ಪುಟ:ಪಂಡಿತರಾಜ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಷಣ. yya / 7 // v YYY * * * * *

  • * * * * * * * * * * * * * * * * - * r r r - **

अपि प्रायश्चित्तप्रसरण पथातीतचरितान् । नरानूरकर्तुं त्वमिव जननि त्वं विजयसे ।। ಎಲೌ ಮಂದಾಕಿನೀ ! ಸಣ್ಣ ಸಣ್ಣ ಪಾಪಗಳನ್ನು ಮಾಡಿ ಸಂತಪ್ತರಾದ ಜನರನ್ನು ಉದ್ದರಿಸುವದಕ್ಕಾಗಿ ಭುವನದಲ್ಲಿ ಎಷ್ಟೋ ತೀರ್ಧಗಳು ಇರುವವು. ಆದರೆ ಪ್ರಾಯಶ್ಚಿ ತ್ಯದಿಂದ ಕೂಡ ಯಾವ ಪಾಪವು ತೊಳೆದು ಹೋಗುವದಿಲ್ಲವೋ ಅಂತಹ ಮಹತ್ತರ ವಾದ ಪಾಪವನ್ನು ಮಾಡಿದ ಜನರನ್ನು ಉದ್ಧರಿಸಲಿಕ್ಕೆ ನಿನ್ನ ಹಾಗೆ ನೀನೇ ಶೋಭಿಸುವಿ. ಅನನ್ವಯಾಲಂಕಾರ ಪ್ರಕರಣದಲ್ಲಿ ಈ ಶ್ಲೋಕವು ಕಂಗೊಳಿಸುವದು.' ಇದೇ ಮೇರೆಗೆ ಜಗನ್ನಾ ಧನು ಭಾವೋದಾಹರಣ ಪ್ರಸಂಗದಿಂದ ರಸಗಂಗಾಧರದಲ್ಲಿ ಹೇಳಿರು ವದೇನಂದರೆ “ ಮನ್ನಿರ್ಮಿತಾಶ್ಚ ಪಂಚಲಹರ್ಯೊ ಭಾವಸ್ಯ ಜಗನ್ನಾ ಧನಿಂದ ವಿರಚಿ ತವಾದ ಐದು ಲಹರಿಗಳೆಂದರೆ - ಪೀಯುಷ ( ಗಂಗಾ ) ಲಹರಿ ' 'ಸುಧಾಲಹರಿ' ( ಲಕ್ಷ್ಮೀಲಹರಿ ' ( ಅಮೃತಲಹರಿ' : ಕರುಣಾಲಹರಿ ' ಇವುಗಳು. ಜಗನ್ನಾಥನಿಂದ ವಿರಚಿ ತೆವಾದ ಗಂಗಾಲಹರಿಯು ಐದು ಲಹರಿಗಳಲ್ಲಿಯೇ ಅಂತರ್ಭೂತವಾಗುತ್ತದೆ. ಲಹರೀ ಪಂಚಕವ್ರ ರಸಗಂಗಾಧರದಲ್ಲಿ ಉಲ್ಲೇಖಿತವಾಗಿರುವದರಿಂದ ಗಂಗಾಲಹರಿಯಲ್ಲಿರುವ ಪದ್ಯಗಳು ರಸಗಂಗಾಧರದಲ್ಲಿ ಕಂಡುಬರುವದರಿಂದ ರಸಗಂಗಾಧರ ನಿರ್ಮಾಣವಾಗು ವದಕ್ಕಿಂತ ಮೊದಲೇ ಗಂಗಾಲಹರಿಯು ನಿರ್ಮಿಸಲ್ಪಟ್ಟಿರುತ್ತದೆಂಬುದು ಸ್ಪುಟವಾಗಿ ಕಂಡುಬರುವದು. ಆದದರಿಂದ ತತ್ಕಾಲದಲ್ಲಿ ನಿರ್ಮಿತ ಗಂಗಾಲಹರಿಯನ್ನು ಕೇಳಿ ಸಂತು Kಳಾದ ಗಂಗೆ ತನ್ನ ಕ್ರೋಡದಲ್ಲಿ ಜಗನ್ನಾಥನನ್ನು ವಿಲೀನನ್ನಾಗಿ ಮಾಡಿಕೊಂಡ ಳೆಂಬ ಜನವಾರ್ತೆಯು ಸಟಿಯಾದದ್ದೇ. ಪಂಡಿತರಾಜನ ವಿಷಯವಾದ ಎರಡನೇ ಲೋಕಪ್ರವಾದವು-ಪಂಡಿತರಾಜನು ದಿಲ್ಲೀವಲ್ಲಭವನ ಪಾರ್ಶ್ವಮಂಡಲವನ್ನಲಂಕರಿಸಲು ಲಲಿತವೂ, ಮಧುರವೂ, ಪ್ರಸನ್ನ ವೂ ಆದ ಪದಗಳ ವಿನ್ಯಾಸದಿಂದ ಹೃದಯಂಗಮವಾದ ಪದ್ಯಗಳಿಂದ ದಿಲೀಶ್ವರನ ಚಿತ್ತ ವನ್ನು ಆನಂದಪಡಿಸುತ್ತಿರಲು ಒಂದು ದಿವಸ ಒಬ್ಬ ಮಾಂಡಲಿಕ ಅರಸನು ಅಲ್ಲಿಗೆ ಬಂದನು. ಪಂಡಿತರಾಜನ ಅಲೌಕಿಕ ಪಾಂಡಿತ್ಯವನ್ನೂ ಅಸಾಮಾನ್ಯ ಕವಿತ್ವವನ್ನೂ ನೋಡಿ ವಿಸ್ಮಿತನಾದನು. ಇಂತಹ ಪಂಡಿತನೊಬ್ಬನು ತನ್ನ ಆಶ್ರಯದಲ್ಲಿರುವದು ಒಳ್ಳೆಯ ದೆಂದು ಭಾವಿಸಿ ಪಂಡಿತರಾಜನ ಎಡೆಗೆ ಬಂದು ಆದರದಿಂದ ಅನುರಾಗದಿಂದ ವಿಜ್ಞಾಪಿಸಿ ಧನು:- ಪಂಡಿತರಾಜನೇ! ನಿನ್ನ ದರ್ಶನದಿಂದ ಈಹೊತ್ತು ಧನ್ಯನಾದೆನು. ನನ್ನ ಜನ್ಮದ ಸಾಫಲ್ಯವಾಯಿತು. ಸುಕೃತದಿಂದ ದೊರೆಯತಕ್ಕ ನಿನ್ನ ಕೃಪಾಕಟಾಕ್ಷಕ್ಕೆ ಪಾತ್ರನಾದೆನು. ಪೂಜ್ಯನೇ ! ಇದರಂತೆ ಸರ್ವಕಾಲದಲ್ಲಿಯೂ ನೀನು ಸಹವಾಸದಿಂದ ನನ್ನನ್ನು ಪವಿತ್ರಗೊಳಿಸಬೇಕೆಂದು ಇಚ್ಚಿಸುವೆನು. ಆದುದರಿಂದ ನನ್ನ ಪ್ರಣಯವನ್ನು ವಿಫಲ ಗೊಳಿಸಬೇಡ, ಆರ್ಯಕುಲಸಂಭೂತನಾದ ನೀನು ಅನಾರ್ಯಕುಲೋತ್ಪನ್ನನಾದ ನನ್ನ