ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಂಪ ರಾಮಾಯಣದ ಕಥೆ ಆ ಮುನಿಯ ಬಳಿಯಲ್ಲಿ ಕಂಡನು. ದಶರಥನು ಇಂದಗತಿಯು ದೀಕ್ಷೆಗೊ೦ಡು ದಕ್ಕೆ ಕಾರಣವನ್ನು ಮುನಿವುಟದಿಂದ ತಿಳಿದ ತರುವಾಯ ಪ್ರಭಾಮಂಡಲನು ತನ್ನನ್ನು ಅಷ್ಟು ಅಕ್ಕರೆಯಿಂದ ಇ೦ದಗತಿಯ ಸಲಹಿದುದಕ್ಕೆ ಕಾರಣವನ್ನು ತಿಳಿಸ ಬೇಕೆಂದು ಮುನಿಯನ್ನು ಭಕ್ತಿಯಿಂದ ಬೇಡಿಕೊಳ್ಳಲು, ಮುನಿಯು ಆ ವೃತ್ತಾಂತ ವನ್ನು ವಿಸ್ತಾರವಾಗಿ ತಿಳಿಸಿದನು. ಇದನ್ನು ಕೇಳಿ ಅಲ್ಲಿ ನೆರೆದಿದ್ದ ರಾಜಸಭೆಯ ಪ್ರಭಾಮಂಡಲನೂ ಸೀತೆಯೂ ಬೆರಗಾಗಿ ಹರ್ಷವನ್ನು ತಾಳಿದರು. ಪ್ರಭಾ ಮಂಡಲನು ದಶರಥನಿಗೆ ಸಾ೦ಗ ನಮ ಸರಮಾಡಿ ರಾಮ ಲಕ್ಷ್ಮಣ ಭರತ ಶತ್ರುಘ್ನರೊಡನೆ ವಿನಯವೃತ್ತಿಯಿಂದಿರಲು, ಸೀತೆಯು ಅಣ್ಣನಾದ ಪ್ರಭಾಮಂಡಲ ಸಿಗೆ ನಮಸ್ಕಾರ ಮಾಡಿದಳು. ಆತನು ಆಕೆಯನ್ನು ಹಿಂಡಿತ ಪುಣಭಾಗಿಸಿ ಯಾಗೆಂದು ಹರಸಿ ಪರಮಾನಂದ ಭರತನಾಗಿದ್ದನು. ದಶರಥ ಮೊದಲಾಗಿ ಎಲ್ಲರೂ ಅಲ್ಲಿಂದ ಹೊರಟು ಸಾಕೇತ ಪ್ರುರವನ್ನು ಸೇರಿದರು. ತರುವಾಯ ದಶರಥನು ಈ ವೃತ್ತಾಂತವನ್ನು ಜನಕನಿಗೆ ಹೇಳಿ ಕಳುಹಿಸಲು ಆತನೂ ಏದೇಹಿಯೂ ಬಹಳ ತವಕದಿ೦ದ ಅಯೋಧ್ಯೆಗೆ ಬಂದ ಪ್ರಭಾಮಂಡಲನನ್ನು ಕಂಡು ಮಗನನ್ನು ಆಗ ತಾನೆ ನಡೆದಂತೆ ಸಂತೋಕ ಸಾಗರದಲ್ಲಿ ಮುಳುಗಿದರು. ದಶರಥನು ಸಾಕೇತ ಪುರಕ್ಕೆ ಬಂದಿದ್ದ ತನ್ನ ಬಂಧುವರ್ಗವನ್ನೆಲ್ಲ ಹ: “ತಿಯಿಂದ ನೋಡಿ ಕೊಂಡಿದ್ದನು. ಪ್ರಭಾಮಂಡಲನು ರಾಮಲಕ್ಷ್ಮಣರೊಡನೆ ಕೊಡಿ ಅನೇಕ ವಿನೋದ ಗಳಿ೦ದ ಒ೦ದು ತಿ೦ಗಳನ್ನು ಒಂದು ಕ್ಷಣ ದಂತ ಕಳೆದು ನಿಲ್ಲಲೆಗೆ ಹೋಗಿ ಜನಕನ ರಾಜ್ಯವನ್ನು ತನ್ನ ಚಿಕ್ಕಪ್ಪನಾದ ಕನಕನಿಗೆ ಕೊಟ್ಟು ತಾಯಿತಂದೆ ಗಳೊಡನೆ ರಥನೂ ಪುರಚಕ್ರವಾಳ ಪುರವನ್ನು ಸೇರಿ ಸುಖದಿಂದಿದನು. ಒಂದು ದಿನ ದಶರಥನು ಸರ್ವಭೂತಹಿತ ಭಟ್ಟಾರಕರನ್ನು ಕಂಡು ಭಕ್ತಿ ಯಿಂದ ಪ್ರತಿ ತನ್ನ ಭವಾವಳಿಯನ್ನು ತಿಳಿಸಬೇಕೆಂದು ಬೇಡಿಕೊಳ್ಳ ಲು ಆ ಮುನಿಪತಿಯು ಅದನ್ನು ವಿಶದವಾಗಿ ತಿಳಿಸಿದನು. ಅದನ್ನ ಕೇಳಿ ದಶರಥನು ತಾನು ಸುಕೃತ ದುಷ್ಟತ ಕರ್ಮವಿಪಾಕ ಸುಖ ದು'ಒಗಳ ನೃನ.ಭವಿಸಿ ರಾಟಳದ ಗುಂಡಿಗೆಯಂತಾದೆನೆಂದೂ ಪ್ರಣ್ಯ ಕಾಪಗಳೆರಡಲ್ಲದೆ ಭಂಡಾರ ವಸ್ತು ವಾಹನಾದಿ ಗಳ ವ್ಯವೂ ಒಡನೆ ಬರಲಾರನೆಂದೂ ತಿಳಿದು ನೋಕೃಸುಖವನ್ನು ಬಯಸಿ ಮುನೀಂ ದ್ರನಪ್ಪಣೆಯನ್ನು ಪಡೆದು ಅಯೋಧ್ಯೆಗೆ ಬಂದನು. ಆ ದಿನ ದಶರಥನು ನಿತ್ಯ ನಿಯಮಗಳನ್ನು ನೆರವೇರಿಸಿದನಂತರ ಸಿಂಹಾಸನವನ್ನೇರಿ ಒಡೋಲಗಂಗೊಟ್ಟು, ತನ್ನ ಕುಮಾರರನ್ನು ಬರಹೇಳಿದನ.. ಎಲ್ಲರೂ ಬಂದು ತಂದೆಗೆ ದಂಡಸ್ರನಾಮ ವನ್ನು ಮಾಡಿ ಆತನ ಆಶೀರ್ವಾದವನ್ನು ಪಡೆದು ಸಿ೦ಹಾಸನದ ಪಕ್ಕದಲ್ಲಿದ ಮಣಿಮಯಾಸನಗಳ ಮೇಕಳಿತುಕೊಂಡರು. ದಶರಥನು ರಾಮಚಂದ್ರನ ಮುಖವನ್ನು ನೋಡಿ, “ಮಗುವೇ: ಹಣೆಯಲ್ಲಿ ಕಣ್ಣನ್ನು ಪಡೆವಂತೆ ತೇಜೋ