49 ವಾಗ್ಯೂಷಣ, ಲಹರಿಯಲ್ಲಿ ವಂಶವದೆಯಾದ ರಮಣಿಯಂತೆ ಶಿಖರಣಿಯು ಜಗನ್ನಾಥನನ್ನು ಅನುಸರಿ ಸಿರುವದು. ಈ ಲಹರಿಯಲ್ಲಿ ಒಂದು ಶ್ಲೋಕದಲ್ಲಿ ಜಗನ್ನಾಥನು ಲಕ್ಷ್ಮಿಯ ಕೃಪಾಕಟಾಕ್ಷವು ಯಾವನಲ್ಲಿ ಬೀಳುವದೋ, ಅವನನ್ನು ಗಂಗಾಧರಾದಿ ದೇವತೆಗಳೆಲ್ಲರು ಸ್ತುತಿಸುತ್ತಾರೆಂದು ಹೇಳಿದ್ದಾನೆ. ಮತ್ತೊಂದು ಪದ್ಯದಲ್ಲಿ ವಿಷ್ಣುವಿನ ದೃಷ್ಟಿಯು ಲಕ್ಷ್ಮಿಯ ಜಂಘಾಯು ಗಲಮಧ್ಯದಲ್ಲಿ ನೀರಾಜನದಂತೆ ತಿರುಗಾಡುತ್ತದೆಂದು ವರ್ಣಿಸಿ ತನ್ನ ಕಾವ್ಯಕ್ಕೆ ಒಂದಿಷ್ಟು ಅನುಚಿತತ್ವವನ್ನು ತಂದುಕೊಂಡಿದ್ದಾನೆ. - ಕಾರಣಗುಣಗಳು ಕಾರ್ಯದಲ್ಲಿ ಬರುತ್ತವೆಂದು ಶಾಸ್ತ್ರಜ್ಞರ ಅಭಿಪ್ರಾಯ. ವೇ ದಾಂತಿಗಳು ಶ್ರುತಿವಚನವನ್ನು ಪ್ರಮಾಣೀಕರಿಸಿ ಜಗತ್ತಿನ ಮಿಥ್ಯಾತ್ವವನ್ನು ಪ್ರತಿಪಾದಿಸು ತ್ತಾರೆ. ಜಗತ್ತಿಗೆ ಯಾವದು ಕಾರಣವಾಗಿರುವದೋ ಅದು ಮಿಥ್ಯಾಗಿರತಕ್ಕದ್ದು. ಅಂತಹ ಕಾರಣವನ್ನು ಕಾಣದಿ ಜಗತ್ತು ಮಿಥ್ಯೆಂದು ಪ್ರತಿಪಾದಿಸುವ ವೇದವಚನ ಗಳಲ್ಲಿ ಸಂದೇಹವುಳ್ಳವನಾಗಿರಲು ಜಗನ್ಮಾತೆಯಾದ ಲಕ್ಷ್ಮಿಯ ಗಗನಸದೃಶವಾದ ಉದ ರವು ದೃಗ್ಗೋಚರವಾಯಿತು. ಅಲ್ಲಿಂದ ಜಗನ್ಮಾತೆಯಾದ ಲಕ್ಷ್ಮಿಯ ಉದರವೇ ಮಿಥ್ಯ ಯಾದಮೇಲೆ ಅದರಿಂದ ಹುಟ್ಟಿದ ಜಗತ್ತು ಹೇಗೆ ಸತ್ಯವಾದೀತು ? ನನ್ನ ಶಂಕೆಯ ನಿರ ಸನವಾಯಿತು. ಎಂದು ಜಗನ್ನಾಥನು ಕೆಳಗಣ ಶ್ಲೋಕದಲ್ಲಿ ಹೇಳಿದ್ದಾನೆ जगन्मिथ्याभूतं ममनि गदतां वेदवचसामभिप्रायो नाद्यावधि हृदयमध्याविशदयम् ।। इदानीं विश्वेषां जन कमुदरं ते विमृशतो। विसंदेहं चेतोऽजान गरुडकेतोः प्रियतमे ।। ಲಕ್ಷ್ಮೀಲಹರಿಯಲ್ಲಿ ಶಬ್ದಾಲಂಕಾರಗಳೂ ಮೇಲಿಂದಮೇಲೆ ಪ್ರತ್ಯಕ್ಷವಾಗುತ್ತವೆ. ಕಡೆಗೆ ಜಗನ್ನಾಥನು ಲಕ್ಷ್ಮಿಯನ್ನು ಈಮೇರೆಗೆ ಪ್ರಾರ್ಥಿಸುತ್ತಾನೆ. - ಎಲ್ ತಾಯಿ ! ಲಕ್ಷ್ಮೀ, ನಿನ್ನ ಚರಣತಲದಲ್ಲಿ ಅಳುತ್ತ ಹೊರಳಾಡುತ್ತ ಬಿದ್ದಿ ರುವ ಈ ಬಾಲಕನನ್ನು ಅಮೃತದಿಂದ ಆದ್ರ್ರವಾದ ನಿನ್ನ ಕರಗಳಿಂದ ಮುಟ್ಟುತ್ತ ' ವತ್ತು ಅಳಬೇಡ ' ಎಂದು ಯಾವಾಗ್ಗೆ ಸಮಾಧಾನಪಡಿಸುವಿ ? ಭಾಮಿನೀ ವಿಲಾಸ, - ಜಗನ್ನಾಥರಾಯನಿಂದ ವಿರಚಿತವಾದ ಮುಕ್ತಕಪದ್ಯಗಳ ಸಂಗ್ರಹರೂಪವಾದ ಪ್ರಬಂಧವಿದು. ಇದನ್ನು ಬರೆದಿಡುವ ಪ್ರಯೋಜನವೇನೆಂಬದನ್ನು ಜಗನ್ನಾಥನು ತಾನೇ ಹೇಳುತ್ತಾನೆ
ಪುಟ:ಪಂಡಿತರಾಜ.djvu/೪೧
ಗೋಚರ