ಪುಟ:ಪಂಡಿತರಾಜ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ತದ ಪರಿಶ್ರಮವು ನಿರರ್ಥಕವಾದುದೇ ? ಉಳಿದ ಪಂಡಿತರು ಪಂಡಿತರಾಜನ ಮುಂದೆ ಮಾನಗಳಾದರು ಇದೇ ಪುಣ್ಯವು. ಪ್ರತಿದಿವಸ ಮಿಾನುಗಳು ಸಮುದ್ರವನ್ನು ಕಡೆಯುತ್ತಿರುವವು. ಅದರಿಂದೇನು ಹೊರಟಿತು ? ಮಂದರಾಚಲವು ಕಡೆದದ್ದರಿಂದ ಹದಿನಾಲ್ಕು ರತ್ನಗಳು ಹೊರಟವು. ದೇವತೆಗಳು ಸಂತುಷ್ಟರಾದರು.

  • ರಮಣೀಯಾರ್ಥ ಪ್ರತಿಪಾದಕಃ ಶಬ್ದಃ ಕಾವ್ಯಂ' ಎಂದು ಪಂಡಿತರಾಜನು ಕಾವ್ಯವ್ಯಾಖೆಯನ್ನು ಮಾಡಿರುವನು. ಪಂಡಿತರಾಜನ ಉತ್ತಮ ಕಾವ್ಯದ ಉದಾಹರಣ ವನ್ನು ನೋಡಿರಿ

ಶಯಿತಾ ಸವಿಧೇಷ್ಯನೀಶ್ವರಾ | ಸಫಲೀಕರ್ತುಮಹೋಮನೋರಥಾನ್ | ದಯಿತಾ ದಯಿತಾನನಾಂಬುಜಂ | ದರಮೂಾಲನ್ನಯನಾ ನಿರೀಕ್ಷತೇ || ಪಂಡಿತರಾಜನ ಶ್ಲೋಕದಲ್ಲಿರುವ ಮಧುರಭಾವನ್ನು ನಮ್ಮ ಶಬ್ದಗಳಿಂದ ಯಥಾ ರ್ಥವಾಗಿ ರೇಖಿಸುವದು ಅಸಾಧ್ಯವು. ಆದರೂ ತಕ್ಕಮಟ್ಟಿಗೆ ಉಲ್ಲೇಖಿಸುವೆವು. ಎಲ್ಲ ಭನ ಹತ್ತರವೇ ಮಲಗಿಕೊಂಡರೂ ಪ್ರಣಯಿನಿಯು ತನ್ನ ಮನೋರಥವನ್ನು ಪೂರ್ಣ ಮಾಡಿಕೊಳ್ಳಲು ಸಮರ್ಥಳಾಗಲಿಲ್ಲ. ಸ್ವಲ್ಪ ಕಣ್ಣು ತೆರೆದು ಆ ವಲ್ಲಭನ ಮುಖಾಂಬುಜ ವನ್ನು ನೋಡುತ್ತಾಳೆ. ಸ್ತ್ರೀಯರಿಗೆ ಪುರುಷಮುಖಾವಲೋಕನಾದಿಗಳಿಂದ, ಪುರುಷರಿಗೆ ಪ್ರತಿಜ್ಞಾ ಭಂಗ ಪರಾಭವಾದಿಗಳಿಂದ ಪೀಡೆಯು ಜನಿಸುವದು. ಅದು ಒಂದು ಮನೋವೃತ್ತಿ ವಿಶೇಷವು. ವೈವರ್ಣ್ಯಅಧೋಮುಖತ್ವಾದಿ ಕಾರಣೀಭೂತವಾದುದು ಎಂದು ಲಜ್ಜೆಯ ವಿವರವನ್ನು ಹೇಳಿ ಅದಕ್ಕೆ ಪಂಡಿತರಾಜನು ಉದಾಹರಣೆ ಕೊಡುತ್ತಾನೆ.- ಕುಚಕಲಶಯುಗಾಂತರ್ವಾನಕೀನಂ ನಖಾಂಕಂ । ಸಪುಲಕತನುಮಂದಂ ಮಂದಮಾಲೋಕಯಂತೀ | ವಿನಿಹಿತವದನಂ ಮಾಂ ವೀಕ್ಷಬಾಲಾ ಗವಾಕ್ಷೇ । ಚಕಿತನತನತಾಂಗೀ ಸದ್ಯಸಧ್ಯೆ ವಿವೇಶ || ಗಂಡನು ತನ್ನ ಹೆಂಡತಿಯ ಸ್ಥಿತಿಯನ್ನು ವರ್ಣಿಸುತ್ತಾನೆ:-ಕುಚಗಳಲ್ಲಿ ತನ್ನ ನಖ ಚಿಹ್ನಗಳನ್ನು ಆಕೆಯು ಮೆಲ್ಲಮೆಲ್ಲನೆ ನೋಡುತ್ತ ನಿಂತಿದ್ದಳು. ಅಷ್ಟರಲ್ಲಿ ನಾನು ಕಿಡಿಕಿ ಯಲ್ಲಿ ಹಣಿಕಿ ಹಾಕಿ ನೋಡಿದೆನು. ನನ್ನನ್ನು ನೋಡಿದ ಮೇಲೆ ಬಾಲೆಯು ಚಕಿತಚಕಿತ ಳಾಗಿ ಹುದುಗಿಕೊಂಡು ಮನೆಯಲ್ಲಿ ತತ್ಕಾಲಕ್ಕೆ ಸೇರಿದಳು.