ಪುಟ:ಪಂಡಿತರಾಜ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ಅಮೆ, •1/vv - - -

  • • 1 • • • • • • • •Y/wwY

ಪಿಯಷಲಹರಿ. ( ಗಂಗಾಲಹರಿ) ಈ ಲಹರಿಯು ಅತೀವಪ್ರಥಿತವಾದುದು; ಇದರಲ್ಲಿಯ ಸರಸಸರಲವಾದ ಸರಣಿ ಯಿಂದ ಅನೇಕರು ಮೋಹಗೊಂಡಿದ್ದಾರೆ. ಇದು ಅನೇಕ ಜನರ ಮುಖಸ್ಥವಾಗಿರುತ್ತದೆ. ಇದರಲ್ಲಿಯ ಮೊದಲನೆಯ ಪದ್ಯವಿದು. ವಾಚಕರೇ ಸಾವಧಾನದಿಂದ ಪಂಡಿತರಾಜನ ಅಮೃತಮಯವಾದ ವಾಣಿಯನ್ನು ಕೇಳಿರಿ:- ಲವಸುಧಾಯಾಃ ಕಿಮಪಿತನ್ ಮಹೈಶ್ವರ್ಯ೦ ಲೀಲಾಜನಿತಜಗತಃ ಖಂಡಪರಶೋಃ | ಶ್ರುತೀನಾಂ ಸರ್ವಸ್ವಂ ಸುಕೃತ ಮಥಮೂರ್ತ೦ ಸುಮನನಾಂ ಸುಧಾಸೋದರ್ಯಂ ತೇ ಸಲಿಲಮತಿವಂ ನಃ ಶಮಯತು || ಮಾತೇ ಗಂಗೇ ! ನಿನ್ನ ಜಲದ ಮಾಹಾತ್ಮವನ್ನು ಎಷ್ಟೆಂದು ವರ್ಣಿಸುವ ವೃದ್ದಿಂಗತವಾದ ಪ್ರಥ್ವಿಯ ಮಹದ್ದಾಗ್ಯವೇ ಇದು. ಲೀಲೆಯಿಂದ ಜಗವನ್ನು ಹುಟ್ಟಿಸುವ ಸಾಕ್ಷಾತ್ ಶಂಕರನ ಐಶ್ವರ್ಯವೇ “ಈ ಜಲವು. ವೇದಗಳ ಸರ್ವಸ್ವವು ದೇವತೆಗಳ ಪ್ರತ್ಯಕ್ಷ ಪುಣ್ಯವು. ಸುಧೆಯ ಸೋದರವು. ಇಂತಹ ನಿನ್ನ ಜಲವು ನಮ್ಮ ಅಕಲ್ಯಾಣ ವನ್ನು ನಾಶಮಾಡಲ. ಈ ಕಾವ್ಯದಲ್ಲಿದ್ದ ಇದೊಂದೇ ಪದ್ಯವನ್ನು ನೋಡಿದರೆ ಸಾಕು, ಪಂಡಿತರಾಜನ ಅಸಾಮಾನ್ಯ ಕವಿತ್ವ ಶಕ್ತಿಯು ಗೊತ್ತಾಗುವದು. ಈ ಪದ್ಯದಲ್ಲಿ ಹೇತ್ವಾದ್ಯಲಂಕಾರಗಳು ಸಂಸ್ಕೃಷ್ಟವಾಗಿವೆ. ಮನೋಹರವಾದ ವೈದರ್ಭೀ ರೀತಿಯು ಕಂಗೊಳಿಸುವದು. ಸಹ ದಯ ಹೃದಯಹಾರಿಯಾದ ಪ್ರನಾದಗುಣವು ಶೋಭಿಸುತ್ತಿರುವದು. ಏನು ರಚನೆಯ ಅಕ್ಲಿಷ್ಟತೆಯೋ !!! ಏನು ಮಾಧುರ್ಯವೋ !!! ಈ ಕಾವ್ಯದ ನಾಲ್ಕನೇ ಪದ್ಯವನ್ನು ನೋಡಿದರೆ ಪಂಡಿತರಾಜನು ಎಷ್ಟು ವಿನೀತ ನಾಗಿರುವನು ಎಂಬುದು ಕಂಡುಬರುವದು. ತವಾಲಂಬಾದಂಬ ಸ್ಪುರದಲಘುಗರ್ವೆ ಣ ಸಹಸಾ || ಮಯಾಸರ್ವೇ,ವಜ್ಞಾಸರಣಿಮಥನೀತಾಃ ಸುರಗಣಾಃ || ಇದಾನೀಯೌದಾಸ್ಯಂ ಭಜಯದಿ ಭಾಗೀರಥಿ ತದಾ || ನಿರಾಧಾರೋ ಹಾ ರೋದಿಮಿ ಕಥಯ ಕೇಷಾಮಿಹ ಪುರಃ | ಹೇ ಮಾತೇ ಗಂಗೇ! ನಿನ್ನ, ಆಶ್ರಯದಿಂದಲೇ ನಾನು ಅರ್ವಗರ್ವವನ್ನು ತಳೆದು ಉಳಿದ ದೇವತೆಗಳನ್ನು ತೃಣಕ್ಕೆ ಬರೆದೆನು. ಈ ಕಾಲದಲ್ಲಿ ನೀನೂ ಔದಾಸೀನ್ಯ ವನ್ನು ತಳೆದು ನನ್ನನ್ನು ಉದ್ಧಾರಮಾಡುವದನ್ನು ಬಿಟ್ಟರೆ ನಾನಿನ್ನು ಯಾರ ಮುಂದೆ ಅಳಬೇಸರಣಿ.. m