ಪುಟ:ಪಂಡಿತರಾಜ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ೨೫ AJAAYAPU+J # ••• • • • •

  • * * * * * * * * * * * *

ಸಂತುಷ್ಟಃ ಕಮತಾಧಿಪಸ್ಯ ಕವಿತಾಮಾಕರ್ಣ್ಯ ತದ್ವರ್ಣನಂ | ಶ್ರೀಮತ್ಸಂಡಿತರಾಜ ಪಂಡಿತ ಜಗನ್ನಾಥೋ ವ್ಯಧಾಸೀದಿದಂ || ಕಮತಾಧಿಪನಾದ ಪ್ರಾಣನಾರಾಯಣನೆಂಬ ಅರಸನ ಕವಿತೆಗಳನ್ನು ಕೇಳಿ ಸಂತು ಮೂನಾದ ಜಗನ್ನಾಥನು ಅವನ ವರ್ಣನಪರವಾದ ಕಾವ್ಯವನ್ನು ರಚಿಸಿದನೆಂದು ಈ ಶ್ಲೋಕದಲ್ಲಿ ಹೇಳಿದ್ದಾನೆ. ಈ ಪದ್ಯದಿಂದಲೇ ಪೂರ್ವದಲ್ಲಿ ಪ್ರಕಾಶಿತವಾದ ದಿಲೀಶ್ವರೋ ನಾ ಜಗದೀಶ್ವರೋ ವಾ ' ಎಂಬ ಶ್ಲೋಕಮೂಲಕವಾದ ಆಖ್ಯಾಯಿಕೆಯ ಸತ್ವವು ಹಗ ರಾಗುವದು. ಜಗನ್ನಾಥನು ದಿಲೀಶ್ವರನ ಹೊರತು ಉಳಿದ ಅರಸರನ್ನು ತೃಣಕ್ಕೆ ಬಗೆದಿ ದ್ದರೆ ಪ್ರಾಣನಾರಾಯಣನನ್ನೇಕೆ ಆಶ್ರಯಿಸಿದನು ? ಈ ಪದ್ಯದಲ್ಲಿ ಪಂಡಿತರಾಜ ಎಂಬ ಪದದಿಂದ ತನ್ನ ಹೆಸರನ್ನು ಉಲ್ಲೇಖಿಸಿರುವದರಿಂದ ದಿಲ್ಲೀವಲ್ಲಭ ಶ್ರಯಣೋತ್ತರದಲ್ಲಿ ಈ ಕಾವ್ಯವನ್ನು ರಚಿಸಿರಬೇಕೆಂದು ತಿಳಿಯಲು ಅಡ್ಡಿಯಿಲ್ಲ. ಯಾಕಂದರೆ ದಿಲೀಪತಿಯಾದ ಶಹಾಜಹಾನದಿಂದಲೇ ಪಂಡಿತರಾಜ ಪದವಿಯನ್ನು ಜಗನ್ನಾಥನು ಪಡೆದಿದ್ದಾನೆಂದು ಪ್ರಮಾಣಸಿದ್ದವಾದ ಮಾತು. ಈ ಕಾವ್ಯವು ೫೩ ಪದ್ಯಗಳಿಂದ ಒಡಗೂಡಿದೆ. ಈ ಕಾವ್ಯದಿಂದ ಜಗನ್ನಾಥನ ಅಲಂಕಾರಶಾಸ್ತ್ರ ಪಾರಂಗಮತೆಯು ವ್ಯಕ್ತವಾಗುವದು. ಅಮೃತಲಹರಿ. ಈ ಕಾವ್ಯವಾದರೂ ಕಾವ್ಯಮಾಲೆಯ ಪ್ರಥಮಗುಚ್ಚದಲ್ಲಿ ಗುಂಫಿತವಾಗಿರುವದು. ಈ ಕಾವ್ಯವು ಯಮುನಾವರ್ಣನಪರವಾದದ್ದು. ಈ ಕಾವ್ಯದಲ್ಲಿ ಹನ್ನೊಂದು ಶ್ಲೋಕ ಗಳಿವೆ. ಈ ಕಾವ್ಯದ ಮೊದಲನೆಯ ಪದ್ಯವು:- ಮಾತಃ ಪಾತಕಪಾತಕಾರಿಣಿ, ತವ ಪ್ರಾತಃ ಪ್ರಯಾತಸ್ತಮಂ || ಯಃ ಕಾಲಿಂದಿ, ಮಹೇಂದ್ರನೀಲ ಪಟಲಗ್ಲಾಂ ತನುಂ ವಿಕ್ಷತೇ || ತನ್ಯಾರೋಹತಿ ಕಿಂ ನಧನ್ಯಜನುಷಃ ಸ್ವಾಂತಂ ನಿತಾಂತೋಲ್ಲಸ | ನೀಲಾಂಭೋಧರವೃಂದವಂದಿತರುಚಿರ್ದೇವೋರಮಾವಲ್ಲಭಃ || ಮಾತೇ ಯಮುನೇ ? ಪಾತಕಗಳನ್ನು ಹರಣಮಾಡುವ ಕಲಿಂದಪುತ್ರಿಯೆ, ಪ್ರಾತಃ ಕಾಲದಲ್ಲಿ ಯಾವನು ನಿನ್ನ ಪವಿತ್ರವಾದ ತೀರದಲ್ಲಿ ಬಂದು ಇಂದ್ರನೀಲರತ್ನದಂತೆ ಥಳ ಥಳಿಸುವ ನಿನ್ನ ಕಪ್ಪು ಶರೀರವನ್ನು ನೋಡುವನೋ, ಅವನ ಸ್ಮರಣಸರಣಿಗೆ ನೀಲಮೇಘ ಕಾಂತಿಯುತನಾದ ಶ್ರೀಕೃಷ್ಣನು ಬರಲಿಕ್ಕೆ ಬೇಕು. ಇಲ್ಲಿ ಸ್ಮತ್ಯಲಂಕಾರವು ಪ್ರತಿಪಾದಿಸಲ್ಪಟ್ಟಿದೆ. ಈ ಕಾವ್ಯದ ಕಡೆಯ ಪದ್ಯವು ಅಯಂ ಪಂಡಿತರಾಜೇನ ಶ್ರೀಜಗನ್ನಾಥ ಶರ್ಮಣಾ | ಸವಃ ಕಲಿಂದಕನ್ಯಾಯಾ ನಿರ್ಮಲೋ ನಿರಮಿಯತ 1).