ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ೦ಪ ರಾಮಾಯಣದ ಕಥೆ 13 ರಿಂದ ಪಿತೃವಾಕ್ಯ ಪರಿಪಾಲನವೇ ನಿನ್ನ ಕರ್ತವ್ಯವು, ತ೦ದೆಯು ಕ್ರಮದಿಂದ ನನಗಿತ್ತ ರಾಜ್ಯವನ್ನು ನಾನು ನಿನಗೆ ಕೊಡುವೆನು ; ಆದುದರಿಂದ ರಾಜ್ಯಭಾರ ವನ್ನು ವಹಿಸುವುದು ನಿನಗೆ ಸ್ವಲ್ಪವೂ ಅಕ್ರಮವಲ್ಲ " ಎಂದು ಹೇಳಿ ಭರತನ ನ್ನೊಡಂಬಡಿಸಿದನು. ಇದನ್ನು ನೋಡಿ ಸಭಾಜನರು ರಾಮನ ಸತ್ಯಸಂಧತೆ ಯನ್ನೂ ಔದಾರ್ಯವನ್ನೂ ಕೊಂಡಾಡುತ್ತಿರಲು ಲಕ್ಷ್ಮಣನು ರಕ್ತಕ್ಷಣ ನಾಗಿ ಭರತನ ಮೇಲೆ ಕೋಪಗೊಂಡನು, ರಾಮನು ತನ್ನ ಕಣೋಟದಿಂದ ಲಕ್ಷ್ಮಣನ ಕೋಪವನ್ನು ಶಾ೦ತನಾಡಿ ತಂದೆಯ ಪಾದಗಳಿಗೆರಗಿ ಶತ್ರುಗಳನ್ನು ಜಯಿಸಿಕೊಂಡು ಬರುವೆನೆಂದು ಆತನೊಡನೆ ಹೇಳಿ ಸಭೆಯಿಂದೆದು ಹೊರಡಲು ದಶರಥನು ಮರ್ಧೆ ಹೋದನು. ಇದನ್ನು ನೋಡಿ ಕೈಕೆಯು ಇದೆಲ್ಲವೂ ತನ್ನಿರಿ ದಾಯಿತಲ್ಲಾ ಎಂದು ವ್ಯಥೆ ಪಟ್ಟು ಅಳುತ್ತ ಹೊರಟು ಹೋದಳು. ಲಕ್ಷ್ಮಣನು ರಾಮನ ಸತಾಯಕ್ಕಾಗಿ ಅವನೊಡನೆ ತಾನೂ ಹೋಗುವ ಆಲೋಚನೆಯಿಂದ ರಾಮನನ್ನು ಸೇರಿದನು. ಈ ವೃತ್ತಾಂತವೆಲ್ಲವನ್ನೂ ಸುಮಿತ್ರೆಯ ಅಪರಾಜಿತೆಯೂ ಕೇಳಿ ಭಯ ಛಾ೦ತರ ವ್ಯಸನಪಡುತ್ತಿರುವಲ್ಲಿ ರಾಮಲಕ್ಷ್ಮಣರು ಒ೦ದು .ಅವರನ್ನು ನಮಸ್ಕರಿಸಿ ಕುಳಿತುಕೊಂಡರು. ಅಪರಾ ಜತೆಯು ರಾಮನ ವನವಾಸವನ್ನು ನೆನೆ ನೆನೆದು ಗಟ್ಟಿಯಾಗಿ ಅಳತೊಡಗಿದಳು. ಲಕ್ಷ್ಮಣನು ತಕ್ಕ ಮಾತುಗಳಿಂದ ಆಕೆ ಯನ್ನು ಸಮಾಧಾನ ಗೊಳಿಸಲು, "ಸೀತೆಯ ನಿಮ್ಮೊಡನೆ ಬರುವಳು, ಇಲ್ಲಿರು ವವಳಲ್ಲ' ಎಂದು ಆಕೆಯು ಹೇಳಿದಳು. ಸುಮಿತ್ರೆದು ಲಕ್ಷ ಣನನ್ನು ಕುರಿತು, ತಾನು ತನ್ನ ಕಷ್ಟವನೂ ಅಸದೆ ಅಣ್ಣನನ್ನೂ ಅತ್ತಿಗೆಯನ್ನೂ ಭಕ್ತಿಯಿಂದ ಸೇವಿ ಸುರೆಂದು ಬುದಿ ವಾದವನ್ನು ಹೇಳಿದಳು. 33 ಮಲಕ್ಷ್ಮಣರ, ತಾಯ.ಯರ ಅಪ್ಪಣೆಯನ್ನು ಪಡೆದು ಸೀತೆಯೊಡನೆ ಅಯೋಧ್ಯೆಯ ಅ೦ಗಡಿಯ ಬೀದಿಯಲ್ಲಿ ಪಾದಚಾರಿಗಳಾಗಿ ಬರುತ್ತಿರುವಲ್ಲಿ ಪ್ರರ ಜನರು ತಂಡತಂಡವಾಗಿ ನೆರೆದು ಕೌತುಕಗೊಂಡ, ನೋಡುತ್ತ ಅರಸುಮಕ್ಕಳು ಈ ತೆರನಾಗಿ ಹೋಗ ವುದಕ್ಕೆ ಕಾರಣವನ್ನು ತಿಳಿಯದೆ ನಾನಾ ವಿಧವಾಗಿ ಮಾತ ನಾಡಿಕೊಳ್ಳುತ್ತಿದ್ದ ರ.. ಈ ಮಾತುಗಳನ್ನು ಕೇಳುತ್ತ ಅವರು ಸಾಯಂಕಾಲದ ಹೊತ್ತಿಗೆ ಪಟ್ಟಣದ ಹೊರಗಣ ಅರಭಟ್ಟಾರಕರ ಬಸದಿಯನ್ನು ಹೊಕ್ಕು ಪ್ರದಕ್ಷಿಣ ನಮಸ್ಕಾರವನ್ನು ಮಾಡಿದರು. ಆಶ್ವಾಸ ೭-ಶರದ್ವರ್ಣನೆ ಶ್ರೀರಾಮನು ಆ ಬಿಲಾರಾಧ್ಯನ ರತ್ನ ಭವನವನ್ನು ಬಲಗೊ೦ಡು ಒಳಹೊಕ್ಕು ಕೈಮುಗಿದು ದರ್ಶನಸ್ತುತಿಗೈದು ಕುಳಿತಿರಲು ಸೂರನಸ್ತಮಿಸಿದನು. ಆಗ ರಾಮನು, ವ್ಯಸನದಿಂದ ಅಲ್ಲಿಗೆ ಬಂದ ತಾಯಿಯರೊಡನೆ ವಿನಯ ವಚನಗಳನ್ನು ನುಡಿದು ಸಮಾ