲಿಲ್ಲವೇ? ಈ ಪೇರಭಟ್ಟನಿಗೆ ಪುರಂದ್ರೀಗಣದಿಂದ ವಂದನೀಚರಿತ್ರೆಯಾದ ಮೂರ್ತಿವಂತಳಾದ ಲಕ್ಷ್ಮಿಯೇ ಎನ್ನುವಂತೆ ಲಕ್ಷ್ಮಿಯೆಂಬ ಹೆಸ ರಿನ ಹೆಂಡತಿ ಇದ್ದಳು. ಅಂತಹ ದಂಪತಿಗಳ ಪುತ್ರನು ಪಂಡಿತರಾಜನಾದ ಜಗನ್ನಾಥನು “ ಸುಕ್ಷೇತ್ರಪತಿತವಾದ ಬೀಜವು ಅಧಿಕವಾದ ಅನಿರ್ವಚನೀಯ ಸಂಪತ್ತನ್ನು ಹೊಂದು ವದು ' ಎಂದು ಪ್ರಾಜ್ಞರು ಹೇಳುವ ಮಾತು ಸುಳ್ಳಲ್ಲ. ಅಪ್ರತಿಹತವೈದುಷ್ಯವುಳ್ಳವನೂ ರಸಿಕಶೇಖರನೂ ಕವಿವರ್ಯನೂ ಆದ ಜಗನ್ನಾಥಪಂಡಿತನನ್ನು ಹಡೆದ ತಾಯಿತಂದೆಗಳು ಧನ್ಯರಲ್ಲವೇ !!! ಜಗನ್ನಾಥನು ಭಾಮಿನೀವಿಲಾಸದಲ್ಲಿ ದಿಲೀಶ್ವರನ ಸಮೀಪದಲ್ಲಿ ತನ್ನ ತಾರುಣ್ಯ ವನ್ನು ಕಳೆದನೆಂದು ಹೇಳಿದ್ದಾನ? ಅಂದ ಬಳಿಕ ಇವನು ಪ್ರೌಢವಾಗುವಷ್ಟರಲ್ಲಿ ಇವನ ಅಧ್ಯಯನವು ಸಮಾಪ್ತವಾಗಿರಬೇಕು. ಇದು ಸಂಭವನೀಯವೇ. ಅಶೇಷ ಶಾಸ್ತ್ರ ಪಾರಂಗತನಾದ ತಂದೆ ಅಧ್ಯಾಪಕನು; ಪಂಡಿತನಂತಹ ಪ್ರಶಕ್ತರ ಬುದ್ದಿವಿಭೂಷಿತ ನಾದ ಮಗನು ಅದ್ಯೋತೃವು. ಈ ಅನುರೂಪ ದ್ವಂದವು ಸಂಘಟಿಸಲು ವಶಂವದೆಯಾದ ರಮಣಿಯಂತೆ ವಿದ್ಯಾವರವರ್ಣನಿಯು ಅಧೀನಳಾಗುವದು ಅಸಾಧ್ಯವೇ ? ಜಗನ್ನಾಥ ನಂಥಹ ಬುದ್ದಿವಂತ ಶಿಷ್ಯನು ಸಿಕ್ಕಿರಲು ಜನಕೇತರರು ಕೂಡ ಅವನನ್ನು ಪ್ರಾವೀಣ್ಯ ಯುಕ್ತನನ್ನಾಗಿ ಮಾಡದೆ ಇರಲಾರರು. ಅಂದ ಬಳಿಕ ಸಾಕ್ಷಾತ್ ತಂದೆಯೇ ಇಂತಹ ನಿರುಪಮ ಶಿಷ್ಯನ ಗುರುವಾದ ಬಳಿಕ ಕೇಳುವದೇನು ? ಉತ್ಸಾಹವಂತನಾಗಿ ಮಗ ನನ್ನು ಅದ್ವಿತೀಯ ಪಂಡಿತನನ್ನಾಗಿ ಮಾಡಿದನು. ಪಂಡಿತರಾಜನ ಅಭಿ ಮಾನೋಕ್ತಿಗಳು, ಜಗನ್ನಾಥ ಪಂಡಿತನ ಗ್ರಂಥಗಳನ್ನು ಅವಲೋಕಿಸಿದರೆ ಅಲ್ಲಲ್ಲಿ ಆ ಮಹಾಶಯನ ಅಭಿಮಾನದಿಂದ ತುಂಬಿ ತುಳುಕುವ ವಚನಗಳು ಕಂಡುಬರುವವು. ಆತ್ಮ ಸ್ತುತಿಯು ದೃಗ್ಗೋಚರವಾಗುವದು. ಆತ್ಮಸ್ತುತಿಯನ್ನು ಮಾಡಿಕೊಳ್ಳಬೇಕೋ, ಬಾರದೋ? ಎಂಬ ಪ್ರಶ್ನೆ ಕ್ಕೆ ಸರ್ವರೂ ಐಕಕಂಠದಿಂದ ( ಶಕ್ರೋಪಿ ಲಘುತಾಂ ಯಾತಿ ಸ್ವಯಂ ಪ್ರಖ್ಯಾತಿರ್ಗುಣೈಃ ” ಇಂದ್ರನೂ ಕೂಡ ತನ್ನನ್ನು ತಾನೇ ಹೊಗಳಿಕೊಂಡರೆ ಕೀಳ ತನವನೈದುತ್ತಿರಲು ನಮ್ಮಂಥವರ ಪಾಡೇನು ? ನಾವೇಕೆ ಆತ್ಮಸ್ತುತಿಯನ್ನು ಮಾಡಿಕೊ