ವಿಷಯಕ್ಕೆ ಹೋಗು

ಪುಟ:ಪಂಡಿತರಾಜ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. پمپ میں محر م م م م م ۔ سر مبہم میسې ۷ -~-~ * * +',vv vv ” * ي م م م م م ه م مرمرمرمرمرم می می میر कस्मे मनः कथयितासि निजामवस्थां । ಈ: #ind: <rajaa gaddalf೪೩ || « ದೈವವು ಪರಾಲ್ಕುಖವಾಯಿತು. ಬಂಧುರತ್ನವು ಸ್ವರ್ಗಕ್ಕೆ ಹೋಯಿತು; ಹೇ ಮನಸ್ಸೇ ಇನ್ನು ಆರಮುಂದೆ ನಿಜಾವಸ್ಥೆಯನ್ನು ಹೇಳುವಿ ?- ಇನ್ನಾರು ತಂಪಾದ ವಚನಗಳಿಂದ ನಿನ್ನ ಆಧಿಯನ್ನು ಶಾಂತಪಡಿಸುವರು ? ಮತ್ತೊಂದು ಪದ್ಯದಲ್ಲಿ ಪಂಡಿತರಾಜನು ಆ ಪ್ರಿಯತಮೆಯು ಕರ್ಪೂರದಂತೆ ಕಣ್ಣಿನ ತಾಪವನ್ನು ಹೋಗಲಾಡಿಸುವವಳು. ಅರಳಿದ ಕಮಲಗಳ ಮಾಲೆಯಂತೆ ಕಂಠಸುಖಕ್ಕೆ ಕಾರಣಳೂ, ನನ್ನ ಕವಿತೆಯಂತೆ ಮನೋಹರಳೂ ಆಗಿದ್ದಳೆಂದು ವರ್ಣಿಸಿರುವನು. ಚಿತ್ರಮೀಮಾಂಸಾಖಂಡನ. ಅಪ್ಪಯ್ಯ ದೀಕ್ಷಿತರಿಂದ ವಿರಚಿತವಾದ ಚಿತ್ರಮೀಮಾಂಸೆಯನ್ನು ಪಂಡಿತರಾಜನು ಖಂಡಿಸಿದ್ದಾನೆ. ತಾನು ಅಪ್ಪಯ್ಯ ದೀಕ್ಷಿತರ ಕೃತಿಯಲ್ಲಿ ತೋರಿಸಿದ ದೋಷಗಳು ದುರು ದರವಾಗಿರುವವೆಂದು ಪಂಡಿತರಾಜನು ಆ ಗ್ರಂಥದ ಆರಂಭದಲ್ಲಿ ಹೇಳುತ್ತಾನೆ - सूक्ष्म विभाव्यमयकासमुदीरितानां । अप्पय्यदीक्षि कृताविहदूषणानां ।।। निर्मत्सरो यदिसमुन्धरणं विदध्या ।। दस्याहमुज्वलमतेश्चरणौ वहामि ।। ಸೂಕ್ಷವಾಗಿ ವಿಚಾರಿಸಿ ನಾನು ಅಪ್ಪಯ್ಯ ದೀಕ್ಷಿತರ ಕೃತಿಯಲ್ಲಿ ದೋಷಗಳನ್ನು ತೋರಿಸಿಕೊಟ್ಟಿದ್ದೇನೆ. ಆ ದೋಷಗಳನ್ನು ಯಾರಾದರೂ ಉದ್ದಾರ ಮಾಡಿದರೆ ಆ ಉಜ್ವಲಮತಿಯ ಪಾದಸಂವಹನವನ್ನು ನಾನು ಮಾಡುವೆನು. ಇಲ್ಲಿ ಬಹುಜನ ವಿದ್ವಾಂಸರ ಮತಭೇದವುಂಟು. ಕೆಲವರು ಪಂಡಿತರಾಜನ ದೋಷಗಳು ದುರದ್ದರವಾದವುಗಳೆಂದೇ ಹೇಳುವರು. ಬೇರೆ ಕೆಲವರು ಅಪ್ಪಯ್ಯ ದೀಕ್ಷಿತ ರಲ್ಲಿರುವ ದ್ವೇಷಬುದ್ಧಿಯಿಂದ ಹೀಗೆ ಪಂಡಿತರಾಜನು ದೋಷೋದ್ಘಾಟನ ಮಾಡಿದ್ದಾನೆ; ಆ ದೋಷಗಳ ನಿರಾಕರಣ ಮಾಡುವದು ಶಕ್ಯವಾದುದೆಂದು ಹೇಳುವರು. ಅಚ್ಯುತರಾಯ ಮೋಡಕ ಎಂಬವರು ಪಂಡಿತರಾಯನಿಂದ ಕೊಡಲ್ಪಟ್ಟ ದೋಷಗಳ ಉದ್ದಾರವನ್ನೂ ಮಾಡಿದ್ದಾರೆ. ಆ ವಿಚಾರವು ನಮಗೆ ಬೇಡ. ಪಂಡಿತರಾಜನೂ ನಮಗೆ ವಂದ್ಯನು; ದೀಕ್ಷಿತನೂ ಪೂಜ್ಯನು, ಮಾನನೀಯರಲ್ಲಿ ಕಟಾಕ್ಷವಿಕ್ಷೇಪವು ಬೇಡ; ಅಸಫವಿಲಾಸ ಜಗದಾಭರಣಕಾವ್ಯಗಳು ಸಾಂಪ್ರತ ಉಪಲಬ್ಧವಾಗಿಲ್ಲ.~