ಪುಟ:ಪಂಡಿತರಾಜ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. ನಮ್ಮ ದೇಶಭಾಷೆಗಳಿಗೆ ಆಧಾರವಾಗಿದ್ದ ಸಂಸ್ಕೃತ ಭಾಷಾಮಾತೆಯ ಸಂಗೋ ಪನವನ್ನು ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಷ್ಟೆ? ಯಾವ ಭಾಷಾಧೇನುವಿನ ಶಕ್ತಿವರ್ಧಕವೂ, ಬುದ್ದಿ ವರ್ಧಕವೂ, ಉತ್ಸಾಹವರ್ಧಕವೂ ಆದ ದುಗ್ಗವನ್ನು ಕುಡಿದು ಅಖಿಲ ಭರತಖಂಡವು-ಏಕೆ ಅಖಿಲ ಭೂಮಂಡಲವೇ-ಹೃನ್ಮವೂ ಪುಷ್ಟವೂ ಆಯಿ ತೋ, ಆ ಧೇನುನೀಗ ಹಳೆದಾಗಿಹೋಗಿದೆ. ಅದಕ್ಕೆ ಹೊಟ್ಟೆ ತುಂಬ ಸಹ ಕೂಳ ಸಿಕ್ಕು ವದಿಲ್ಲ. ಅದಕ್ಕೆ ಜಠರಪೂರ್ತಿಯಾಗಿ ಅನ್ನವನಿಕ್ಕದಷ್ಟು ಭಾರತೀಯರಾದ ನಾವೀಗ ಕೃತಘ್ನ ರಾಗಿದ್ದೇವೆ. ನಮ್ಮ ಭಾವೀ ಉನ್ನತಿಗೆ ದೇಶಭಾಷೆಗಳ ಊರ್ಜಿತಾವಸ್ಥೆಯೇ ಕಾರಣವೆಂದು ತಜ್ಞರ ಅಭಿಪ್ರಾಯ. ಜ್ಞಾನಭಾಂಡಾರವಾದ ದೇವವಾಣಿಯನ್ನು ಸಂರಕ್ಷಿ ಸಿದರಷ್ಟೆ ತದಾಶ್ರಿತವಾದ ದೇಶಭಾಷೆಗಳ ಉನ್ನತಿಯಾಗುವದು; ಆ ಭಾಷೆಯ ಮಹಿ ಮೆಯು ಸಾಮಾನ್ಯ ಜನರಲ್ಲಿ ಕೂಡ ತಿಳಿಯಬೇಕಾದರೆ ದೇಶಭಾಷೆಗಳ ದ್ವಾರಾ ಸಂಸ್ಕೃತ ವಾಜಿಯದ ನಿಸ್ಸಿಮ ಉಪಾಸಕರ ಚರಿತಗಳನ್ನು ತಿಳಿಯಪಡಿಸುವದೊಂದು ಸಾಧನವು. ಯಾಕಂದರೆ ಆ ಮಹಾಮಹಿಮರ ಚರಿತಗಳನ್ನು ಓದುವದರಿಂದ ತದುಪಾಸಿತವಾದ ವಾಜ್ಯ ಯದ ಅಭ್ಯಾಸದ ಕಡೆಗೆ ಜನರ ಪ್ರವೃತ್ತಿಯಾಗುವದು. ಸಂಸ್ಕೃತವಾಯದ ಹೆಚ್ಚು ಅಭ್ಯಾಸವಾದಷ್ಟು ನಮ್ಮ ಸಂಸ್ಕೃತಿಯು ಹೆಚ್ಚುವದೆಂದು ಆ ಭಾಷೆಯ ಮಹತಿಯನ್ನ ರಿತವರೆಲ್ಲರೂ ಒಪ್ಪಿಕೊಳ್ಳುವ ಮಾತಾಗಿರುವದು. ನಮ್ಮ ದೇಶಭಾಷೆಗಳೂ ಸಂಸ್ಕೃತದಿಂದಲೇ ಹುಟ್ಟಿ ಪರಿಷ್ಕೃತವಾಗಿವೆ. ನಮ್ಮ ಕನ್ನಡಭಾಷೆಯು ದ್ರವಿಡಭಾಷೆಯಿಂದ ಹುಟ್ಟಿದರೂ ಪರಿಷ್ಕೃತವಾಗಿ ಗ್ರಂಥಸ್ಥವಾದದ್ದು ಸಂಸ್ಕೃತದ ಸಹಾಯದಿಂದಲೇ, ಇನ್ನು ಮುಂದಾದರೂ ಸಂಸ್ಕೃತದ ಸಹಾಯದಿಂದಲೇ ನಾವು ನಮ್ಮ ಕನ್ನಡಭಾಷೆಯ ಉನ್ನತಿಯನ್ನು ಹೆಚ್ಚಿಗೆ ಮಾಡಿಕೊಳ್ಳತಕ್ಕದ್ದಿರುವದು. ಅಂದಮೇಲೆ ಕನ್ನಡವಾಣೆಯ ಪರಿಷ್ಕಾರಕ್ಕೂ ಸಂಸ್ಕೃತ ಸರಸ್ವತಿಯ ಮಹಿಮಾ ಪ್ರಸಾರಕ್ಕೂ ಒಂದು ಸಾಧನವಾದ ಸಂಸ್ಕೃತಭಾಷಾಸೇವಕರ ಚರಿತಲೇಖನದ ಕಾರ್ಯ ವನ್ನು ಪ್ರಸ್ತುತದಲ್ಲಿ ಈ ಲೇಖಕನು ಅಂಗೀಕರಸಿದ್ದಾನೆ. ವಂಗ ಮಹಾರಾಷ್ಟ್ರ ಮೊದ ಲಾದ ದೇಶಭಾಷೆಗಳಲ್ಲಿ ಇಂತಹ ಚರಿತ್ರಗ್ರಂಥಗಳು ಇವೆ. ಕನ್ನಡದಲ್ಲಿ ಅವುಗಳ ನ್ಯೂನ ತಯು. ಆ ನ್ಯೂನತೆಯನ್ನು ಕೆಲಮಟ್ಟಿಗೆ ಹೋಗಲಾಡಿಸುವದೂ ಪ್ರಸ್ತುತ ಲೇಖಕನ ಉದ್ದೇಶವು. ಈ ಉದ್ದೇಶದ್ವಯದಿಂದ ಪ್ರೇರಿತನಾಗಿ ( ಪಂಡಿತರಾಜ ಜಗನ್ನಾಥರ ' ಚರಿತವನ್ನು ಬರೆದಿರುವೆನು. ಪಂಡಿತರಾಜನೆಂದರೆ, ಸಾಮಾನ್ಯನಲ್ಲ. ಇವನು ಶಾಸ್ತ್ರಜ್ಞನೂ ಉತ್ಕೃಷ್ಟ ಕವಿಯೂ ಆಗಿದ್ದಾನೆ. ಸಂಸ್ಕೃತಭಾಷೆಯನ್ನು ಟೊಂಕಕಟ್ಟಿಕೊಂಡು ನಿಂತು ಸೇವಿಸಿ