ಪುಟ:ಪಂಡಿತರಾಜ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ೧೬ hhhh/* * aw , ಸ್ವರ್ಶದಿಂದ ಮೋಹಗೊಂಡು ಹರದೀಕ್ಷಿತನ ಪ್ರಜ್ಞೆಯು ಇದ್ದೂ ಇಲ್ಲದಂತಾಯಿತು. ಜಗ ನಾಥನು ಸಿದ್ದಾಂತಿಸಿದಂತೆಯೇ ಹರದೀಕ್ಷಿತನು ಒಡಂಬಟ್ಟನು. ಕಡೆಗೆ ಜಗನ್ನಾಥನೇ ವಿಜಯಿಯಾದನು. ಮನೆಗೆ ತಿರುಗಿ ಬಂದಬಳಿಕ ಹರದೀಕ್ಷಿತನು ವಿನಿವೃತ್ತ ಮೋಹನಾಗಿ ಸಭೆಯಲ್ಲಿ ಆಡಿದ ಜಗನ್ನಾಥನ ವಚನಗಳನ್ನೂ ತನ್ನ ಮೂಕಪತ್ರವನ್ನೂ ನೆನಿಸಿನೆನಿಸಿ ತನ್ನೊಳಗೆ ತಾನೇ ನಕ್ಕನು. “ ಮಾಕುರು ಪರವಾದಿ ನಿರ್ಜಯೇ ಶಂಕಾಂ ' ಎಂದು ಮಹಾಕಾಲಿಯಿಂದ ವರ ವನ್ನು ಪಡಕೊಂಡ ಜಗನ್ನಾಥನು ಮತ್ತೇಕೆ ಪರವಾದಿಗಳನ್ನು ಗೆಲ್ಲಲಿಕ್ಕೆ ಮಂತ್ರಸಂಸ್ಕೃ ಶವಾದ ಅಂಗಿಯನ್ನು ಅಂಗೀಕರಿಸಿದನೋ ! ! ! ಜಗನ್ನಾಥನ ವಿಷಯವಾಗಿ ಇನ್ನೊಂದು ಲೋಕಪ್ರವಾದವೇನಂದರೆ-ಮೇಷ್ಟ ವಧುವನ್ನು ಜಗನ್ನಾಥನು ಲಗ್ನವಾದನಂತರ ತಾರುಣ್ಯವನ್ನೆಲ್ಲ ದಿಲ್ಲಿಯಲ್ಲಿ ಕಳೆದು ವಾರ್ಧ ಕ್ಯದಲ್ಲಿ ಕೇಶಪಾಶವು ಶರಚ್ಚಂದ್ರನ ಕಾಂತಿಯನ್ನು ಧರಿಸಲು, ಹಲ್ಲುಗಳು ಕಳಚಿಹೋಗಿ ರಲು, ಹೆಂಡತಿಯೊಡನೆ ಕಾಶೀಪಟ್ಟಣಕ್ಕೆ ಬಂದು ಮಂದಾಕಿನೀ ತೀರದಲ್ಲಿ ವಾಸಮಾಡಿ ದನು. ಒಂದು ದಿವಸ ನಸುಕಾಗಿದ್ದರೂ ಜಗನ್ನಾಥನು ಭಾಗೀರಥೀ ಘಟ್ಟದಲ್ಲಿ ಯವನಿ ಯಿಂದೊಡಗೂಡಿ ಸುಸ್ತನಾಗಿದ್ದನು. ಅವನ ಬಿಳಿದಾದ ಕೇಶಕಲಾಪವು ಹೊರಗೆ ಕಾಣಿ ಸುತ್ತಿತ್ತು. ಅದನ್ನು ನೋಡಿ ಪವಿತ್ರವಾದ ಜಾಹ್ನವೀಜಲದಲ್ಲಿ ಪ್ರಭಾತಕಾಲದಲ್ಲಿ ಸ್ನಾನ ಮಾಡಿ ಹೋಗುತ್ತಿದ್ದ ಅಪ್ಪಯ್ಯ ದೀಕ್ಷಿತರು ಎಲಾ ಇನ್ನೂ ಈತನು ಮಲಗಿರುವನಲ್ಲ ? ಎಲ್ಲರೂ ಪ್ರಾತಃಕಾಲದಲ್ಲಿ ಸ್ನಾನಮಾಡಿ ಹೋಗುತ್ತಾರೆ. ಇವನನ್ನು ಎಚ್ಚರಿಸುವ ಎಂದು

ಕಿಂ ನಿಶಂಕಂ ಶೇಷಶೇಷ ವಯಸಿ ತ್ವಮಾಗತೇ ಮೃತ್‌ 11 ,

ಪ್ರಾತಃಕಾಲವಾಗಿದ್ದರೂ ಇನ್ನೂ ಪವಿತ್ರವಾದ ಗಂಗಾತಟಾಕದಲ್ಲಿ ಮುದುಕ ನಾಗಿದ್ದರೂ ಮಲಗಿಕೊಂಡಿರುವೆಯಲ್ಲ ? ಈ ತೆರದ ಮಾತನಾಡಲು ಜಗನ್ನಾಥನು ಎಚ್ಚತ್ತು ಮಾತನಾಡುವವರು ಯಾರು ಎಂದು ಮುಸುಕು ತೆಗೆದು ನೋಡಿದನು. ಆಗ ಆಸ್ಪಯ್ಯ ದೀಕ್ಷಿತನು ತನಗೆ ಅಜಯ್ಯನೂ ಅಪ್ರತಿಭಟನೂ ಆದ ಪಂಡಿತರಾಜನನ್ನು ನೋಡಿ ಪುನಃ ಅಥವಾ ಸುಖಂ ಶಮೀಥಾ ನಿಕಟೇ ಜಾಗರ್ತಿ ಜಾಹ್ನವೀ ಭವತಃ > ನೀನೇ ನನ್ನ ಪ್ರಾ! ಕುಶಲವಾಗಿ ಮಲಗಿಕೊಳ್ಳು. ಹತ್ತರ ಭಾಗೀರಥಿಯು ಎಚ್ಚರವಾಗಿ ದ್ದಾಳಷ್ಟೇ !!! ಎಂದು ಅಂದರು - ಜಗನ್ನಾಥಪಂಡಿತನ ವಿಷಯವಾಗಿ ಕೇಳಲ್ಪಡುವ ಇನ್ನೊಂದು ವಾರ್ತೆಯೇ ನಂದರೆ:-ಪಂಡಿತರಾಜನ ರಾಮನೆಂಬ ಪೌತ್ರನೊಬ್ಬನು ಬಾಲಕನಿರುವಾಗ್ಗೆ ಇತರ ಹುಡು ಗರ ಕೂಡ ಆಡಲಿಕ್ಕೆ ಹೋಗಿದ್ದನು. ಆ ಆ ಬೇಸಾಯದ ಹುಡುಗರು ಆ ಆ ಆಟಿಗೆಯ ಸಾಮಾನುಗಳನ್ನು ತೆಗೆದುಕೊಂಡು ಬಂದಿದ್ದರು. ಬಡಿಗರ ಹುಡುಗನು ಸಣ್ಣದಾದ ಚಕ್ಕಡಿ ಯನ್ನೂ ಕಟ್ಟಿಗೆಯ ಎತ್ತುಗಳನ್ನೂ ತಂದಿದ್ದನು. ಕುಂಬಾರ ಹುಡುಗನು ಮಣ್ಣಿನ ಸಾಮ