ಪುಟ:ಪಂಡಿತರಾಜ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. \/\/ #s # \/\/hhhhhh/444AFA ಸ್ವತೀದೇವಿಯ ಪ್ರೀತಿಗೆ ಪಾತ್ರರಾದ ಜಗನ್ನಾಥ ನಂತಹ ವಿದ್ವಾಂಸರು ವಿರಲವೇ ಸರಿ. ಇವನ ಕಾವ್ಯಗಳಲ್ಲಿರುವ ಲೋಕೋತ್ತರ ಪ್ರಸಾದವನ್ನೂ, ಅಲೌಕಿಕ ಮಾಧುರ್ಯ ವನ್ನೂ, ನಿರುಪಮಸೌಂದರ್ಯವನ್ನೂ, ಮನೋಹರತ್ವವನ್ನೂ ಕಂಡು ಸರಸ್ವತೀದೇ ವಿಯು ತನ್ನ ವೀಣಾನಿನಾದದಲ್ಲಿ, ಅನುರಕ್ತಳಾಗದಿದ್ದದ್ದೇನಾಶ್ಚರ್ಯವಲ್ಲ. ಜಗನ್ನಾಥನ ವಾಣಿಯನ್ನು ಕೇಳಿ ತಲೆದೂಗದ ರಸಿಕನು ಒಬ್ಬನಾದರೂ ಜಗತ್ತಿನಲ್ಲಿರುವನೇ ? ತಿರು ತಿರುಗಿ ಓದಿದ ಹಾಗೆ ಇವನ ಪದ್ಯಗಳಲ್ಲಿ ಹೆಚ್ಚು ಹೆಚ್ಚು ರಸಪ್ರವಾಹವು ಕಂಗೊಳಿ ಸಿರುವದು. ಭಾಮಿನೀವಿಲಾಸದ ಅಂತಿಮೋಲ್ಲಾಸದಲ್ಲಿಯಂತೂ ಪಂಡಿತರಾಜನ ಅಭಿಮಾ ನೋಕ್ತಿಗಳ ಯಥೇಚ್ಚವಾದ ಪಕ್ವಾನ್ನವೇ ವಾಚಕರಿಗೆ ಸಿಕ್ಕುವದು. ಮಧು ದ್ರಾಕ್ಷಸಾಕ್ಷಾದಮೃತಮಥ ವಾಮಾಧರಸುಧಾ | ಕದಾಚಿತ್ ಕೇಪಾಂಚಿನ್ನ ಖಲು ವಿದಧೀರನ್ನ ಪಿ ಮುದಂ || ಧ್ರುವಂ ತೇ ಜೀವಂತೋಷ್ಯಹಹಂ ಮೃತಕಾ ಮಂದಮತಯೋ ! ನ ಯೇಷಾಮಾನಂದಂ ಜನಯತಿ ಜಗನ್ನಾಥ ರ್ಭಣಿತಿಃ | ಜೇನತುಪ್ಪ, ದ್ರಾಕ್ಷೆ, ಸಾಕ್ಷಾತ್ ಅಮೃತ, ರಮಣಿಯ ಅಧರಸುಧೆ, 'ಇವುಗಳು ಒಂದು ಕಾಲದಲ್ಲಿಯಾದರೂ ಕೆಲವರಿಗಾದರೂ ಆನಂದವನ್ನು ಕೊಡಲಿಕ್ಕಿಲ್ಲ. ಅಶಕ್ತರಿಗೆ ಬೇನೆಯುಳ್ಳವರಿಗೆ ಇವು ಆನಂದವನ್ನೆಂತು ಉಂಟುಮಾಡುವವು? ಆದರೆ ಜಗನ್ನಾಥ ವಾಣಿಯು ಎಲ್ಲರಿಗೂ ಎಲ್ಲ ಕಾಲಗಳಲ್ಲಿಯೂ ಆನಂದವನ್ನುಂಟು ಮಾಡಲೇಬೇಕು. ಒಂದು ವೇಳೆ ನನ್ನ ವಾಣಿಯಿಂದ ಆಹತಭಾಗ್ಯರಿಗೆ ಆನಂದ ಉಂಟಾಗದಿದ್ದರೆ ಅವರು ಜೀವಂತರಿದ್ದೂ ಸತ್ತಹಾಗೇ ಸರಿ. ಆಮೂಲಾದ್ರತ್ವ ಸ್ನಾನೋರ್ಮಲಯವಲಯಿತಾದಾಚ ಕೂಲಾತ್ಪಯೋಧೇ । ರ್ಯಾವಂತಃ ಸಂತಿ ಕಾವ್ಯಪ್ರಣಯನ ಪಟವನ್ನೇ ವಿಶಂಕಂ ವದಂತು | ಮೃದ್ವೀಕಾಮಧೂನಿರ್ಯನ್ಮಸೃಣರಸಧುರೀಮಾಧುರೀಭಾಗ್ಯಭಾಜಾಂ || ವಾಚಾಮಾಚಾರ್ಯತಾಯಾಃ ಪದನನುಭವಿತುಂ ಕೊಸ್ತಿಧಮ್ಮೊಮದನ್ಯತಿ || ಮೇರುಪರ್ವತದಿಂದ ಮಲಯಗಿರಿಯಿಂದ ವೇಷ್ಟಿತವಾದ ಸಮುದ್ರದ ವರೆಗೆ ಇದ್ದ ಕಾವ್ಯ ಪ್ರಣಯನ ಪಟುಗಳೆಲ್ಲ ನಿರ್ವಿಶ೦ಕವಾಗಿ ಹೇಳಲಿ; ದ್ರಾಕ್ಷಾಫಲಗಳ ಮಧ್ಯದಿಂದ ಹೊರಡುವ ಮಧುರಸದ ನಿರ್ಝರದ ಭಾಗ್ಯವನ್ನು ಅನುಭವಿಸುವ ವಚನಗಳ ದೀಕ್ಷಾಬದ್ಧ ಗುರುತ್ವವನ್ನು ಅನುಭವಿಸಲು ನನ್ನನ್ನುಳಿದು ಯಾವನು ಸಮರ್ಥನಿರುವನು. 11. 1 ... ... ... ... ... ... ... • ದಿಲ್ಲೀವಲ್ಲಭ ಪಾಣಿಪಲ್ಲವತಲೇ ನೀತಂ ನವೀನಂ ವಯಃ |