ಪಂಪರಾಮಾಯಣದ ಕಥೆ ಅನ್ಯಾಯವನ್ನು ಸೈರಿಸಿ ರಾಜ್ಯವನ್ನು ಕೈಕೊಳ್ಳ ಬೇಕೆಂದು ಕೇಳಿಕೊಂಡಳು. ಇದಕ್ಕೆ ರಾಮನು ಕೈ ಮುಗಿದುಕೊಂಡು " ತಾಯೇ! ಅಕಳ೦ಕ ಚರಿತ್ರನಾದ ಅಯನ ನನ್ನಿಗೆ ಕುಂದನ್ನುಂಟುಮಾಡಿ ರಾಜ್ಯವನ್ನು ನಾನು ಪಡೆದರೆ ನನ್ನ ಮಾತು ಹುಸಿಯಾಗು ವುದು ; ಸುಳಿ ಗಿಂತಲೂ ಹೆಚ್ಚಾದ ಪಾತಕ ವಿ; ಆದುದರಿಂದ ತಾವು ಮರು ಮಾತಾಡದಿರಿ” ಎಂದು ಹೇಳಿ, ಭರತನು ತನ್ನ ಮಾತಿಗೆ ಪ್ರತಿಯಾಡಿದರೆ ತನ್ನ ಆಚ್ಛೆಗೆ ವಿಾರಿದವನಾಗುವನೆಂದು ನಿನುಡಿ ದನು. ಇದಕ್ಕೆ ಭರತನು ರಾಮನ ಆಜ್ಞೆಗೆ ಕಟ್ಟು ಬಿದ್ದು, ಆತನು ಹಿಂದಿರುಗಿ ಬರುವವರೆಗೂ ತಾನು ರಾಜ್ಯವನ್ನು ಪರಿಪಾಲಿಸುವೆನೆಂದೂ ತನ್ನ ಮನಸ್ಸಾಕ್ಷಿಯಾಗಿಯೂ ರಾಜ್ಯವನ್ನ ಸೇಕ್ಷಿಸುವವನಲ್ಲ ವೆಂದೂ ಹೇಳಿದನು. ಈ ಮನು ಭರತನನ್ನೂ ತಾಯಿಯನ್ನೂ ತಕ್ಕಂತೆ ಮನ್ನಿಸಿ ಅಯೋಧ್ಯೆಗೆ ಕಳುಹಿಸಿ ಸೀತೆಯೊಡನೆ ತಾನೂ ಲಕ್ಷಣನೂ ಮುಂದಕ್ಕೆ ತೆರಳಿದರು. ಸೀತೆಯು ವಾರಿಯಲ್ಲಿ ಕಲ್ಲು ಮುಳುಗಳನ್ನು ತುಳಿದರೂ ಬಿಸಿಲಿನ ಬೇಗೆ ಯಲ್ಲಿ ಬಳಲಿದರೂ ಪತಿಯು ತನ್ನೊಡನೆ ಇರುವನಲ್ಲಾ ಎಂಬ ಸಂತೋಷದಿಂದ ಆ ಬಾಧೆಗಳನ್ನು ಅಕ್ಷ ಮಾಡದೆ ನಡೆದು, ಅವರು ಅನೇಕ ದೇಶಗಳನ್ನೂ ಗ್ರಾಮಗಳನ್ನೂ ದಾಟಿ ಚಿತ್ರ ಕೂಟ ಪರ್ವತವನ್ನು ಬಲಕ್ಕೆ ಬಿಟ್ಟು ಅವಂತೀದೇಶ ದಲ್ಲಿ ಬರುತ್ತ ಒಂದು ಆಲದ ಮರದ ಕೆಳಗೆ ವಿಶ್ರಮಿಸಿಕೊಂಡು ಸುತ್ತಲೂ ನೋಡುವಲ್ಲಿ, ಹಣ್ಣುಗಳ ಭಾರದಿ೦ದ ::ಗುತ್ತಿರುವ ಫಲವೃಕ್ಷಗಳುಳ್ಳ ತೋಟ ಗಳು ಕಾಯುವವರಾರೂ ಇಲ್ಲದೆ ಆ ಪ್ರಾಂತವೆಲ್ಲ ನಿರ್ಜನ ಪ್ರದೇಶವಾಗಿರು ನ೦ತೆ ಕ೦ಡುಬ೦ದಿತು. ದಾರಿ ಹೋಕನೊಬ್ಬನು ಬಂದು ರಾಮಲಕ್ಷ್ಮಣರಿ ಗೆರಗಿ ಭಯಪಟ್ಟು ನಿ೦ತಿರ• •), ಲಕ್ಷ್ಮಣನ ೨ ೦ಜದಿರೆಂದು ಹೇಳಿ ಆ ನಾಡು ಏಕೆ ನಾ-ಯಿತೆಂದು ಅವನನ್ನು ಕೇ' ದನು. ಅದಕ್ಕವನು ಕೈಮುಗಿದುಕೊಂಡು * ಮಹಾಸ್ವಾಮಿ! ಇದು ಅವಂತೀದೇಶವು : ಇದರಲ್ಲಿಯ ಉಜ್ಜಯಿನಿಯೆಂಬ ಪಟ್ಟಣವನ್ನಾಳುವ ಸಿ೦ಹೋದರನೆಂಬ ಪರಾಕ್ರಮಶಾಲಿಯು, ತನ್ನ ಸಾಮಂತ ನಾದ ವಜ್ರ ಕರ್ಣನ, ಸಕತಜ್ಞ ಸಿಗಲ್ಲದೆ ಮತ್ತಾರಿಗೂ ಕೈಮುಗಿಯನೆಂಬ ಪ್ರತಿಜ್ಞೆ ೦ದ ತನಗೆ ಸುಳ್ಳು ಮರ್ಯಾದೆಯನ್ನು ಮಾಡುತ್ತಿರುವುದನ್ನು ಕರ್ಣ ಪರಂಪರೆ ಯಾಗಿ ಕೇಳಿ ವ.ಸಿದು, ಅವಸಿದ ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಅವನ ಭಯ ಕಾಗಿ ಈ ದೇಶವೆಲ್ಲವೂ ತಾಗಿ ಹೋತು. ವಜ್ರ ಕರ್ಣಸಿರುವ ದಶಪುರವು ಇಲ್ಲಿಗೆ ಸಮೀಪದಲ್ಲಿಯೇ ಇರುವುದು" ಎಂದು ಹೇಳಿ ಅಪ್ಪಣೆ ಪಡೆದು ಹೊರಟು ಹೋದನು. ರಾಮಲಕ್ಷ್ಮಣರು ವಜ್ರ ಕರ್ಣನ ಭಕ್ತಿಗೆ ಮೆಚ್ಚಿ ದುರ್ಮತಿ ಯಾದ ೦ಹೋದರನನ್ನು ದಂಡಿಸುವುದು ತಮ್ಮ ಕರ್ತವ್ಯವೆಂದಾಲೋಚಿಸಿ ದಶ ಪುರವನ್ನು ಸೇರಿದರು. ವಜ್ರ ಕರ್ಣನು ಇವರನ್ನು ತನ್ನ ಅರಮನೆಯಿಂದ ನೋಡಿ ಇವರು ಕಾರಣ ಪ್ರರುಷರೆಂದರಿತು ಒಲನಾರಾಯಣರೇ ಇರಬೇಕೆಂದು
ಪುಟ:ಪಂಪರಾಮಾಯಣ ಕಥೆ.djvu/೨೨
ಗೋಚರ