ಪುಟ:ಪಂಡಿತರಾಜ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ೩೩ /++++++++++++++++v مرمر مرمرم مرمم مرم- مرمره له مرسر . - ممرررررررر" ದುರ್ವೃತ್ತಾ ಜಾರಜನ್ನಾನೋ ಹರಿಷ್ಯಂತೀತಿ ಶಂಕಯಾ | ಮದೀಯ ಪದ್ಯರತ್ನಾ ನಾಂ ಮಂಜೂಷ್ಟೆಷಾ ಕೃತಾ ಮಯಾ || « ತುಡುಗುಳೇಮಕ್ಕಳು ಹರಣಮಾಡುತ್ತಾರೆಂಬ ಶಂಕೆಯಿಂದ ನನ್ನ ಪದ್ಯ ಗಳೆಂಬ ರತ್ನಗಳನ್ನು ಈ ಪೆಟ್ಟಿಗೆಯಲ್ಲಿ ತುಂಬಿ ಇಟ್ಟಿರುವೆನು.” ( ಭಾಮಿನೀವಿಲಾಸವೆಂದು ಹೆಸರಿಡಲು ಕಾರಣವೇನು ? ತನ್ನ ಅಂಗನೆಯಾದ ಭಾಮಿನಿಯ ವಿಲಾಸವನ್ನು ಕುರಿತು ಈ ಗ್ರಂಥವನ್ನು ಪಂಡಿತರಾಜನು ಬರೆದಿದ್ದರಿಂದ * ಭಾಮಿನೀವಿಲಾಸ'ವೆಂದು ಹೆಸರಿಟ್ಟನೆಂದು ಕೆಲವರು ಹೇಳುತ್ತಿರುವರು. ಹಲವರು ಈ ಸಂಜ್ಞೆಯು ಐಚ್ಛಿಕವೆಂದು ಉಸುರುವರು. ಭಾಮಿನೀವಿಲಾಸದಲ್ಲಿರುವ ಪದ್ಯಗಳೆಲ್ಲ ಪ್ರಾಯಃ ಪಂಡಿತರಾಜನಿಂದ ವಿರಚಿತವಾದ ರಸಗಂಗಾಧರದಲ್ಲಿ ಕಂಡುಬರುವವು. ಉದಾ ಹರಣಾರ್ಥವಾಗಿಯೇ ಅವನ್ನು ನಿರ್ಮಿಸಿರಬೇಕೆಂಬದು ರಸಗಂಗಾಧರದ ಆರಂಭದಲ್ಲಿ ರುವ “ ನಿರ್ಮಾಯನೂತನಮುದಾಹರಣಾನುರೂಪಕಾವ್ಯಂ' ಎಂಬ ಪ್ರತಿಜ್ಞೆಯಿಂದ ಕಂಡುಬರುವದು. ಈ ಪ್ರಬಂಧದಲ್ಲಿ ನಾಲ್ಕು ಉಲ್ಲಾಸಗಳು:-ಅನ್ನೋ, ಶೃಂಗಾರ, ಕರುಣ, ಶಾಂತ; ಪಂಡಿತರಾಜನ ಅಸಾಮಾನ್ಯ ಕವಿತ್ವದ ಪರಿಚಯವನ್ನು ಇದೊಂದೇ ಪ್ರಬಂಧವು ಮಾಡಿ ಕೊಡುವಂತಿರುವದು. ಕರುಣಾವಿಲಾಸದ ಪ್ರಣಯನ ಸಮಯದಲ್ಲಿ ಅಥವಾ ಅದಕ್ಕೂ ಮುಂಚೆ ಅವನ ಪ್ರಿಯತಮೆಯಾದ ಅಂಗನೆಯು ತೀರಿಕೊಂಡಿರುವದು ಈ ಉಲ್ಲಾಸದಿಂದ ಸೂಚಿತವಾ ಗುತ್ತದೆಂದು ಕೆಲವರು. ಪಂಡಿತ ದುರ್ಗಾಪ್ರಸಾದರು ರಸಗಂಗಾಧರದಲ್ಲಿ ಪಂಡಿತರಾಜನ ( ಹಾ ತನಯವಿನಯಶಾಲಿನ್ ! ಕಥಮಿನ ಪರಲೋಕಪಥಿಕೆ ಭೂಃ ) ಈ ಶ್ಲೋಕ ದಿಂದ ಪಂಡಿತರಾಜನ ಪುತ್ರಮರಣವಾದರೂ ಯಾಕೆ ಅನುಮಿತವಾಗುವದಿಲ್ಲವೆಂದು ಆಕ್ಷೇಪಿಸಿರುತ್ತಾರೆ. ಹ್ಯಾಗೇ ಆಗಲಿ, ಈ ಉಲ್ಲಾಸವು ಅತ್ಯಂತ ಕರುಣಾರಸಸರಿಸ್ಕೃತವಾ ಗಿದೆ. ಕಲ್ಲೆದೆಯವರ ಹೃದಯವನ್ನು ಕೂಡ ಕರಗಿಸುವಂತಿದೆ. ಕಾಲಿದಾಸನ ಅಜರತಿ ವಿಲಾಪದಂತೆ ಜಗನ್ನಾಥನ ಈ ವಿಲಾಸವಾದರೂ ಅತ್ಯಂತವಾಗಿ ಹೃದಯಂಗಮವಾಗಿರು ವದು. ಜಗನ್ನಾಥನ ಮೃದುಮಧುರವಾದ ಪದಗಳು; ಮನೋರಮವಾದ ವಸಂತತಿಲ ಕಾವೃತ್ತ; ವಾಚಕರನ್ನು ತಲ್ಲೀನವಾಗಿ ಮಾಡಿಬಿಡುವವು. ಈ ಉಲ್ಲಾಸದ ಮೊದಲನೇ ಶ್ಲೋಕವು दैवे पराग्वदनशालिन होत जाते । याते च संप्रति दिवं प्रति बंधुरत्ने ।