ಪಂಪರಾಮಾಯಣದ ಕಥೆ 71 ಆಗ ಸುಗ್ರೀವ ಮೊದಲಾದವರು ರಾಮನ ಬಳಿಗೆ ಬಂದು ಸಚ್ಚರಿತೆಯಾದ ಜಾನಕಿಯನ್ನು ಪರದೇಶದಲ್ಲಿ ಬಿಟ್ಟಿರುವುದು ಸರಿಯಲ್ಲವೆಂದೂ ಕೂಡಲೆ ಅಲ್ಲಿಗೆ ಕರೆಯಿಸುವುದೆಂದೂ ಬೇಡಿಕೊಳ್ಳಲು ರಾಮನು ತಾನು ಲೋಕಾಪವಾದ ಭಯ ದಿಂದ ಆಕೆಯನ್ನು ಕಳೆದೆನಲ್ಲದೆ ಅವಗುಣಾರೋಪಣದಿಂದಲ್ಲವೆಂದೂ ಸಚ್ಚರಿತ ದಲ್ಲಿ ಆಕೆಗೆ ಸಮನಾದವರು ಮತ್ತಾರೂ ಇಲ್ಲವೆಂಬ ವಿಷಯವನ್ನು ತಾನು ಅರಿತಿರುವೆನೆಂದೂ ಹೇಳಿ ಆಕೆಯ ಅಪವಾದವನ್ನು ಕಳೆಯುವುದಕ್ಕಾಗಿ, ಎಲ್ಲರೂ ನೋಡುವಂತೆ, ಅಗ್ನಿಪ್ರವೇಶ ಪರೀಕ್ಷೆಯನ್ನು ಮಾಡುವುದೆಂದು ತಿಳಿಸಿದನು. ಅದಕ್ಕೆ ಸುಗ್ರೀವಾದಿಗಳು ಒಪ್ಪಿ ಅಪ್ಪಣೆ ಪಡೆದು ಪುಂಡರೀಕಿಣೀಪುರಕ್ಕೆ ಹೋಗಿ ಸೀತಾದೇವಿಯೊಡನೆ ಈ ವಿಷಯವನ್ನು ತಿಳಿಸಲು, ವಿಷಯ ವಿರಕ್ಕೆಯಾದ ಸೀತಾ ದೇವಿಯು ತಾನು ಅಗ್ನಿ ಪ್ರವೇಶ ಮಾಡಿ ಶುದ್ದೆಯಾಗಿ ತಪಸ್ಸೆಯಾಗುವೆನೆಂದು ಮನಸ್ಸಿನಲ್ಲಿ ನಿಶ್ಚಯಿಸಿ ವಿಮಾನವನ್ನೇರಿ ಅಯೋಧ್ಯೆಗೆ ಬಂದಳು. ಆ ದಿನ ಮಹೇಂದ್ರೋದ್ಯಾನದಲ್ಲಿ ರಾತ್ರಿಯನ್ನು ಕಳೆದು ಮರು ದಿನ ರಾಘವನನ್ನು ಕಂಡು ಅವಿಚಾರದಿಂದ ತನ್ನನ್ನು ಬಿಸುಟು ತನಗೆ ಬಹಳ ನೋವನ್ನುಂಟುಮಾಡಿದರೆಂದು ಹೇಳಲ , ರಾಮಚ೦ದ್ರನು ತಾನು ಲೋಕಾಪವಾದಕ್ಕಾಗಿ ಭಯಪಟ್ಟು ಆ ರೀತಿಯಾಗಿ ಮಾಡಿದೆನಲ್ಲದೆ ಆಕೆಯ ಸುಚರಿತೆಯ ವಿಷಯವಾಗಿ ಯಾರಿಗೂ ಸಂಶಯವಿತ್ತೆಂದು ತಿಳಿಸಿ ಲೋಕ ಪ್ರಖ್ಯಾತ ವಾಗುವಂತೆ ಅಗ್ನಿ ಪ್ರವೇಶಮಾಡಿ ಬಾರೆಂದು ಹೇಳಲು ಆಕೆಯು ಮಹಾ ಪ್ರಸಾದವೆಂದು ಒಪ್ಪಿದಳು. ಆಗ ಚ೦ದನಾಗರು ಸುಗಂಧ ದ್ರವ್ಯಗಳಿಂದ ದೊಡ್ಡ ಅಗ್ನಿಕುಂಡವನ್ನು ರಚಿಯಿಸಿದುದನ್ನು ದೇವೇಂದ್ರನು ತಿಳಿದು ಮಹಾ ಸತಿಯಾದ ಸೀತಾದೇಏಗೆ ಕೇಡುಂಟಾಗದಂತೆ ಮಾಡಿ ಬರಲು ಮೇಘಕೆ ತನನೆಂಬ ದೇವನನ ನಿಯಸಿಸಿದನು. ಸೀತಾದೇವಿಯು ಅಲ್ಲಿ ನೆರೆದಿದ್ದ ಸಿಯಚ್ಚರಾಮರ ನರ ಪ್ರಮುಖರು ಕೇಳು ವಂತೆ ಸುಸ್ವರದಿಂದ “ ನಾನು ವಸcಧರಾ ವಲ್ಲಭನಾದ ರಾಘವನಲ್ಲಲ್ಲದೆ ರಾವ ಹಾದಿಯಾದ ಮಿಕ್ಕವರಲ್ಲಿ ಪ್ರೀತಿಯನ್ನು ಮನಸ್ಸಿಗೆ ತಂದಿದ್ದರೆ ಈ ಯ: ಪ್ಲೇಶ್ವರನಿಂದ ನನಗೆ ಮರಣವುಂಟಾಗಲಿ " ಎಂದು ಪ್ರತಿಜ್ಞೆ ಗೈದು ಪಂಚ ಪರಮೇಷ್ಟ್ರಗಳಿಗೆ ನಮ್ಮ ಸ್ವಾರಮಾಡಿ ಧಗಧಗಿಸುತ್ತಿರುವ ಉರಿಯಲ್ಲಿ ಬಿದ್ದಳು. ಆಗ ಸುತ್ತಲಿರುವವರೆಲ್ಲರೂ ಬೆಚ್ಚು ಬಿದ್ದಿರಲು, ಸೀತಾದೇವಿಯು ತಿಳಿಗೊಳದಲ್ಲಿರುವಂತೆ ನಿಶ್ಚಲೆಯಾಗಿ ಜಿನ ಪತಿಯ ಚರಣವನ್ನು ಧ್ಯಾನಿಸುತ್ತಿದ್ದಳು. ಪತಿವ್ರತಾ ಮಹಿಮೆಯಿಂದುಂಟಾದ ಈ ಆಶ್ಚರವನ್ನು ಕಂಡು ಎಲ್ಲರೂ ಬೆರಗಾದರು. ಆಗ ದೇವೇ೦ದ್ರನಾಜ್ಞೆಯ ಮೇರೆಗೆ ನಿಯಮಿತನಾಗಿದ್ದ ದೇವನು ಆ ಕುಂಡವನ್ನು ಪದ್ಮಸರೋವರವನ್ನಾಗಿ ಮಾಡಿ ತನ್ನ ದೇವಿಯರಿ೦ದ ಆ ಕೊಳದಲ್ಲಿದ್ದ ಸೀತಾದೇವಿಯನ್ನೆತ್ತಿ ತರಿಸಿ ಸಿಂಹಾಸನದಲ್ಲಿ ಕುಳ್ಳಿರಿಸಿ ತಾನು ಆಕಾಶದಲ್ಲಿದ್ದು ಲೋಕಕ್ಕೆಲ್ಲ ಆಶ್ಚರವಾಗುವಂತೆ ಹೂಮಳೆಗರೆಯಿಸಿ
ಪುಟ:ಪಂಪರಾಮಾಯಣ ಕಥೆ.djvu/೭೮
ಗೋಚರ