ಪುಟ:ಪಂಡಿತರಾಜ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. • • • • • • • • • • • • • • • ..... ನುಗಳನ್ನು ತಂದಿದ್ದನು. ಆ ಹುಡುಗರು ರಾಮನನ್ನು ಕುರಿತು:-ಈ ಹಾರುವರ ಹುಡು ಗನು ಏನೂ ತಂದಿಲ್ಲ. ನಾವೇಕೆ ಆಡಲಿಕ್ಕೆ ಕರೆದುಕೊಳ್ಳಬೇಕು ಎಂದು ಅಂದರು. ಹಾಗು ಏನನ್ನಾದರೂ ತೆಗೆದುಕೊಂಡು ಬಂದರೆ ನಿನ್ನನ್ನು ಕರಕೊಳ್ಳುವೆವೆಂದು ಹಟ ತೊಟ್ಟರು. ಆಗ ರಾಮನು ತನ್ನ ಪಿತಾಮಹನ ಹತ್ತಿರ ಬಂದು-ಮುತ್ಯಾ ನನ್ನನ್ನು ಹುಡುಗರು ಕರಕೊಳ್ಳುವದಿಲ್ಲವಂತೆ, ಏನಾದರೂ ಕೊಡೋ; ಕೊಟ್ಟರೇ ಆಡಲಿಕ್ಕೆ ಕರ ಕೊಳ್ಳುತ್ತಾರಂತೆ, ಎಂದು ಕಾಡಹತ್ತಿದನು. ಮೊಮ್ಮಗನ ವಚನಗಳನ್ನು ಕೇಳಿದ ಕೂಡಲೆ ಅಶ್ವಧಾಟಿಯ ಹದಿನಾಲ್ಕು ಶ್ಲೋಕ ಗಳನ್ನು ರಚಿಸಿ ಕಾಗದದ ಮೇಲೆ ಬರೆದು ಆ ಕಾಗದವನ್ನು ರಾಮನ ಕೈಯಲ್ಲಿ ಕೊಟ್ಟು ಇದನ್ನು ತಕ್ಕೊಂಡು ಹೋಗು, ಕರಕೊಳ್ಳುತ್ತಾರೆಂದು ಹೇಳಿದನು. ಅದನ್ನು ತೆಗೆದುಕೊಂಡು ರಾಮನು ಇತರ ಹುಡುಗರ ಹತ್ತಿರ ಹೋಗಲು ಅವರು «« ಹೋಗೆಲೆ ಹಾರಬಡ್ಡಿಮಗನೇ; ಇದನ್ನು ತಕ್ಕೊಂಡು ನಾವೇನು ಮಾಡುವಾ ? ನಾವು ನಿನ್ನನ್ನು ಕರಕೊಳ್ಳುವದಿಲ್ಲ. ಇದನ್ನು ತಕ್ಕೊಂಡು ನಿಮ್ಮ ಮುತ್ತಾನ ಕೊರಳಲ್ಲಿ ಕಟ್ಟು ಹೋಗು” ಎಂದು ಅಂದರು. ರಾಮನು ಕಾಗದವನ್ನು ತಕ್ಕೊಂಡು ಹಾಗೇ ಅಳುತ್ತ ತಿರುಗಿ ಪಿತಾಮಹನ ಹತ್ತಿರ ಹೋದನು. ಆಗ ಜಗನ್ನಾಥನು ಪೌತ್ರನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಸಮಾಧಾನ ಪಡಿಸಿ ಮೊಮ್ಮಗನ ಸರ್ವಾಂಗವನ್ನು ದಿವ್ಯದೃಷ್ಟಿಯಿಂದ ನೋಡಿದನಂತೆ. ಅದರಿಂದ ಆ ಹುಡುಗನಿಗೆ ದಿವ್ಯಜ್ಞಾನವಾಗಲು ಆ ಹದಿನಾಲ್ಕು ಶ್ಲೋಕಗಳಿಂದ ಉಪದೇಶ ಮಾಡಿದನಂತೆ - | रामनाम्नः स्वपौत्रस्य कामनापूरणोत्सुकः ।। अश्वधार्टीम् जगन्नाथ विश्वहृद्यामरचत् ।।

  • ಅರೀರಚತ್ ' ಪ್ರಯೋಗವು ಪಾಣಿನೀಯ ನಿಯಮದಿಂದ ಸಿದ್ಧವಾದುದಲ್ಲ. ( ಅಚೀಕರತ್ > ಇರುವದು ಯುಕ್ತವೆಂದು ವಿಬುಧರ ಅಭಿಪ್ರಾಯ. ಅಶ್ವಧಾಟೀಕಾವ್ಯವು ಸರಲವಾದುದೂ ಮನೋಹರವಾದುದೂ ಇರುವದು. ಕವಿಯು ಪ್ರಾಸವನ್ನು ಅನುಸ ರಿಸಿ ನಡೆದಿದ್ದರೂ ಪ್ರಾಯ ಕ್ಲಿಷ್ಟತೆಯು ಬಂದಿಲ್ಲ. ವಾದಿರಾಜಸ್ವಾಮಿಗಳವರ ಅಶ್ವಧಾ ಟಿಗೂ ಇದಕ್ಕೂ ಮಹದಂತರವುಂಟು. ಅದು ಕೇವಲ ಕ್ಲಿಷ್ಟವಾಗಿದೆ, ಅಶ್ವಧಾಟಿಯನ್ನು ರಚಿಸಿದ ಜಗನ್ನಾಥನೇ ಬೇರೆಯೆಂದೂ ಕೆಲವರ ಅಭಿಪ್ರಾಯ.

ಇನ್ನೊಂದು ಅಖ್ಯಾಯಿಕೆ. ದಿಲೀಪನಿಗೆ ಒಬ್ಬ ಮೇಚ್ಛ ಜಾತೀಯ ಪುರೋಹಿತನಿದ್ದನು. ಅವನು ಸಂಸ್ಕೃತ ಭಾಷೆಯಲ್ಲಿ ಸುತರಾಂ ನಿಷ್ಣಾತನಿದ್ದನು. ಶಾಸ್ತ್ರ ಸಾಗರವನ್ನು ಉಲ್ಲಂಘಿಸಿದ್ದನು. ಅಲ್ಲಲ್ಲಿ ಪಂಡಿತರಿದ್ದಲ್ಲಿಗೆ ಹೋಗಿ ಅವರೊಡನೆ ವಾದವಿವಾದ ಮಾಡಿ ಅವರನ್ನು ಸೋಲಿಸುತ್ತಿ