ಪುಟ:ಪಂಡಿತರಾಜ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗೂ ಷಣ. \\Ahhhhhhhhhhhh #$ #/y h/ Y * * (ሶለለይ ለለለለለለለለለለለለለለለለለለለለ समस्तस्य लोकस्य चेतः प्रवृत्तिम् ।। गृहीत्वा घटे न्यस्य यातव भाति ।।। ಬಾದಶಹನೇ! ಕುಸುಂಬ ಬಣ್ಣದ ಮನೋಹರವಾದ ವಸ್ತ್ರವನ್ನುಟ್ಟು ಕೊಂಡ ಈಕೆಯು ತಲೆಯ ಮೇಲೆ ಬರಿದಾದ ಕೊಡವನ್ನು ಹೊತ್ತುಕೊಂಡು ಹೋಗುವದಿಲ್ಲ. ಇಲ್ಲಿದ್ದ ಜನರ ಮನಸ್ಸನ್ನು ಆ ಕೊಡದಲ್ಲಿ ಹಾಕಿಕೊಂಡು ಹೋಗುತ್ತಾಳೆ !!!- ತಾತ್ಕಾಲದಲ್ಲಿಯೇ ಜಗನ್ನಾಥಪಂಡಿತನ ವದನಾರವಿಂದದಿಂದ ಉದಯವನ್ನು ಹೊಂದಿದ ಸುಲಲಿತ ಪದ್ಯವನ್ನು ಯವನರಾಜನು ಕೇಳಿ ಅತೀವ ಪ್ರಸನ್ನನಾಗಿ- ಪಂಡಿ ತರಾಜನೇ ನಿನ್ನಿ ವಾಗ್ರೆಭವದಿಂದ ಸಂತುಷ್ಟನಾಗಿರುವೆನು. ಏನು ಬೇಡುತ್ತೀ ಬೇಡು; ಎಂದು ಉದ್ಗಾರ ತೆಗೆದನು. ಪಂಡಿತನಾದರೂ ಪುನಃ ಶ್ಲೋಕದಿಂದಲೇ ಭೂಪಾಲಕ ನನ್ನು ಪ್ರಾರ್ಥಿಸಿದನು. न याचे गजालि न वा वाजिराजिम् ।। न वित्तेषु चित्तं मदीयं कदाचित् ॥ इयं सुस्तनी मस्त कन्यस्तकुंभा ।। लवंगी कुरंगीदृगंगीकरोतु ।।। ಪಾರ್ಥಿವ ಶಿರೋಮಣಿಯೇ, ನೀನು ಸಾವಿರಾರು ಆನೆಗಳನ್ನು ಕೊಟ್ಟರೂ ನಾನು ಅವುಗಳನ್ನು ಸ್ವೀಕರಿಸಲಾರೆನು, ಕುದುರೆಗಳ ಸಮೂಹವನ್ನೇ ಕೊಟ್ಟರೂ ಅವೂ ನನಗೆ ಬೇಡ. ದುಡ್ಡಿನಲ್ಲಿ ನನ್ನ ಆಶೆಯಿಲ್ಲ. ಈ ಚಾರುವರೋಜಗಳಿಂದ ಶೋಭಿತಳಾದ ಎರಳೆ ಯಂತೆ ನೇತ್ರವುಳ್ಳ ನಿನ್ನ ಲವಂಗಿಯೆಂಬ ಕನ್ನಿಕೆಯು ನನ್ನನ್ನು ವರಿಸಲಿ. ಪಂಡಿತರಾಜನ ಈ ಪ್ರಾಥನೆಯನ್ನು ಕೇಳಿ ವಿಸ್ಮಿತನಾಗಿ ಮಹೀಪತಿಯು ಮಾತಾ ಡುತ್ತಾನೆ. ಬ್ರಾಹ್ಮಣನಾಗಿ ನೀನು ಸ್ವರ್ಗಲೋಕಕ್ಕೆ ಅಡ್ಡಿಯನ್ನು ಂಟುಮಾಡುವ ಯವ ನಿಯನ್ನು ಪ್ರಾರ್ಥಿಸಬೇಕೇ ? !!! यवनी नवनीत कोमलांग ।। शयनीये यदि लभ्यते कदाचित् ।। अवनीतलमेव साधु मन्ये ।। न वनी माघवनी विनोदहेतुः ।। ಬೆಣ್ಣೆಯಂತೆ ಮೃದುವಾದ ಅವಯವಗಳುಳ್ಳ ಈ ಯವನಿಯು ಶಯನದಲ್ಲಿ ಒಂದು ವೇಳೆ ಲಬ್ಧಳಾದರೆ ಭೂತಲವೇ ಸುಖಕರವೆಂದು ತಿಳಿಯುವೆನು. ಆ ಇಂದ್ರನ ನಂದನವ ನವೇನು ನನಗೆ ವಿನೋದವನ್ನುಂಟುಮಾಡಲು ಶಕ್ತವಾಗಲಿಕ್ಕಿಲ್ಲ. -