ವಿಷಯಕ್ಕೆ ಹೋಗು

ಪುಟ:ಪಂಪರಾಮಾಯಣ ಕಥೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಪ೦ಪ ರಾಮಾಯಣದ ಕಥೆ ರಾಮಲಕ್ಷ್ಮಣರು ತಮ್ಮ ಪ್ರಯಾಣಮಾರ್ಗದಲ್ಲಿ ಮದುವೆಯಾಗಿದ್ದ ಅನೇಕ ಮಂದಿ ಅರಸಿಯರನ್ನು ಕರೆಯಿಸಿ ಲಂಕೆಯಲ್ಲಿ ಕೆಲವು ಕಾಲ ಸುಖದಿಂದಿದ್ದರು. ಇತ್ಯ, ಅಪರಾಜಿತೆಯು ರಾಮನನ್ನು ನೆನೆದು ಅತಿ ಶೋಕದಿಂದಿರುವಲ್ಲಿ ನಾರದನು ಆಕಾಶಮಾರ್ಗದಿಂದಿಳಿದು ಅರಮನೆಗೆ ಒರಲು ಅಪರಾಜಿತೆಯು ಆತನನ್ನೆದುರುಗೊಂಡು ನಮಸ್ಕರಿಸಿ ಮರ್ಯಾದೆ ಮಾಡಿದಳು. ನಾರದನು ಅಪರಾಜಿತೆಯ ಶೋಕ ಕಾರಣವನ್ನು ತಿಳಿದು ರಾಮಲಕ್ಷ್ಮಣರ ಕ್ಷೇಮವಾರ್ತೆ ಯನ್ನು ಆ ದಿನವೇ ತರುವೆನೆಂದು ಹೇಳಿ ಆಕಾಶಕ್ಕೆ ನೆಗೆದು ಲಂಕೆಯನ್ನು ಹೊಕ್ಕು ಬಲ ನಾರಾಯಣರ ಸಭೆಯನ್ನು ಪ್ರವೇಶಿಸಲು ರಾಮಸ್ವಾಮಿಯು ಮುನಿಯ ನೆದುರುಗೊಂಡು ಮಣಿಪೀಠದಲ್ಲಿ ಕುಳ್ಳಿರಿಸಿ ಅರ್ಭ್ಯ ಪಾದ್ಯಗಳನ್ನು ಕೊಟ್ಟನು. ಕುಶಲ ಪ್ರಶ್ನೆಗಳಾದ ತರುವಾಯ ನಾರದನು, ಅಪರಾಜಿತಾದೇವಿ ಸುಮಿತ್ರಾದೇವಿ ಯರನ್ನು ಕಂಡಿದೆ ಎಂದೂ ಅವರು ರಾಮಲಕ್ಷ್ಮಣರನ್ನು ಬೇಗನೆ ಕಾಣದಿದ್ದರೆ ಶರೀರತ್ಯಾಗ ಮಾಡುವರೆಂದೂ ತಿಳಿಸಿದನು. ಅದನ್ನು ಕೇಳಿ ರಾಮಲಕ್ಷ್ಮಣರು ವ್ಯಥೆಪಟ್ಟು, ತಾವು ಕೃಪಾಶೂನ್ಯರೆಂದು ತಮ್ಮನ್ನು ತಾವೇ ಮಣನನ್ನು ಕರೆಯಿಸಿ ತಮ್ಮ ಅವಧಿಯ ವರ್ಷಗಳು ತೀರಿದುವೆಂದೂ ತಾವು ಅಯೋಧ್ಯೆಗೆ ಹೋಗದಿದ್ದರೆ ತಮ್ಮ ತಾಯಂದಿರೂ ಬಾಂಧವರೂ ಬೇದಗೊಳ್ಳುವ ರೆಂದೂ ಹೇಳಿ ಲಂಕೆಯಲ್ಲಿಯ ಅಸಂಖ್ಯಾತವಾದ ಜಿನಭವನಗಳಲ್ಲಿ ವಿಶೇಷ ತ್ಸವವನ್ನು ಮಾಡಿಸಿ ಸೀತೆಯೊಡನೆ ಪುಷ್ಪಕ ವಿಮಾನವನ್ನೆರಿ ಖಚರ ಪರಿವೃಢ ಪರಿವೃತರಾಗಿ ಪ್ರಯಾಣ ಹೊರಟು ಸಮುದ್ರವನ್ನು ದಾಟಿ ದಂಡಕಾರಣ್ಯಕ್ಕೆ ಬಂದು ಅಲ್ಲಿ ತಾವಿದ್ದ ಸ್ಥಳಗಳನ್ನು ಸೀತಾದೇವಿಗೆ ತೋರಿಸಿ ಅಯೋಧ್ಯೆಯ ಬಳಿಗೆ ಬರಲು ಭರತ ಶತ್ರುಘ್ನರು ಆನೆಗಳನ್ನೇರಿ ರಾಮನನ್ನೆದುರುಗೊಳ್ಳುವುದಕ್ಕಾಗಿ ಊರ ಹೊರಕ್ಕೆ ಬಂದರು. ಆಗ ರಾಮಸ್ವಾಮಿಯು ವಿಮಾನದಿಂದಿಳಿದು ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಭರತ ಶತ್ರಜ್ಞರನ್ನು ತೆಗೆದಪ್ಪಿಕೊಂಡು ಹರಸಿದನು. ತರು ವಾಯ ಅವರು ಸೀತಾ ದೇಸಿಗೂ ಲಕ್ಷ್ಮಣನಿಗೂ ಅನುಕ್ರಮವಾಗಿ ನಮಸ್ಕರಿಸಿ ಆಶೀರ್ವಾದವನ್ನು ಪಡೆದು ಕುಶಲನ ರ್ತೆಗಳಿಂದ ಸಂತೋಷ ಚಿತ್ತರಾದರು. ಬಳಿಕ ರಾಮಲಕ್ಷ್ಮಣರು ಎಲ್ಲರೊಡನೆಯ ಕೋಡಿ ತೋರಣ ಪತಾ ಕಾದಿಗಳಿಂದಲಂಕೃತ ವಾದ ಅಯೋಧ್ಯೆಯನ ಪ್ರವೇಶಿಸಿ ಅವರೂ ಸೀತಾದೇವಿಯೂ, ಅಪರಾಜಿತೆ ಸುಮಿತ್ರೆ ಕೈಕ ಸುಪ್ರಭೆಯರನ್ನು ಕಂಡು ಎರಗಿ ನಮಸ್ಕರಿಸಿ ಅವರ ಆಶಿ ರ್ವಾದವನ್ನು ಪಡೆದರು. ಹೀಗೆ ಸುಖಾ. ತಿ ಭಯದಿಂದ ಕೆಲವು ದಿನಗಳು ಕಳೆದ ಮೇಲೆ ಶುಭ ಮುಹೂರ್ತದಲ್ಲಿ ರಾಮಸ್ವಾಮಿಯು ರಾಕ್ಷಸ ದ್ವೀಪಸಹಿತವಾಗಿ ಲಂಕೆಯನ್ನು ವಿಭೀ ಸಣನಿಗೂ ದೇವಾನೀಕ ಪುರವನ್ನು ರತ್ನಜಟಿಗೂ ಕಿ೦ಧನಗರವನ್ನು ಸುಗ್ರೀವನಿಗೂ