ಪುಟ:ಪಂಡಿತರಾಜ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ,

  • * * *

ಕೀಲಾಲೈಃ ಕುಂಕುಮಾನಾಂ ನಿಖಿಲಮಪಿಜಗಜ್ಜಾಲಮೇತ ಸಿಕ್ತಂ || ಮುಕ್ತಾಶ್ವೇತಚ್ಛಂಗಾ ವಿದಲಿತ ಕಮಲಕ್ರೋಡಕಾರಾಗೃಹೇಭ್ಯತಿ || ಉತೃಷ್ಯಂಗೋಸಹಸ್ರಂ ಬಹುಲ ಕಲಕಲಃ ಶ್ರಿಯತೇಚದ್ವಿಜಾನಾಂ | ಭಾಗ್ಯರ್ವೃಂದಾರಕಾಣಾಂ ಹರಿಹಯಹರಿತಾ ಸೂಯತೇ ಪುತ್ರರತ್ನ೦ || ದೇವತೆಗಳ ಭಾಗ್ಯದಿಂದ ಇಂದ್ರದಿಕ್ಕೆಂಬ ( ಪೂರ್ವ ) ರಮಣಿಯು ಸುತನನ್ನು ಹಡೆದಳು. ಎಲ್ಲ ಜಗತ್ತು ಕುಂಕುಮದ ನೀರಿನಿಂದ ಸಿಂಪಡಿಸಲ್ಪಟ್ಟಿತು. ಅರಳಿದ ಅರ ವಿಂದಗಳೆಂಬ ಕಾರಾಗಾರದಿಂದ ಭ್ರಮರಗಳು ಬಿಡಲ್ಪಟ್ಟವು. ನಾವಿರಾರು ಗೋಗಳನ್ನು ದಾನಮಾಡಿದರು. ದ್ವಿ ಜಗಳ ( ಬ್ರಾಹ್ಮಣ, ಪಕ್ಷಿ ) ಕಲಕಲವು ಕೇಳಲ್ಪಟ್ಟಿತು. ಈ ಕಾವ್ಯದಲ್ಲಿ ಅನುಪ್ರಾಸಬಾಹುಳ್ಯವು ಮೇಲಿಂದ ಮೇಲೆ ಕಂಡುಬರುವದು. ಅದರಲ್ಲಿ ವಿಶೇಷವಾಗಿ ಕೆಲವು ಶ್ಲೋಕಗಳಲ್ಲಿ ಕಂಡುಬರುವದು:- ಗಿರ್ವಾಣಗ್ರಾಮಣೀಭಿರ್ಗಗನತಲಗತ್ಯೆರ್ಗೀ ರ್ಭಿ ರುದ್ಗೀಥ ಗಾಭಿಃ | ಗಂಧರ್ವೈಶ್ವಾಪಿಗೀತಾ ಗುಣಗಣಗರಿಮೋದ್ಧಾರಿ ಗಾಧಾಸಹಸ್ಕೃತಿ || ಗಾಹಂ ಗಾಹಂ ಗೃಹಾಲೇರಗತಿಕಗದಿನಾಂ ಗಂಧಯಂತೋಗದಾರ್ತಿ೦ | ಗ್ಲಾನಿಗ್ರಾಮಂ ಗ್ರಸಂತಾಂ ಗ್ರಹರುಕ ಗುರವೋ ಗೋಪತೇರ್ಗೋ ವಿಲಾನಾಃ || ದೇವತೆಗಳಿಂದಲೂ ಗಂಧರ್ವರಿಂದಲೂ ಗಾಯನಗಳಿಂದ ಹೊಗಳಲ್ಪಡುವ ಮನೆ ಮನೆಗಳಲ್ಲಿ ಸೇರಿ ರೋಗಿಗಳ ರೋಗೋವದ್ರವನ್ನು ನಾಶಮಾಡುವ ಇತರ ಗ್ರಹ ಗಳಿಗೆ ಕಾಂತಿಯನ್ನುಂಟುಮಾಡುವ ಸೂರ್ಯಕಿರಣಗಳು ನಮ್ಮ ಆಲಸ್ಯವನ್ನು ಹೊಡೆ ದೋಡಿಸಲಿ. ಜೀವಾತುರ್ಜಾಡ್ಯ ಜಾಲಾಧಿಕ ಜನಿತರುಜಾಂ ತಪ್ತಚಾಂಬೂನದಾಭಂ | ಜಂಘಾಲಂ ಚಾಂಟಿಕಾನಾಂ ಜಲಧಿಜಠರತೋ ಬೃಂಭಮಾಣಂ ಜಗತ್ಯಾಂ || ಜೀವಾಧಾನಂ ಜನಾನಾಂ ಜನಿತಮಧರುಚೋ ಜೀವಜ್ಜೆವಾತೃಕಾದೇಃ | ಜ್ಯೋತಿರ್ಜಾಜ್ವಲ್ಯಮಾನಂ ಜಲಜಹಿತಕೃತೋ ಜಾಯತಾಂ ಜಯಾಯ || ಜಾಡ್ಯದಿಂದ ಹುಟ್ಟಿದ ರೋಗಕ್ಕೆ ಜೀವನೌಷಧಿಯೂ, ತಪ್ತ ಸುವರ್ಣದಂತೆ ಕಾಂತಿ ಮಂತವಾದುದೂ, ವೇಗವುಳ್ಳವುಗಳಲ್ಲಿ ವೇಗವುಳ್ಳದ್ದೂ, ( ಪ್ರಕಾಶವು ತೀವ್ರ ವೇಗವು ಇದ್ದು ) ಸಮುದ್ರದ ಮಧ್ಯದಿಂದ ಜಗತ್ತಿನಲ್ಲಿ ಪ್ರಕಾಶವನ್ನು ಹೊಂದತಕ್ಕದ್ದೂ, ಜನರ ಜೀವನಾಧಾರವೂ, ಚಂದ್ರಹೃಸ್ಪತ್ಯಾದಿ ಗ್ರಹಗಳ ಪ್ರಕಾಶದ ಜನಕವೂ ಕಮಲಗಳಿಗೆ ಹಿತವನ್ನುಂಟುಮಾಡುವದೂ, ಆದ ಸೂರ್ಯನ ಬಾಜ್ವಲ್ಯಮಾನವಾದ ಜ್ಯೋತಿಯು ನಿಮಗೆ ಜಯವನ್ನುಂಟುಮಾಡಲಿ. ಈ ಕಾವ್ಯದಲ್ಲಿ ಒಟ್ಟು ಮೂವತ್ತು ಪದ್ಯಗಳಿವೆ. ಇದಕ್ಕೆ ಟೀಕೆಯಿಲ್ಲ. ಟಿಪ್ಪಣಿ ಯಿಲ್ಲ. ಕಾವ್ಯಮಾಲೆಯ ಪ್ರಥಮಗುಚ ದಲ್ಲಿ ಗುಂಫಿತವಾಗಿರುವದು,