ಪುಟ:ಪಂಡಿತರಾಜ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಗೂ ಷಣ.

  • 4 # # # # # # # # # # # # #
  • * * * \/\ \ \r h\\r\ \ \/\ #\/> <nr

ಈ ಉಕ್ತಿಯು ಪಂಡಿತರಲ್ಲಿ ಅನುಭವಕ್ಕೆ ಬಂದರೆ ಮತ್ತಿಷ್ಟೂ ಭೂಷಣವೇ ಸರಿ. ಇದೂ ನಮಗೆ ಸಮ್ಮತವುಂಟು. ಆತ್ಮ ಸ್ತುತಿಯನ್ನು ಮಾಡಿಕೊಳ್ಳಬಾರದೆಂದು ನಮ್ಮ ಖಂಡಿತವಾದ ಅಭಿಪ್ರಾಯವಿದ್ದರೂ ಜಗನ್ನಾಥನ ಸುಧಾಮಯವಾದ ಭಣಿತಿಗಳಿಗೆ ನಾವು ದೋಷಣವನ್ನು ಕೊಡಲಿಚ್ಚಿಸುವದಿಲ್ಲ. ಹಾಗೆ ಮಾಡಲು ನಮ್ಮ ಮನಸ್ಸು ಒಡಂಬ ಡದು. ಇತರರಲ್ಲಿ ( ಯೋಗ್ಯತೆ ಇಲ್ಲದವರಲ್ಲಿ) ಆತ್ಮ ಸ್ತುತಿಯು ದೋಷಕ್ಕೆ ಪಾತ್ರವಾ ದರೂ ಈ ಮಹನೀಯನ ಅಭಿಮಾನೋಕ್ತಿಗಳಿಂದ ಅವನಿಗೆ ದೋಷವು ಬಾರದೆ ಪ್ರತ್ಯುತ ಭೂಷಣವೇ ಉಂಟಾಗಿದೆ. ಈ ಮಹಾಮಹಿಮನ ಸುಧಾಮಯವಾದ ಅಭಿಮಾನೋಕ್ತಿ ಗಳನ್ನು ಸಹೃದರು ನೋಡಬೇಕು:- ದಿಗಂತೇ ಶ್ಲೋಯಂತೇ ಮುದಮಲಿನ ಗಂಡಾಃ ಕರಟಿನಃ | ಕರಿಣ್ಯ: ಕಾರುಣ್ಯಾಸ್ಪದಮಸಮಶೀಲಾಃ ಖಲುಮೃಗಾಃ | ಇದಾನೀಂ ಲೋಕೆಸ್ಮಿನ್ನನುಪಮ ಶಿಖಾನಾಂ ಪುನರಯಂ | ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್‌ಮೃಗದತಿಃ || ಎಲ್ಲಿಯೋ ದಿಗಂತದಲ್ಲಿ ಮದೋದಕದಿಂದ ಮಲಿನವಾದ ಕಪೋಲಸ್ಥಳಗಳಿಂದ ಶೋಭಿಸುವ ಗಜಗಳು ಉಂಟೆಂದು ಕೇಳಲ್ಪಡುತ್ತದೆ. ಮುಂದೆ ಬಂದು ಒಂದು ಮದೊನ್ನ ತವಾದ ಗಜವೂ ನಿಲ್ಲಲೊಲ್ಲದು. ಇಲ್ಲಿದ್ದ ಹೆಣ್ಣಾನೆಗಳೇ ? ಅವುಗಳನ್ನೇನು ಪೀಡಿಸುವದು? ಕರುಣಾಪಾತ್ರವಾದುವುಗಳು ಮುಂದಿದ್ದ ಮೃಗಗಳ ಮೇಲೆ ಕೈಯತ್ತುವದೇನು ಜಾಣತ ನವು ? ಅವು ನಮ್ಮ ಸಮಾನವಾದ ಪರಾಕ್ರಮವುಳ್ಳವುಗಳೇ ಅಲ್ಲ. ಅಂದಬಳಿಕ ಈ ಸಿಂಹವು ( ಜಗನ್ನಾಥಪಂಡಿತನು ) ತನ್ನ ತೀಕ್ಷ್ಮವಾದ ನಖಗಳ ಪಾಂಡಿತ್ಯವನ್ನು ಎಲ್ಲಿ ರಿಸಬೇಕು ? ಅಪ್ರಸ್ತುತ ಪ್ರಶಂಸೆಯಿಂದ ಜಗನ್ನಾಥನು ತನ್ನೊಡನೆ ವಿವಾದಿಸಲು ಅರ್ಹನಾದ ಪಂಡಿತನು ಒಬ್ಬನೂ ಇಲ್ಲವೆಂದು ಈ ಶ್ಲೋಕದಲ್ಲಿ ಪ್ರತಿಪಾದಿಸಿದ್ದಾನೆ:- ಗಿರಾಂ ದೇವೀ ವೀಣಾ ಗುಣರಣನ ಹೀನಾದರಕರಾ | ಯದೀಯಾನಾಂ ವಾಚಾಮಮೃತಮಯವಾಚಾಮತಿ ರಸಂ || ವಚಸ್ತ ಸ್ಯಾಕರ್ಣ್ಯ ಶ್ರವಣಶುಭಗಂ ಪಂಡಿತಪತೇ | ಆಧುನ್ವನ್ಮೂರ್ಧಾನಂ ನೃಪಶುರಥವಾಯಂ ಪಶುಪತಿಃ | ನಕ್ಷತ್‌ ಸರಸ್ವತಿಯು ಕೂಡ ತನ್ನ ಮಂಜುಲ ಧ್ವನಿಮಾಡುವ ವೀಣೆಯನ್ನು ಬಾರಿಸುವದರಲ್ಲಿ ಅನಾದರವುಳ್ಳವಳಾಗಿ ಯಾವನ ಅಮೃತಮಯವಾದ ವಾಣಿಯ ರಸ ಪಾನವನ್ನು ಮಾಡುತ್ತ ಕೂಡ್ರಿವಳೋ, ಅಂತಹ ಪಂಡಿತಪತಿಯಾದ ಜಗನ್ನಾಥನ ಶ್ರವಣಸುಭಗವಾದ ವಚನವನ್ನು ಕೇಳಿ ತಲೆಯನ್ನು ಅಲ್ಲಾಡಿಸದವನು ಯಾವನಿರಬೇಕು? ನದಪಶುವು; ಅಥವಾ ಪಶುಪತಿಯು ( ದೇವರು ) ಸರಿಸಮಧುರ ( ಪದವಿನ್ಯಾಸದಿಂದ ಸರ