ಪುಟ:ಪಂಡಿತರಾಜ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ۔ عمه م م م م مرمرممرمر مهم 'ಆಳ - Y Y + + 2 - / + - *** * * ren- - - - ೧ry v * * /••• ಸಹವಾಸವನ್ನು ಧಿಕ್ಕರಿಸಬೇಡ. ನಾನು ನಾಮಂತನೆಂದು ಅನಾದರ ಪಡಬೇಡ. ನಿನ್ನ ಪರಿ ಚರ್ಯೆಯಲ್ಲಿ ಉತ್ಸುಕನಾದ ನನ್ನ ಮನೋರಥವನ್ನು ಪೂರ್ಣಮಾಡು, ಸೆರಗೊಡ್ಡಿ ಬೇಡಿಕೊಳ್ಳುವೆನು. ” ಇದನ್ನು ಕೇಳಿ ಪಂಡಿತರಾಜನು ಮುಗುಳುನಗೆಯಿಂದ ನಕ್ಕು ಮಾತನಾಡುತ್ತಾನೆ. दिल्लीश्वरो वा जगदीश्वरो वा मनारथान् पूरयितुं समर्थः ।। अन्यैर्नुपालै: किमुदयमानं शाकाय वा स्यालुवणाय वा स्यात् ।। ದಿಲೀಶ್ವರನು ಅಥವಾ ಜಗದೀಶ್ವರನು (ದೇವರು) ನನ್ನ ಮನೋರಥವನ್ನು ಪೂರ್ಣ ಮಾಡಲು ಸಮರ್ಥನಾಗುವನು. ಉಳಿದ ಅರಸುಗಿರಸುಗಳು ಕೊಡುವರೇನು; ಅದರಿಂದ ಆಗುವದಾದರೂ ಏನು? ಅವರು ಕೊಟ್ಟಿದ್ದು ಉಪ್ಪಿಗೆ ಅಥವಾ ಪಲ್ಯಕ್ಕೆ ನಾಕಾದರೆ ಸಾಕಾದೀತು !!! ಈ ಲೋಕಪ್ರವಾದರೂ ದಿಟವಾದದ್ದೆಂದು ನಿರ್ಣಯಿಸಲು ಅನ್ಯ ಪ್ರಮಾಣಗಳಿಲ್ಲ. ದಿಟವಾದರೂ ದಿಲೀಶ್ವರನ ಪಾರ್ಶ್ವವರ್ತಿಯು ಜಗನ್ನಾಥನು ಎಂಬ ಮಾತನ್ನೇ ಸಿದ್ದ ಪಡಿ ಸುವದು. ಅದು ಪ್ರಮಾಣಾಂತರಗಳಿಂದ ಸಾಧಿತವಾಗಿಯೇ ಇರುವದು. ಜಗನ್ನಾಥನ ವೈದುಷ್ಯವು ದೇವೀ ಪ್ರಸಾದದಿಂದ ಸುಸಿದ್ಧವಾದದ್ದೆಂದು ಒಂದು ಕಿಂವದಂತಿಯುಂಟು:-ಮೊದಲು ಗುರುಗಳ ಸಮೀಪದಲ್ಲಿ ವಿವಿಧಶಾಸ್ತ್ರಗಳನ್ನು ಕಲಿ ಯಲು ಉಪಕ್ರಮಿಸಿ ಜಗನ್ನಾಥನು ತನ್ನ ಸಹಾಧ್ಯಾಯಿಗಳ ಬುದ್ಧಿಯ ಜಾಜ್ವಲ್ಯತೆಯನ್ನು ಕಂಡು ವಿಷಾದಪಟ್ಟನು. ನಾನು ಮಂದಬುದ್ದಿಯಾಗಿರುವೆನಲ್ಲ! " ಏನು ಮಾಡಿದರೆ ಇವ ಕಿಗಿಂತ ಮೇಲಾದೇನು; ಎಂದು ಚಿಂತಿಸಿ ದೇವತೆಯನ್ನು ಶರಣು ಹೋಗುವದೇ ನೆಟ್ಟ ಗೆಂದು ತಿಳಿದು ಅಡವಿಗೆ ಹೋಗಿ ಮಹಾಕಾಲಿಯನ್ನು ಅರ್ಚಿಸಿದನು. ಅನೇಕ ವಿಧ ವಾದ ತಪಶ್ಚರ್ಯವನ್ನು ಮಾಡಿದನು. ಭಗವತಿಯು ಪ್ರಸನ್ನೆ ಯಾದಳು. (( ವತ್ತಾ ? ನಿನ್ನ ಅನನ್ಯ ಸುಲಭವಾದ ತಪಶ್ಚರ್ಯದಿಂದ ಸಂತುಷ್ಟೆಯಾಗಿರುವೆನು. ಏನು ವರವನ್ನು ಬೇಡುತ್ತೀ ಬೇಡು. ” ಹೀಗೆ ಪ್ರತ್ಯಕ್ಷಳಾಗಿ ಜಗನ್ನಾಥನೊಡನೆ ಮಾತನಾಡಿದಳು. ಜಗ ನಾಥನಾದರೂ ಪುಲಕಿತಶರೀರಯಸ್ವಿಯಾಗಿ ಅನಂದಬಾಷ್ಪಪರಿಪೂರಿತ ಲೋಚನ ನಾಗಿ ಆನಂದರಸಮಯಮಾನಸನಾಗಿ ಭಗವತಿಯನ್ನು ಸಹಸ್ರಶಃ ನಮಸ್ಕರಿಸಿ ಚಂದ ನಾದ್ಯುಪಚಾರಗಳಿಂದ ಆಕೆಯನ್ನು ಪೂಜಿಸಿ ತನ್ನ ಸವಿಸ್ತರ ವೃತ್ತಾಂತವನ್ನೆಲ್ಲ ಆಕೆಗೆ ಹೇಳಿದನು. ಆಗ ದೇವಿಯು ಈ ಪದ್ಯವನ್ನು ಅಂದಳು. आकुरु देशं विचर म कुरुपरवादिनिर्जये शंकां । ಶಕ agile |