ಪುಟ:ಪಂಡಿತರಾಜ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, rrrrr rr 2, - f *YYA * • • • • ಕುರಿತುಬರಲು, ಅಲ್ಲಿಯ ಪಂಡಿತರು, ಇವನ ಆಚರಣವನ್ನು ಕೇಳಿ ಇವನನ್ನು ತಿರಸ್ಕರಿ ಸಿದರು. ಅವರ ತಿರಸ್ಕಾರದಿಂದಲೂ ಯವನಿಯ ವಿರಹದಿಂದಲೂ ದುಃಖಿತನಾದ ಪಂಡಿತ ರಾಜನು ಎಲ್ಲಿಯೂ ಸೌಖ್ಯವನ್ನು ಕಾಣದೆ ಮಳೆಗಾಲದಲ್ಲಿ ಗಂಗೆಯು ತುಂಬಿಹರಿಯುತ್ತಿ ರಲು ಸ್ವಕೃತವಾದ ಗಂಗಾಲಹರಿಯನ್ನು ಪಠಿಸುತ್ತ ಗಂಗೆಯಲ್ಲಿ ಮುಳುಗಿ ಪ್ರಾಣವನ್ನು ಬಿಟ್ಟನು ” ಎಂದು ಹೇಳುವರು. ಈ ಆಖ್ಯಾಯಿಕೆಯ ಸತ್ಯತೆಯ ವಿಷಯದಲ್ಲಿ ಆಕ್ಷೇಪಗಳು-ಸ್ವಭಾವತಃ ಕ್ರೋಧ ವಂತರಾದ ಯವನರು ಸ್ವಾಂಗನೆಯರಲ್ಲಿ ಪರಪುರುಷನ ಪ್ರೇಮನಿಧಾನವನ್ನು ಕೇಳಿದರೆ ಸಂತಪ್ತರಾಗುವರು. ಅದು ಅವರಿಗೆ ಸಹನವಾಗುವದಿಲ್ಲ. ಇಂಥವರು ತಮ್ಮ ಪ್ರತ್ಯಕ್ಷ ವಾಗಿ ಕಾಮಾವಿಷ್ಟನಾದ ಪರಮಧರ್ಮಿಯ ಮನುಷ್ಯನಿಂದ ಮಾಡಲ್ಪಟ್ಟ ತಮ್ಮ ಕನೈಯ ವಿಷಯವಾಗಿ ಪ್ರಾರ್ಥನೆಯನ್ನು ಸಹಿಸುವರೇ ? ಪಂಡಿತರು ಎಷ್ಟೋ ಅಹಂಕಾರ ಶಾಲಿಗಳಾಗಿದ್ದರೂ ಕಾಮಮಾತ್ರಾಸಕ್ತಿಯಿಂದ ಧರ್ಮವನ್ನು ಉಲ್ಲಂಘಿಸಲು ಇಚ್ಚಿಸು ವದು ಅಶಕ್ಯವು. ಕುದ್ರತಮನಾದ ಯವನನಾದರೂ ವಿಧರ್ಮಿಯರಿಂದ ಮಾಡಲ್ಪಟ್ಟ ತನ್ನ ಕಾಂತಾಗತ ಕಥೆಯನ್ನು ಕೇಳಿದರೆ ಕೂಡ ಕೋಪದ ಪರಾಕಾಷ್ಠೆಯನ್ನು ಏರುತ್ತಿ ರಲು ನಿಖಿಲ ಭಾರತವರ್ಷಿಯ ಭೂಪಾಲಕರಿಂದ ಸಮಭ್ಯರ್ಚಿತ ಶಾಸನನಾದ ದಿಲ್ಲಿ ಶ್ವರನು, ಜಗನ್ನಾಥನು ಪಂಡಿತನೇ ಯಾಕಾಗಲೊಲ್ಲನು; ಅವನಿಂದ ತನ್ನ ಸಮಕ್ಷದಲ್ಲಿ ಅಭ್ಯ ರ್ಥಿತಳಾದ ಕನೈಯನ್ನು ಅವನಿಗೆ ಕೊಟ್ಟು ಯವನಧರ್ಮವನ್ನು ಧಿಕ್ಕರಿಸಲು ಒಡಂಬಡು ವನೇ? “ ಯವನವನೀತ ಕೋಮಲಾಂಗಿಶಯನೀಯೇ, ಮೊದಲಾದ ಶ್ಲೋಕಗಳು ನಿಜವಾಗಿ ಪಂಡಿತರಾಜನವೇ ಆಗಿದ್ದರೆ ಅವನು ತನ್ನ ಭಾಮಿನೀವಿಲಾಸವೆಂಬ ಪೆಟ್ಟಿಗೆ ಯಲ್ಲಿ ಆ ಪದ್ಯಗಳನ್ನು ಹಾಕಿಡುತ್ತಿದ್ದನು. ಯಾಕಂದರೆ ಅವನು ಭಾಮಿನೀವಿಲಾಸದ ಕಡೆಯಲ್ಲಿ ಅನ್ನುವದೇನಂದರೆ:- दुर्वृत्त। जार जन्मानो हरिष्यतीति शंकया ।। मदीयपद्यरत्नानां मंजूषा कृता मया ॥ ತುಡಗ ಸೂಳೇಮಕ್ಕಳು ನನ್ನ ಪದ್ಯಗಳನ್ನು ಹರಣಮಾಡಿಯಾರು ಎಂಬ ಶಂಕೆ ಯಿಂದ ನಾನು ಭಾಮಿನೀವಿಲಾಸವೆಂಬ ಪೆಟ್ಟಿಗೆಯಲ್ಲಿ ಪದ್ಯರತ್ನಗಳನ್ನು ಸಂಗ್ರಹಿಸಿ ಇಟ್ಟಿ ರುವೆನು. ಮೇಲಿನ ಯವನೀಸಂಬಂಧದ ಶ್ಲೋಕಗಳನ್ನು ಈ ಪೆಟ್ಟಿಗೆಯಲ್ಲಿ ಸಂಗ್ರಹಿ ಸಲು ಪಂಡಿತರಾಜನು ಮರೆತನೋ ? ಇದನ್ನು ವಿದ್ವಜ್ಜನರು ಅವಶ್ಯವಾಗಿ ವಿಚಾರಿಸತ ಕದ್ದು. ಸಾರ್ವಭೌಮನಾದ ದಿಲೀಶ್ವರನು ಸಭೆಯಲ್ಲಿ ಏಕೆ ನೀರು ಕುಡಿದನು ? ಆ ನಾರ್ವ ಭೌಮ ಪಿಯು ಬಡಹೆಂಗಸಿನಂತೆ ತಲೆಯ ಮೇಲೆ ಕೊಡವನ್ನಿಟ್ಟುಕೊಂಡು ಬಂದಳೇ? ಆಳುಗಳಿದ್ದಿಲ್ಲವೇ? ಸುಸ್ತನೀ ' ಎಂಬ ವಿಶೇಷಣಕ್ಕೆ ಅರ್ಹರಾದ ಆ ಅಸೂರ್ಯ,