ಪುಟ:ಪಂಡಿತರಾಜ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ೩೫ > ತನಗಂಗಾಧರ. ಇದು ಸಾಮಾನ್ಯವಾದ ಗ್ರಂಥವಲ್ಲ; ಪಂಡಿತರಾಜನ ಅಲೌಕಿಕ ಪಾಂಡಿತ್ಯವನ್ನು ವ್ಯಕ್ತಪಡಿಸುತ್ತದೆ, ಕಿಂಬಹುನಾ ಅಲಂಕಾರಶಾಸ್ತ್ರರಹಸ್ಯಗಳ ಜನ್ಮಭೂಮಿಯೇ ಇದು. ಈ ಗ್ರಂಥದಲ್ಲಿ ಪ್ರತಿಪಕ್ಷಿಗಳಲ್ಲಿ ಪಂಡಿತರಾಜನು ಅಪ್ರತಿಮವಾದ ಅನಾದರವನ್ನು ತೋರಿ ಸಿದ್ದಾನೆ. ಪಂಡಿತಮಂಡಲೀಸಾರ್ವಭೌಮನಾದ ಜಗನ್ನಾಥನಿಗೆ ಇದು ಶೋಭೆಯನ್ನೇ ಉಂಟುಮಾಡಿದೆ. ಆದರೆ ಭಾರತವರ್ಷದ ದುರ್ಭಾಗ್ಯವೇ ಅಂತಹದುಂಟು; ಇಂತಹ ಪಂಡಿ ತರ ಅಪ್ರತಿಮವಾದ ಗ್ರಂಥಗಳೂ ಕೂಡ ಸಮಗ್ರವಾಗಿ ಸಿಕ್ಕುವದಿಲ್ಲ ಪಂಡಿತರಾಜನ ರಸಗಂಗಾಧರವಾದರೂ ಸಂಪೂರ್ಣವಾಗಿ ಉಪಲಬ್ದವಾಗಿಲ್ಲ. ವಿದ್ಯಮಾನಭಾಗದ ಕಡೆಯ ಪದ್ಯವೂ ಅಸಂಪೂರ್ಣವಾಗಿದೆ.

  • ಕಿಂ ಕುರ್ವತೇ ದರಿದ್ರಾ ಕಾ ಸಾರವತೀಧರಾ ಮನೋಜ್ಞತರಾ |

ಕೋ ಪಾವನಸ್ತಿಲೋಕ್ಯಾ........ ಉಪಲಬ್ದ ಭಾಗದಲ್ಲಿ ಅನನದ್ವಿತಯವು ಉನಸಿರುವದು, ಪ್ರಥಮಾಸಿಸಿನವು ಸಂಪೂ ರ್ಣವಾಗಿಯುಂಟು. ದ್ವಿತೀಯಾನನವ, ಅರ್ಧವೇ, ಕೆಲವರು ಅಪ್ಪಯ್ಯ ದೀಕ್ಷಿತರು ಚಿತ್ರ ಮಿಮಾಂಸೆಯನ್ನು ಅರ್ಧವಾಗಿಯೇ ( ಅರ್ಧಚಿತ್ರಮೀಮಾಂಸಾ ನ ಮುದೇ ಕಸ್ಯ ಮಾಂಸಲಾ ) ಬರೆದಂತೆ ಪಂಡಿತರಾಜನೂ ರಸಗಂಗಾಧರವನ್ನು ಸ್ವಚ್ಛೆಯಿಂದಲೇ ಅರ್ಧ ವಾಗಿ ಬರೆದನೆಂದು ಹೇಳುತ್ತಿರುವರು. ಹಾಗಾದರೆ ಕಡೆಯಲ್ಲಿ ಅಪ್ಪಯ್ಯ ದೀಕ್ಷಿತರಂತೆ ಅರ್ಧರಸಗಂಗಾಧರವು ಯಾರ ಸಂತೋಷಕ್ಕೋಸ್ಕರವಾಗಲಿಕ್ಕಿಲ್ಲವೆಂದು ಪಂಡಿತರಾಜನು ಯಾಕೆ ಹಾರೈಸಲಿಲ್ಲವೆಂದು ಇತರರು ಆಕ್ಷೇಪಿಸುವರು. ಈ ಗ್ರಂಥದ ಪ್ರಥಮಾನನದಲ್ಲಿ ಕಾವ್ಯರಸಾದಿ ನಿರೂಪಣವೂ ದ್ವಿತಿಯಾನನದಲ್ಲಿ ಧ್ವನಿಯ ಲಕ್ಷಣಗಳೂ ಅಲಂಕಾರಗಳ ಲಕ್ಷಣಗಳೂ ಹೇಳಲ್ಪಟ್ಟಿವೆ. ಈ ಗ್ರಂಥದ ಸಂಪೂರ್ಣ ಸ್ವರೂಪದ ಯಥಾರ್ಥ ಜ್ಞಾನವನ್ನು ಮಾಡಿಕೊಡುವದು ಈ ಚಿಕ್ಕ ಪುಸ್ತಕಕ್ಕೆ ಅಸಾಧ್ಯವೇ ಸರಿ. ಆದ್ದರಿಂದ ಇದರಲ್ಲಿಯ ಕೆಲವು ಸರಸ ಸದ್ಯ ಗಳನ್ನು ಉದಾಹರಿಸಿ ವಾಚಕರ ಮನಸ್ತುಷ್ಟಿಯನ್ನು ಮಾಡಲು ಯತ್ನಿಸುವೆವು. ಅಮ್ಮ ರಿಂದಲೇ ರಸಿಕ ವಾಚಕರು ತುಷ್ಟರಾಗದಿದ್ದರೆ ಮೂಲಗ್ರಂಥವನ್ನೇ ನೋಡಬೇಕೆಂದು ಪ್ರಾರ್ಥಿಸುವೆವು. ಈ ಗ್ರಂಥದ ಆದಿಮಪದ್ಯವು:- ಸ್ಕೃತಾಪಿ ತರುಣಾತಪಂ ಕರುಣೆಯಾ ಹರಂತೀ ನೃಣಾ | ಮಭಂಗುರತನು ಪಾಂ ವಲಯಿತಾ ಶತೈರ್ವಿದ್ಯುತಾಂ |