ವಿಷಯಕ್ಕೆ ಹೋಗು

ಪುಟ:ಪಂಡಿತರಾಜ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಗೂ ಷಣ. ಅಪ್ಪಯ್ಯ ದೀಕ್ಷಿತರ ಸಮಾಚಾರವನ್ನು ಜಗನ್ನಾಥನು ರಸಗಂಗಾಧರದಲ್ಲಿ ಮೇಲಿಂದ ಮೇಲೆ ತೆಗೆದುಕೊಂಡಿದ್ದಾನೆ. ಒಮ್ಮೆ ಅವರಿಗೆ 2 ದ್ರವಿಡಶಿಶು ” ಎನ್ನುತ್ತಾನೆ. ಒಮ್ಮೆ * ಆಯುಷ್ಯವಂತನೆ '೦ದು ಅನ್ನುತ್ತಾನೆ. ಮೇಲಿಂದ ಮೇಲೆ ಅವರ ಮತವನ್ನು ಖಂಡಿಸಿ ದ್ದಾನೆ. ಪಂಡಿತರಾಜನ ಅರ್ಥಾಲಂಕಾರಗಳ ವಿವೇಚನವನ್ನು ನೋಡಿದರೆ ಅಹೋ ಪಂಡಿತರಾಜನ ಪಾಂಡಿತ್ಯವೆಂತಹದು; ಎಂದು ಮನಸ್ಸು ಥಕ್ಕಾಗಿ ಹೋಗುವದು. ಅಪ ಹೈು ತ್ಯಲಂಕಾರಕ್ಕೆ ಉದಾಹರಣವು:- - ಇದು ಸುಂದರಿಯ ಮುಖವಲ್ಲ; ಸುವಾಸನೆಯನ್ನು ಬೀರುವ ಕಮಲವ; ಇದು ನಗೆಯಲ್ಲ; ಸಹಜಮನೋಹರವಾದ ವಿಕಾಸವ. ಇವು ಸ್ತನಗಳಲ್ಲ; ಬಂಗಾರ ಬಣ್ಣದ ಹಣ್ಣುಗಳು, ಭ್ರಮರಗಳಿಂದ ಸುತ್ತುಗಟ್ಟಲ್ಪಟ್ಟ ಲತೆಯೇ ಇದಲ್ಲದೆ ಇವಳು ರಮಣಿಯಲ್ಲ. ಶೃಂಖಲಾಮೂಲಕವಾದ ಅಲಂಕಾರಗಳಲ್ಲಿ ಒಂದಾದ ಕಾರಣಮಾಲೆಯ ಉದಾಹರಣ ವನ್ನು ನೋಡಿರಿ:- ಲಭ್ಯತ ಪುರ್ಗಹಿಣೀ ಮನೋಜ್ಞಾ | ತಯಾ ಸುಪುತ್ರಾಃ ಪರಿತಃ ಪವಿತ್ರಾಃ || ಪ್ರೀತಂ ಯಶಸ್ಕೃತಿ ಸಮುದೇತಿ ನೂನಂ | ತೇನಾಸ್ಯ ನಿತ್ಯಂ ಖಲು ನಾಕಲೋಕಃ || ಪುಣ್ಯವಿದ್ದರೆ ಉತ್ತಮ ಹೆಂಡತಿಯು ಸಿಗುತ್ತಾಳೆ; ಆಕೆಯಿಂದ ಪವಿತ್ರವಾದ ಮಕ್ಕ ಳು ಹುಟ್ಟುತ್ತಾರೆ. ಅವರಿಂದ ಸಮೃದ್ಧವಾದ ಯಶಸ್ಸು ಹುಟ್ಟುವದು. ಇಷ್ಟೆಲ್ಲ ಆದರೆ ಇದೇ ನಿತ್ಯವಾದ ಸ್ವರ್ಗಲೋಕವಲ್ಲವೇ ? ಈ ಗ್ರಂಥದಲ್ಲಿ ಜಗನ್ನಾಥನಿಂದ ಅನಾದರವನ್ನು ಹೊಂದದಿದ್ದ ಪ್ರಾಚೀನ ಪಂಡಿತ ನಾಗಲಿ ಅವನ ಸಮಾನಕಾಲಿಕನಾಗಲಿ ಒಬ್ಬನೂ ಆಲಂಕಾರಿಕನು ಇಲ್ಲ. ಎಲ್ಲರಿಗೂ ಪಂಡಿತರಾಜನು ಅಲ್ಪಸ್ವಲ್ಪ ದಕ್ಷಿಣೆ ಮುಟ್ಟಿಸಿದ್ದಾನೆ. ರಸಗಂಗಾಧರವು ಪಂಡಿತರಿಗೇ ಉಪಯುಕ್ತವಾದುದು. ಸುಖದಿಂದ ಅಲಂಕಾರಶಾಸ್ತ್ರದ ರಹಸ್ಯಗಳನ್ನು ತಿಳಿದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಅಕಿಂಚಿತ್ಕರವಾದುದೇ. ಸಮಾಪ್ತ.