ಪುಟ:ಪಂಡಿತರಾಜ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. f\hh

  1. sir f¢y #s/\f hhfv #s\/\r\nhhhhhhhhhhh #\yAy

यवनीर मणी विपदः शमनी ।। | कमनीयतमा नवनीतसमा । * ತfಕೆ ತf ' ಇತisagagi | | स सुखी जगतीह यदंकगता ।।। ಸಂತಾಪವನ್ನು ಕಳೆಯುವ ಮನೋಹರಳಾದ ಈ ಊಹಿ ಊಹಿ' ಎಂಬ ವಚ ನಾಮೃತದಿಂದ ತುಂಬಿದ ಮುಖಕಮಲದಿಂದ ಶೋಭಿತಳಾದ ಈ ಯವನ ರಮಣಿಯು ಯಾವನ ತೊಡೆಯಲ್ಲಿ ಬಂದು ಕುಳಿತುಕೊಳ್ಳುವಳೋ, ಅವನು ಜಗತ್ತಿನಲ್ಲಿಯೇ ಧನ್ಯ ನಲ್ಲವೇ! ಸ್ವರ್ಗಲೋಕದಲ್ಲಿ ಇದಕ್ಕೂ ಹೆಚ್ಚಿನ ಸುಖವೇನಿರುವದು? ಜಗನ್ನಾಥನ ಸರಸವಾದ ವಾಣಿಯನ್ನು ಕೇಳಿ ಮೊದಲಿಗಿಂತ ಹೆಚ್ಚಿಗೆ ಸಂತುಷ್ಯ ನಾಗಿ ದಿಲೀಪತಿಯು ಲವಂಗೀ ಎಂಬ ಹೆಸರುಳ್ಳ ಕನ್ನಿ ಕೆಯನ್ನು ಪಂಡಿತರಾಜನಿಗೆ ಕೊಟ್ಟು ಮದುವೆಯನ್ನು ಮಾಡಿದನು.-ಪಂಡಿತರಾಜನಾದರೂ ಸಂಪಾದಿಸತಕ್ಕದ್ದನ್ನು ಸಂಪಾದಿಸಿದೆನೆಂದು ತಿಳಿದು ಆನಂದದಿಂದ ಆ ಯವನಿಯಿಂದ ಕೂಡಿ ಸಂಸಾರಮಾಡುತ್ತ ಸ್ವರ್ಗಸುಖವನ್ನು ತೃಣಕ್ಕೆ ಬಗೆದನು. ಕೆಲವು ದಿವಸ ಆಕೆಯೊಡನೆ ಸಂಸಾರ ಮಾಡಿದ ನಂತರ ಪಂಡಿತರಾಜನು ಕಾಶೀಕ್ಷೇತ್ರಕ್ಕೆ ತೆರಳಿದನು. ಅಲ್ಲಿದ್ದ ಪಂಡಿತರು ಇವನನ್ನು ಕುಲಗೇಡಿಯೆಂದು ಧಿಕ್ಕರಿಸಿದರು. ಕಿಂಚಿದ್ವಿಷಾದವನ್ನು ಹೊಂದಿ ಜಗನ್ನಾಥನು ನನ್ನನ್ನೂ ನನ್ನೀ ಪ್ರೇಯಸಿಯಾದ ಯವನಿಯನ್ನೂ ನೀವು ಪವಿತ್ರೀಕರಿಸಿ ಬ್ರಾಹ್ಮಣರಿಂದ ಕೂಡಿ ವ್ಯವಹಾರಮಾಡಲು ಬಡಂಬಟ್ಟರೆ ಪ್ರಾಯಶ್ಚಿತ್ತವನ್ನು ಅಂಗೀಕರಿಸುವೆನೆಂದು ಹೇಳಿ ದನು. ಕಾಶೀವಾಸಿಗಳಾದ ವಿದ್ವನ್ಮಣಿಗಳು ಈ ಮಾತಿಗೆ ಒಡಂಬಡಲಿಲ್ಲ. ಅಲ್ಲಿಂದ ಜಗನ್ನಾಥನು ಬಿಡಿರಿ; ನಿಮ್ಮ ಪ್ರಾಯಶ್ಚಿತ್ತದಿಂದ ಆಗತಕ್ಕದ್ದಾದರೂ ಏನು? ಜಗತ್ಪಾವನೆ ಯಾದ ಭಾಗೀರಥಿಯೇ ನನ್ನನ್ನು ಭಾರ್ಯೆಯೊಡನೆ ಪವಿತ್ರಗೊಳಿಸುವಳು. ಎಂದು ನಿಶ್ಚ ಯವಾಗಿ ಉದ್ಯೋಷಿಸಿ ಗಂಗಾತೀರಕ್ಕೆ ಬಂದನು. ಅಲ್ಲಿ ಐವತ್ತೆರಡು ಪಾವಟಿಗೆಗಳುಳ್ಳ ಒಂದು ಘಟ್ಟವನ್ನೇರಿ ಸುಲಲಿತ ಪದಬಂಧನದಿಂದ ಶೋಭಿಸುವ ಕೆಲವು ಪದ್ಯಗಳನ್ನು ರಚಿಸಿ ಅನ್ನ ತೊಡಗಿದನು. ಆ ಪದ್ಯಗಳುಳ್ಳ ಪ್ರಬಂಧವೇ ಈಗ 4 ಪೀಯೂಷಲಹರಿ ' ಯೆಂದೂ - ಗಂಗಾಲಹರಿ ' ಯೆಂದೂ ಪ್ರಸಿದ್ಧವಾಗಿರುವದು. ಒಂದೊಂದು ಪದ್ಯವು ಅನ್ನ ಲ್ಪಡಲು ಒಂದೊಂದು ಪಾವಟಿಗೆಯನ್ನು ಗಂಗೆಯು ಏರಿಬಂದಳಂತೆ. ೫೨ನೆಯ ಪದ್ಯಕ್ಕೆ ಕಡೆಯ ಪಾವಟಿಗೆಯನ್ನು ಏರಿ ಪಂಡಿತರಾಜನನ್ನು ಅವನ ಹೆಂಡತಿಯೊಡನೆ ತನ್ನ ಅಂಗ ಗಳಲ್ಲಿ ಸೇರಿಸಿಕೊಂಡು ಭಗವತೀ ಭಾಗೀರಥಿಯು ಉದ್ಧಾರಮಾಡಿದಳಂತೆ. ಇದನ್ನು ನೋಡಿ ಕಾಶಿಯ ಪಂಡಿತರು ಅತ್ಯಂತವಾಗಿ ಆಶ್ಚರ್ಯಚಕಿತರಾದರು. ಕೆಲವರು - ಯವನಿಯು ಮೊದಲೇ ಮರಣವನ್ನು ಹೊಂದಲು ಆಕೆಯ ವಿರಹ ದಿಂದ ಸಂತಪ್ತಾಂತರಂಗನಾಗಿ - ಜಗನ್ನಾಥನು ದಿಲ್ಲಿಯನ್ನು ಬಿಟ್ಟು ವಾರಾಣಸಿಯನ್ನು