28 ಸ೦ಹ ರಾಮಾಯಣದ ಕಥೆ ರಾಮಲಕ್ಷ್ಮಣರು-ಇವರ ವಿಷಯಗಳನ್ನು ತಿಳಿಸಿ ಕಾರಣ ಪುರುಷರು ಪಾತಾಳ ಲಂಕೆಯಲ್ಲಿರುವರೆಂದು ಹೇಳಿದನು. ಆಶ್ವಾಸ ೧೦- ದಶವದನ ವಂಶ ವರ್ಣನೆ ಸುಗ್ರಿವನು ಮಹಾನುಭಾವರಾದ ರಾಮಲಕ್ಷ್ಮಣರಿಂದ ತನ್ನ ಹಗೆ ಯನ್ನೂ ಬಗೆಯನ್ನೂ ತೀರಿಸಿಕೊಳ್ಳಬೇಕೆಂದು ನಿಶ್ಚಯಿಸಿ ವಿರಾಧಿತನ ಬಳಿಗೆ ದೂತನನ್ನು ಕಳುಹಿಸಿ ತರುವಾಯ ತಾನೂ ಬರಲು ಆತನಾರೆಂದು ಲಕ್ಷ್ಮಣನು ವಿರಾಧಿತನನ್ನು ಕೇಳಿದನು. ಆತನು ಕಿಸಿಂಧನಗರಕೊಡೆಯನೂ ಕಪಿಧ್ವಜ ಕುಲಧ್ವಜನೂ ಸೂರ೦ಜಯ ತನೂಜನೂ ನಾಲಿಭಟ್ಟಾರಕರ ತಮ್ಮನೂ ಅಂಗದನ ತಂದೆಯ ಆದ ಸುಗ್ರೀವನೆಂದೂ ಅವರನ್ನೊಲಗಿಸುವುದಕ್ಕೆ ಬಂದಿರುವನೆಂದೂ ತಿಳಿಸಿದನು. ಸುಗ್ರೀವನು ರಾಮಲಕ್ಷ್ಮಣರ ವಾದಗಳಿಗೆರಗಿ ನಿಯಮಿತಾಸನದಲ್ಲಿ ಕುಳಿತುಕೊಂಡನು. ಕುಶಲ ಪ್ರಶ್ನೆಗಳಾದ ತರುವಾಯ ಅಕ್ಷ್ಮೀಧರನು ಇವರೇನು ನಿಮಿತ್ತವಾಗಿ ಬಂದಿರುವರೆಂದು ಕೇಳಲು ಜಾ೦ಬವನು ಕೈಮುಗಿದು ನಿ೦ತು. ಸುಗ್ರೀವನ ಹೆಂಡತಿಯಾದ ಸುತಾರೆಯ ಮೇಲಣ ಆಗ್ರಹದಿಂದ ಸುಗ್ರೀವನ ರೂಪನ್ನು ಧರಿಸಿ ಒಬ್ಬ ಖಳನು ಸುಗ್ರೀವನ ಅರಮನೆಯನ್ನು ಹೊಕ್ಕನೆಂದೂ, ಎಲ್ಲರೂ ಮೋಸಹೋದರೂ ಸುತಾರೆಯು ಕೆಲವು ಗುರುತುಗಳಿಂದ ತಾನು ಮೋಸಹೋಗದೆ ಒಳಗೆ ಅಡಗಿಕೊಂಡಳೆಂದೂ, ಆಗ ನಿಜವಾದ ಸುಗ್ರೀವನು ಬರಲು ಇಬ್ಬರಿಗೂ ಯುದ್ಧವು ನಡೆಯಿತೆಂದೂ, ಅ೦ಗದ ಕುಮಾರನು ಮಾಯಾ ಸುಗ್ರೀವನನ್ನು ತ೦ದೆಯೆಂದು ಸ್ವೀಕರಿಸಿ ನಿಜವಾದ ಸುಗ್ರೀವನನ್ನು ಸೆರೆಯಲ್ಲಿಡು ವಂತೆ ಹೇಳಲು ಈತನು ಹನುಮನಲ್ಲಿಗೆ ಹೋಗಿ ತನ್ನ ವೃತ್ತಾಂತವನ್ನು ಹೇಳಿ ಕೊಂಡನೆಂದೂ, ಅವನು ಬ೦ದು ನಿಜವಾದ ಸುಗ್ರೀವನು ಯಾರೆಂದು ತಿಳಿಯದೆ ಕೋಪಗೊಂಡು ಹಿಂದಕ್ಕೆ ಹೋದನೆಂದೂ, ಆದುದರಿಂದ ತಮ್ಮಗಳ ಹರಾಕ್ರಮ ವನ್ನು ಕೇಳಿ ಸಹಾಯಕ್ಕಾಗಿ ತಮ್ಮಲ್ಲಿಗೆ ಬಂದಿರುವನೆಂದೂ ತಿಳಿಸಿದನು. ರಾಮನು ತಮ್ಮಂತೆಯೇ ವ್ಯಥೆಗೆ ಸಿಕ್ಕಿರುವ ಸುಗ್ರೀವನ ವ್ಯಸನವನ್ನು ಕಳೆಯುವಂತೆ ಲಕ್ಷ್ಮಣನೊಡನೆ ಹೇಳಲು, ಸುಗ್ರೀವನು ಸವಾಹಿತ ಚಿತ್ತನಾಗಿ ವಿರಾಧಿತನ ಮುಖ ವನ್ನು ನೋಡಿ ರಾಮಲಕ್ಷ್ಮಣರು ವ್ಯಾಕುಲಚಿತ್ತರಾಗಿರಲು ಕಾರಣವೇನೆಂದು ಕೇಳಿದನು. ಅದಕ್ಕೆ ವಿರಾಧಿತನು ವನದಲ್ಲಿ ಮೋಸದಿಂದ ಸೀತಾಹರಣವಾದ ವಿಷಯವನ್ನೂ ಯುದ್ಧದಲ್ಲಿ ಖರದೂಷಣರು ಜನಾರ್ದನನ ಕೈಯಿಂದ ಸತ್ತ ವಿಷಯ ವನ್ನೂ ತಿಳಿಸಿದನು. ಇದನ್ನು ಕೇಳಿ ನಾನರಚಿಹ್ನನಾದ ಸುಗ್ರೀವನು ಏಳು ದಿವಸ ಗಳೊಳಗಾಗಿ ಸೀತಾದೇವಿಯ ಸುದಿಯನ್ನು ತರಿಸುವೆನೆಂದು ಪ್ರತಿಜ್ಞೆ ಮಾಡಿ ಬಿನ್ನವಿಸಲು, ಬಲಾಚುತರೂ ವಿರಾಧಿತನೂ ಸುಗ್ರೀವನೊಡನೆ ಕಿಷ್ಠಿ ೦ಧ ಪುರಕ್ಕೆ
ಪುಟ:ಪಂಪರಾಮಾಯಣ ಕಥೆ.djvu/೩೫
ಗೋಚರ