60 ಪಂಪರಾಮಾಯಣದ ಕಥೆ ಆಗ ಮಂಡೋದರಿ ಮೊದಲಾದ ಅಂತಃಪುರ ಸ್ತ್ರೀಯರು, ಜಪವನ್ನು ನಿಲ್ಲಿಸಿ ತಮ್ಮನ್ನು ಸಲಹೆಂದು ಅಳುತ್ತ ಕೇಳಿಕೊಂಡರೂ ರಾವಣನು ಚಲಿಸದೆ ಚಿತ್ರ ನಿರೋಧದಿಂದ ವಿದ್ಯೆಯನ್ನು ಸಾಧಿಸಿದನು. ಆ ವಿದ್ಯಾದೇವತೆಯು ಪ್ರತ್ಯಕ್ಷವಾಗಿ ಅಪ್ಪಣೆಯೇನೆಂದು ರಾವಣನನ್ನು ಬೇಡಿ ರಾಮಲಕ್ಷ್ಮಣರನ್ನುಳಿದು ಮಿಕ್ಕವರು ಯಾರನ್ನೂ ಉಳಿಯಲೀಯೆನೆಂದು ಹೇಳಲು ರಾವಣನು ಅದರಿಂದ ತನಗೇನೂ ಫಲವಿಲ್ಲವೆಂದು ಹೇಳಿ ವಿದ್ಯಾದೇವತೆಗೆ ನಮಸ್ಕರಿಸಿ ಹೊರಡುವಷ್ಟರಲ್ಲಿ ಅ೦ಗ ದಾದಿಗಳು ತಮ್ಮ ಬಿಡಾರವನ್ನು ಸೇರಿದರು. ರಾವಣನು ಅ೦ಗದ ಮೊದಲಾ ದವರು ತನ್ನ ಅಂತಃಪುರ ಸ್ತ್ರೀಯರಿಗೆ ಮಾಡಿದ ಅಪಮಾನವನ್ನೂ ತೊಂದರೆ ಯನ್ನೂ ತಿಳಿದು ಅವರನ್ನು ಕ್ಷಣಮಾತ್ರದಲ್ಲಿ ಸೆರೆಗೊಂಡು ತಂದು ಪರಿಭವಿಸುವೆ ನೆಂದು ತನ್ನ ಸ್ತ್ರೀಯರನ್ನು ಸಮಾಧಾನಗೊಳಿಸಿ ಜಿನಭವನದಲ್ಲಿ ಮಹಾಪೂಜೆ ಯನ್ನು ಮಾಡಿಸಿದನು. ತರುವಾಯ ರಾವಣನು ತಾನು ಸಾಧಿಸಿದ ವಿದ್ಯೆಗಾಗಿ ಬಹಳ ಸಂತೋಷ ಪಟ್ಟು ಸೀತೆಯ ಮೇಲಣ ಮೋಹದಿಂದ ಪ್ರಮದ ವನಕ್ಕೆ ಬಂದು ತನ್ನನ್ನು ಇನ್ನು ಮೇಲೆ ಯಾರೂ ಜಯಿಸಲಾರರೆಂದೂ ಆದುದರಿಂದ ರಾಮನ ಹ೦ಬಲನ್ನು ಬಿಟ್ಟು ತನ್ನನ್ನು ಸೇರಿ ಸಾಮ್ರಾಜ್ಯ ಸುಖವನ್ನನುಭವಿಸೆಂದೂ ಸೀತೆಗೆ ಹೇಳಲು ಆಕೆಯು ಬಹಳ ವ್ಯಸನದಿಂದ ರಾಮನ ಪ್ರಾಣವಿರುವವರೆಗೂ ತನ್ನ ಬಳಿಗೆ ಬರಬೇಡೆಂದು ಹೇಳಿ ಮೂರ್ಛ ಹೊಂದಿದಳು. ಅದನ್ನು ನೋಡಿ ರಾವಣನಿಗೆ ಕರುಣೆ ಹುಟ್ಟ ಸೀತೆಯ ವಿಷಯದಲ್ಲಿ ವೈರಾಗ- ಸರನಾಗಿ ಆಕೆಯ ಗುಣಸವನ ಮಾಡಿ ತಾನು ಮಾಡಿದ ಪಾಪಕೃತ್ಯಗಳಿಗಾಗಿ ತನ್ನನ್ನು ತಾನೇ ದೂಷಿಸಿ ಕೊಂಡು ರಾಮಲಕ್ಷ್ಮಣರನ್ನು ಯುದ್ಧದಲ್ಲಿ ಸೋಲಿಸಿ ಸೆರೆಹಿಡಿದು ತಂದು ಅವ ರಿಗೆ ಸೀತೆಯನ್ನು ಕೊಡುವೆನೆಂದು ನಿಶ್ಚಯಿಸಿ ತನ್ನ ಮನೆಗೆ ಬಂದನು. ಆಗ ಅ೦ಗದ ಪ್ರಭಾಮಂಡಲ ಸುಗ್ರೀವ ಹನುಮುವಾದಿಗಳು ಮಾಡಿದ ದುರಾಚಾರ, ನೆನಪಿಗೆ ಬಂದು ರಾವಣನು ಅವರನ್ನು ಕೂಡಲೆ ಕೊಲ್ಲುವೆನೆಂದು ಶಪಥಮಾಡಿ ದನು. ಆ ಸಮಯದಲ್ಲಿ ಭೂಮಿಯು ಗುಡುಗುವುದು, ಕರುಮಾಡದ ಕಲಶ ಗಳು ಬೀಳುವುದು, ಹಗಲಿನಲ್ಲಿ ಉಲ್ಕಾಪಾತವಾಗುವುದು-ಇವೇ ಮೊದಲಾದ ಅನೇಕ ಉತ್ಪಾತಗಳು ಸಂಭವಿಸಲು ನೈಮಿತ್ತಿಕರು ನಾಳಿನ ಕದನದಲ್ಲಿ ರಾವಣನಿ ಗಪಾಯವಾಗುವುದೆಂದು ನಿಶ್ಚಯಿಸಿ ನುಡಿಯುತ್ತಿರುವಲ್ಲಿ ರಾವಣನು ಸಿಂಹಾ ಸನಾರೂಢನಾಗಿದ್ದು ಸೆರೆಯಲ್ಲಿದ್ದ ತನ್ನ ಮಕ್ಕಳನ್ನೂ ತಮ್ಮನನ್ನೂ ನೆನೆದು ಮುಳಿದು ಕಾಳೆಗಕ್ಕೆ ಹೊರಡಲು ಸನ್ನದ ನಾದನು. ಆಗ ಮಂಡೋದರಿಯು ಬಂದು ಪತಿಯನ್ನು ನಮಸ್ಕರಿಸಿ ತಾನು ಸೀತೆಯನ್ನು ರಾಮನಿಗೆ ಕೊಟ್ಟು ಇಂದಗಿ ಮೇಘನಾದ ಕುಂಭಕರ್ಣರನ್ನು ತರುವೆನೆ೦ದೂ ಯುದಕ್ಕೆ ನಿಂತರೆ ಅವರಿಗೆ ಸಾವು
ಪುಟ:ಪಂಪರಾಮಾಯಣ ಕಥೆ.djvu/೬೭
ಗೋಚರ