ಪುಟ:ಪಂಡಿತರಾಜ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, ITY

  • * 4 + y + * * * * * *
  • * * * * * * * v v d / + + + 1 + 7 + 4 + 4 + # # # # # # 33 +++ve

ಇದರಲ್ಲಿ ಪಂಡಿತರಾಜನೆಂಬ ಬಿರುದು ಉಪನ್ಯಸ್ತವಾಗಿರುವದರಿಂದ ದಿಲ್ಲಿ ಅರಸನ ಆಶ್ರಯದ ಉತ್ತರದಲ್ಲಿಯೇ ಈ ಕಾವ್ಯವಾದರೂ ರಚಿಸಲ್ಪಟ್ಟಿರಬೇಕು. ಈ ಕಾವ್ಯವನ್ನು ಬರೆಯುವಾಗ್ಗೆ ಜಗನ್ನಾಥನು ರಾಜಸೇವೆಯಿಂದ ನಿರ್ವಿಣ್ಣನಾ ದಂತ ತೋರುವದು. ದಾನಾಂಧೀಕೃತಗಂಧಸಿಂಧುರಘಟಾಗಂಡ ಪ್ರಣಾಲೀ ಮಿಲ | ಧೃಂಗಾಲೀ ಮುಖರೀಕೃತಾಯ ನೃಪತಿದ್ವಾರಾಯ ಬದ್ಗಂಜಲಿಃ || ತೈತ್ತೀರೇ ಫಲಮೂಲಶಾಲಿನಿ ಮಮಶ್ಲಾಘಮುರೀಕುರ್ವತೋ | ವೃತ್ತಿಂ ಹಂತ ಮುನೇಃ ಪ್ರಯಾಂತು ಯಮುನೇ ವೀತಜ್ವರಾ ವಾಸರಾಃ || ಮದೋನ್ಮತವಾದ ಆನೆಗಳ ಕುಂಭಸ್ಥಳಗಳಲ್ಲಿ ಬಂದು ಕುಳಿತ ಭ್ರಮರಗಳ ಗುಂಜಾರವದಿಂದ ಮುಖರೀಕೃತವಾದ ಅರಸನ ಮಂದಿರದ ದ್ವಾರಕ್ಕೆ ದೂರದಿಂದಲೇ ನಮಸ್ಕಾರ ಮಾಡುವೆನು. ಯಮುನೇ ಇನ್ನು ಅರಸನ ಸೇವೆಯು ಸಾಕು. ನಿನ್ನ ತೀರ ದಲ್ಲಿ ವಾಸಮಾಡಿ ಫಲಮೂಲಾದಿಗಳನ್ನು ಭಕ್ಷಿಸಿ ಮುನಿವೃತ್ತಿಯನ್ನು ಅಂಗೀಕರಿಸಿದ ಮುನಿಯ ದಿವಸಗಳು ಸುಖವಾಗಿ ಹೋಗಲಿ. “ ಗಂಗೆಯಲ್ಲಿಯೇ ಜಗನ್ನಾಥನ ದೃಢವಾದ ಪ್ರೀತಿಯು. ಯಾಕಂದರೆ ಪಂಡಿತ ರಾಜನು ಗಂಗಾಲಹರಿಯಲ್ಲಿ ಕೃತಂ ಪ್ರಾಯಶ್ಚಿತ್ತೈರಲಮಥ ತಸೋದಾನವಿಭತ್ಯೆ ? ಮೊದಲಾದವುಗಳಲ್ಲಿ ಭಗವತಿಯಾದ ಭಾಗೀರಥಿಯ ಪಾಪಾಪನೋದನಪಟುತ್ವವನ್ನು ವರ್ಣಿಸಿರುವನು ” ಎಂದು ಕೆಲವರು ಹೇಳುವರು. ಯಮುನಾವರ್ಣನದಲ್ಲಿಯೂ ಅಂತಹ ಪ್ರೀತಿವ್ಯಂಜಕ ಉಕ್ತಿಗಳುಂಟು:- ಸ್ವರ್ಣಸ್ತೆಯ ಪರಾನಪೇಯ ರಸಿಕಾನ್‌ಪಾಥಃ ಕಣಾಸ್ತ್ರಯದಿ | ಬ್ರಹ್ಮ ಘನ ಗುರುತಲ್ಪಗಾನಪಿ ಪರಿತ್ರಾತುಂ ಗ್ರಹೀತವ್ರತಾಃ | ಪ್ರಾಯಶ್ಚಿತ್ತಕುಲೈರಲಂ ತದಧುನಾ ಮಾತಃ ಪರೇತಾಧಿಪ || ಪ್ರೌಢಾಹಂಕೃತಿಹಾರಿ ಹುಂಕೃತಿ ಮುಚಾಮಿ ತವಸ್ರೋತಸಾಂ || ಸುವರ್ಣ ಚೋರರನ್ನು, ಅಪೇಯಪಾನ ಅಭಕ್ಷ್ಯಭಕ್ಷಣಮಾಡಿದವರನ್ನು ಬ್ರಾಹ್ಮಣ ರನ್ನು ಕೊಂದವರನ್ನು, ಗುರುಪತ್ನಿಗಮನಮಾಡಿದವರನ್ನು ರಕ್ಷಿಸಲಿಕ್ಕೆ ನಿನ್ನ ನೀರಿನ ಕಣಗಳು ವ್ರತವನ್ನು ತೊಟ್ಟಿರುತ್ತವೆ. ಯಮನ ಪ್ರೌಢವಾದ ಅಹಂಕಾರವನ್ನು ಹರಣ ಮಾಡುವ ಹುಂಕಾರಧ್ವನಿಗೆಯ್ಯುವ ನಿನ್ನ ಪ್ರವಾಹದ ಮುಂದೆ ಇತರ ಪ್ರಾಯಶ್ಚಿತ್ತಗ ಳನ್ನು ತೆಗೆದುಕೊಂಡು ಮಾಡುವದೇನು ? ಸುಧಾಲಹರಿ. ಈ ಕಾವ್ಯವು ಸೂರ್ಯನಾರಾಯಣಸ್ತುತಿಪರವಾದದ್ದು. ಜಗನ್ನಾಥನ ಪ್ರೀತಿಯು ಅರ್ಥಾಲಂಕಾರಗಳಲ್ಲಿ ನಿರುಪಮವಾಗಿರುವಂತೆ ಶಬ್ದಾಲಂಕಾರಗಳಲ್ಲಿಯೂ ನಿರುಪಮವಾ