ಪುಟ:ಪಂಡಿತರಾಜ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನಾಥ ಪಂಡಿತನು.

  • * #

, , , ↑ n s, # # # # # # # # # # # # # # # # # # # # # # # ಕಾವ್ಯಂ ಮಯಾತ್ರ ನಿಹಿತಂ ನವರಸ್ಯ ಕಿಂಚಿತ್ | ಕಿಂ ಸೇವ್ಯತೇ ಸುಮನಸಾಂ ಮನಸಾಪಿ ಗಂಧಃ | ಕಸ್ತೂರಿಕಾಜನನಶಕ್ತಿಭ್ರತಾ ಮೃಗೇಣ || ನೂತನ ಉದಾಹರಣಕ್ಕೆ ಯೋಗ್ಯವಾದ ಕಾವ್ಯವನ್ನು ನಿರ್ಮಿಸಿ ನಾನಿಲ್ಲಿ ಇಟ್ಟಿ ದೇನೆ. ಸ್ವಲ್ಪಾದರೂ ಎರಡನೆಯವರ ಕಾವ್ಯವನ್ನು ತೆಗೆದುಕೊಂಡಿಲ್ಲ. ಕಸ್ತೂರಿಯನ್ನೇ ಹುಟ್ಟಿಸುವ ಮೃಗವು ಎಂದಾದರೂ ಮನಸ್ಸಿನಿಂದಾದರೂ ಹೂಗಳ ಸುವಾಸನೆಯನ್ನು ಸೇವಿಸುವದೇ? ಜಗನ್ನಾಥಪಂಡಿತನ ಗ್ರಂಥಗಳಲ್ಲಿ ಕೇವಲ ಅಭಿಮಾನೋಕ್ತಿಗಳೇ ಕಂಡುಬರು ತವೆಂತಲ್ಲ. ಅವನಿಂದ ವಿರಚಿತವಾದ ಕರುಣಾಲಹರಿ, ಗಂಗಾಲಹರಿ ' ಮೊದಲಾದ ಸುಂದರ ಕಾವ್ಯಗಳಲ್ಲಿ ಇವನ ವಿನಯಪರಿಪೂರಿತ ವಚನಗಳೂ ಕಂಡುಬರುವವು. ಅವನ್ನು ಆ ಆ ಗ್ರಂಥಗಳ ಸಮಾಲೋಚನಾವಸರದಲ್ಲಿ ವಿವರಿಸುವೆವು. ಅಖ್ಯಾಯಿಕೆಗಳು. ಪಂಡಿತರಾಜನ ವಿಷಯವಾಗಿ ಅನೇಕ ಆಖ್ಯಾಯಿಕೆಗಳು ಜನರಲ್ಲಿ ಪ್ರಚಲಿತವಾ ಗಿರುವವು. ಅವುಗಳಲ್ಲಿ ಅತಿ ಪ್ರಥಿತವಾದ ಕಿಂವದಂತಿಯು:- ಜಗನ್ನಾಥನ ಅದ್ವಿತೀಯವಾದ ಪಾಂಡಿತ್ಯವನ್ನು ಕೇಳಿ ಸಂತುಷ್ಟನಾಗಿ ದಿಲೀಪತಿ ಯಾದ ಶಹಾಜಹಾನನು ಅವನನ್ನು ತನ್ನ ಸಭಿಕನನ್ನಾಗಿ ಮಾಡಿಕೊಂಡನು. ಜಗನ್ನಾಥ ನನ್ನು ಬಹಿಸ್ಟರಜೀವಿತನನ್ನಾಗಿಯೇ ಬಗೆದನು. ಒಂದು ದಿವಸ ಜಗನ್ನಾಥಪಂಡಿತ ನೊಡನೆ ದಿಲೀಶ್ವರನು ಚದುರಂಗವನ್ನಾಡುತ್ತ ಕುಳಿತಿರಲು ನೀರಡಿಕೆಯಿಂದ ವ್ಯಾಕುಲ ನಾದನು. ನೀರನ್ನು ತರುವದಕ್ಕಾಗಿ ಮಗಳಿಗೆ ಆಜ್ಞಾಪಿಸಿದನಂತೆ. ಆತನ್ವಂಗಿಯು ಕೌಸುಂಭವಸನವನ್ನು ಧರಿಸಿ ನೀರಿನಿಂದ ತುಂಬಿದ ಸುವರ್ಣಕುಂಭವನ್ನು ತಲೆಯ ಮೇಲಿ ಟ್ಟು ಕೊಂಡು ಶೃಂಗಾರರಸದೇವತೆಯೇ ಸಂಚರಿಸುತ್ತಾಳೋ ಎನೋ ಎನ್ನುವಂತೆ ಮಂದ ಮಂದವಾಗಿ ಬಾದಶಹನ ಸಮೀಪಕ್ಕೆ ಬಂದಳು, ಕೊಡವನ್ನು ನೆಲಕ್ಕೆ ಇಳಿಸಲು ದಿಲೀಶ್ವ ರನು ನೀರುಕುಡಿದು ಸಂತುಷ್ಟನಾದನು. ಪುನಃ ಆ ಕನ್ನಿಕೆಯು ಕೊಡವನ್ನು ತಲೆಯ ಮೇಲಿಟ್ಟು ಕೊಂಡು ಮನೆಗೆ ಹೋಗಲುಪಕ್ರಮಿಸಿದಳು. ಆಗ ಬಾದಶಹನು ಆ ಕುಮಾರಿ ಕೆಯನು ವರ್ಣಿಸಲು ಜಗನ್ನಾಥನಿಗೆ ಆಜ್ಞೆಯನ್ನಿತ್ತನು. ಅವನಾದರೂ ಅಪ್ಪಣೆಕೊಟ್ಟ ಉತ್ತರಕ್ಷಣದಲ್ಲಿಯೇ इयं सुस्तनी मस्तकन्यस्त कुंभा । कुसुंभारुणं चारु चेलं वसाना ॥