ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಪ೦ಹ ರಾಮಾಯಣದ ಕಥೆ ಧಾನಪಡಿಸಿ ಅವರನ್ನು ಹಿಂದಕ್ಕೆ ಕಳುಹಿಸಿದನು. ತರುವಾಯ ತಾವೆಲ್ಲರೂ ಮಲಗಿ ನಿದ್ರೆ ಮಾಡಿ ಮಧ್ಯರಾತ್ರಿಯಲ್ಲಿದ್ದು ಜಿನಪತಿಯನ್ನು ಬೀಳ್ಕೊಂಡು ಬಿಲ್ಲನ್ನೂ ಅ೦ಬುಗಳನ್ನೂ ಹಿಡಿದು ಸೀತೆಯನ್ನು ನಡಿಸಿಕೊಂಡು ಪಟ್ಟಣದ ದಿಡ್ಡಿಯ ಬಾಗಿ ಲಿಂದ ಹೊರಟು ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿದರು. ಅವರ ಹಿಂದೆಯೇ ಬರುತ್ತಿರುವ ಅನೇಕ ಸಾಮಂತರೊಡನೆ ಮಾತನಾಡುತ್ತ ಅವರನ್ನು ನಿಲ್ಲುವಂತೆ ಹೇಳುತ್ತ ರಾಮನು, ಸೀತೆ ನಡೆಯಲಾರಳೆಂದು ಮೆಲ್ಲಗೆ ನಡೆಯುತ್ತಿರುವೆವೆಂದು ತಿಳಿಸಿ, ಗಂಭೀರ ತರಂಗಿಣಿಯು ಅಡ್ಡವಾಗಿ ಬರಲು, ಸಾಮಂತಾದಿಗಳನ್ನು ಅಲ್ಲಿ ನಿಲ್ಲುವಂತೋಡಂಬಡಿಸಿ ಹರಿಗೋಲಿನಲ್ಲಿ ತೊರೆಯನ್ನು ದಾಟಿ ಸೀತಾಲಕ್ಷ್ಮಣರೊಡನೆ ಹೊರಟುಹೋದನು. ಒ೦ದೆ ಬರುತ್ತಿದ್ದ ಕೆಲವರು, ಈ ಕಾರಣದಿಂದ ವೈರಾಗ್ಯ ಪರ ರಾಗಿ, ಅಲ್ಲಿಯ ಜನ: ಗಾರದಲ್ಲಿದ ಶತಕೇತು ಗಣಧರರ ಬಳಿಯಲ್ಲಿ ದೀಕ್ಷೆಗೊಂಡರು ; ಉಳಿದವರು ಸಾಕೇತ ಪ್ರರವನ್ನು ಸೇರಿದರು. ಇದನ್ನು ಕೇಳಿ ದಶರಥನು ದೀಕ್ಷೆಗೊಂಡನು : ಭರತನು ರಾಜ್ಯ ಸುಖ ನಿರತನಾದನು. ಅಪರಾಜಿತೆಯು ಉದಾತ್ತ ರಾಘವನ ವನಪ್ರವೇಶ ಕೆಶಾಯಾಸ ವನ್ನು ನೆನೆ ನೆನೆದು ಕಣ್ಣೀರು ಸುರಿಸುತ್ತ ಗದ್ದದ ಕ೦ರಯಾಗಿ ಸುಕುಮಾರಿಯಾದ ಸೀತೆಯು ಆ ಕಷ್ಟವನ್ನು ಹೇಗೆ ಸೈರಿಸುವಳೆ೦ದು ಹ೦ಬಲಿಸತೊಡಗಿದಳು. ಇದನ್ನು ನೋಡಿ ಸುಮಿತ್ರೆಯ ಲೋಕಿಸುತ್ತಿರಲು, ಕೈಕೆಯು ಕೇಳಿ “ ನನ್ನಿಂದ ಇಷ್ಟು ದುಃಸ್ಥಿತಿ ಬಂದಿತಲ್ಲವೆ ' ಸತಿಯು ದೀಕ್ಷಗೊಂಡನು, ಅಪರಾಜಿತೆಗೆ ದು:ಖವು ಸಹಿಸದಂತಾಯಿತು, ಮಗನು ರಾಜ್ಯಸುಖವನ್ನು ಲೆಕ್ಕಿಸದೆ ಹೋದನು, ಇವೆಲ್ಲ ವನ್ನೂ ಸ್ತ್ರೀತ ದ ಜಡತ್ವದಿಂದ ಮಾಡಿದೆನಲ್ಲವೆ ?" ಎ೦ದು ಹೆಚ್ಚಾಗಿ ಶೋಕಗೊ೦ಡು ತನ್ನನ್ನು ತಾನೇ ನಿಂದಿಸಿಕೊಂಡಳು: ಆಗೆ ಭರತನನ್ನು ಕರೆಯಿಸಿ ರಾಮಲಕ್ಷ್ಮಣ ರಿಲ್ಲದೆ ರಾಜ್ಯವು ಕೋಫಿಸದೆ೦ದೂ ಅವರ ತಾಯಿಯರು ಅವರ ವಿಯೋಗದಿಂದ ಪ್ರಾಣತ್ಯಾಗಮಾಡುವರೆಂದೂ ಹಾಗಾಗದಂತೆ ತಾನು ಬೇಗ ಹೋಗಿ ರಾಮ ಲಕ್ಷ್ಮಣರು ಮುಂದಕ್ಕೆ ಹೋಗದಂತೆ ತಡೆಯಬೇಕೆಂದೂ ತಾನೂ ಜೊತೆಯಲ್ಲಿ ಬರುವೆನೆಂದೂ ಹೇಳಿದಳು. ಅದಕ್ಕೆ ಭರತನು ಒಪ್ಪಿ ತಾಯಿಯೊಡಗೂಡಿ ಸಾಮಂತ ರೊಡನೆ ತೊರೆಯನ್ನು ದಾಟಿ ಅಡವಿಯಲ್ಲಿ ಜಾನಕಿಯ ಮಾರ್ಗಾಯಾಸವನ್ನು ಆರಿಸುತ್ತಿದ ರಾಮನನ್ನು ಕಂಡು ಅವನ ಕಾಲ ಮೇಲೆ ಬಿದ್ದು ಮೂರ್ಛಿ ಹೋಗಿ ಕೂಡಲೆ ಎಚ್ಚತ್ತು ಸೀತೆಗೂ ರಾಮನಿಗೂ ನಮಸ್ಕಾರ ಮಾಡಿ, ಆಕ್ರಮದಿಂದ ಬಂದ ರಾಜ್ಯವನ್ನು ತಾನೊಟ್ಟನೆಂದು ಹೇಳುತ್ತಿರುವಲ್ಲಿ, ಕೈಕೆಯು ಬರುತ್ತಿರುವು ದನ್ನು ರಾಮನು ಕ೦ಡನು. ಕೂಡಲೆ ಎದ್ದು ಹೋಗಿ ರಾಮನು ಭಕ್ತಿಯಿಂದ ಕೈಕೆಯ ಪಾದಗಳಿಗೆರಗಲು ಆಕೆಯು ತಾನು ಮಾಡಿದ ಅನ್ಯಾಯಕ್ಕಾಗಿ ಬಹಳ ನೊಂದು ಮಗನನ್ನು ಎತ್ತಿ ಪ್ರೀತಿಸಿ ಬಹಳವಾಗಿ ಪ್ರಲಾಪಿಸಿ, ತಾನು ಮಾಡಿದ