ಪಂಡರಾಮಾಯಣದ ಕಥೆ ದನು. ಅದನ್ನು ಕಂಡು ಜನರೆಲ್ಲರೂ ಒಂದೇ ಕೊರಳಿನಲ್ಲಿ ಸೀತಾದೇವಿಯ ಪಾತಿ ಇತ್ಯವನ್ನು ಕೊಂಡಾಡಿದರು, ಲವಾ೦ಕುಶರು ಪುಲಕಾಂಕಿತರಾದರು, ರಾಮ ಲಕ್ಷ್ಮಣರು ಸಂತೋಷ ಸಾಗರದಲ್ಲಿ ಮುಳುಗಿದರು. ಬಂಧುವರ್ಗವೂ ಪರಿಜನ ಹರ್ಷವನ್ನು ತಾಳಿತು, ದೇವದುಂದುಭಿ ಮೊಳಗಿತು, ಗಂಧವಾಹನು ದಿವ್ಯಾ ಮೋದದೊಡನೆ ಸುಳಿದನು, ರಾಜಲೋಕವು ಪ್ರೀತಿಯಿಂದ ಹರಸಿತು. ಆಗ ರಾಮಸ್ವಾಮಿಯು ಸೀತಾದೇವಿಯ ಬಳಿಗೆ ಬಂದು, ತನ್ನನ್ನು ಕ್ಷಮಿಸಿ ಮೊದಲಿದ್ದ ತೆರನಾಗಿಯೇ ತನ್ನ ವಲ್ಲಭೆಯಾಗಿದ್ದು ಸಾಮ್ರಾಜ್ಯ ಸುಖವನ್ನನುಭವಿಸ ಬೇಕೆಂದು ಹೇಳಲು ಸೀತಾದೇವಿಯು, ಕೇಡು ಸಂಸಾರದಲ್ಲಿ ನ್ನು ಉಪಯೋಗ ಎಲ್ಲೆಂದೂ ಕೇಡಿಲ್ಲದ ಮೋಕ್ಷಸ:ಖಕ್ಕೆ ಕಾರಣವಾಗಿರುವ ತಪಸ್ಸನ್ನು ಕೈಕೊಳ್ಳಿ ನೆಂದೂ ಹೇಳಿ ತನ್ನ ತಲೆಗೂದಲನ್ನು ಕಿತ್ತು ಆತನ ಮುಂದಿಟ್ಟಳು. ಈ ತೆರನಾದ ಸತಿಯ ವೈರಾಗ್ಯವನ್ನು ಕಂಡು ರಾಘವನು ಮೂರ್ಛಿತನಾಗಿ ಸ್ವಲ್ಪ ಹೊತ್ತಿನಮೇಲೆ ಎಚ್ಚತ್ಯನು. ಅಷ್ಟರಲ್ಲಿ ಸೀತಾದೇವಿಯು ಪೃಥುಮತಿ ಕಂತಿಯರ ಪಕ್ಕದಲ್ಲಿ ತಪಸ್ಸಿಗೆ ನಿಂತು ಮಹೇಂದ್ರೋ ದ್ಯಾನ ವನಕ್ಕೆ ಹೋಗಿ ಸಕಲಭೂಷಣ ಕೇವಲಿ ಭಟ್ಟಾರಕರ ಸಭೆಯನ್ನು ಸೇರಿದಳು. ರಾಮನು ಅತಿ ವ್ಯಾಮೋಹದಿಂದ ಹೊರಟು ಸಕಲ ಲೋಕಾಧಿಸರಿಂದ ಕೂಡಿದ್ದ ಸಕಲಭೂಷಣ ಕೇವಲಿಗಳ ಸಭೆ ಯನ್ನು ಹೊಕ್ಕು ಕೇವಲಿಗಳಿಗೆ ನಮಸ್ಕರಿಸಿ ಕುಳಿತುಕೊಂಡನು , ಲಕ್ಷ್ಮಣಾದಿಗಳು ಸೀತಾದೇವಿಯನ್ನು ಬಗೆಬಗೆಯಾಗಿ ಸ್ತೋತ್ರ ಮಾಡಿ ಭಕ್ತಿಯಿ೦ದೆರಗಿ ನಮಸ್ಕಾರ ಮಾಡಿದರು. ಆಗ ವಿಭೀಷಣನು ಎದ್ದು ನಿಂತು ಕೈಮುಗಿದುಕೊಂಡು ಭಟ್ಟಾರಕ ರನ್ನು ಕುರಿತು ರಾಮಲಕ್ಷ್ಮಣರ ಪೂರ್ವಜನ್ಮದ ಸ್ವಲ್ಪ ಪ್ರಭಾವವನ್ನೂ ಶೌಚಾ ಚಾರ ಪರಾಯಣನಾದ ರಾವಣನು ಸೀತಾದೇವಿಗೆ ಮರುಳುಗೊಳ್ಳುವುದಕ್ಕೆ ಪೂರ್ವ ಜನದ ಪಾಸ್ ಕಾರಣವನ್ನೂ ವಿವರಿಸಿ ಹೇಳಬೇಕೆಂದು ಬೇಡಿಕೊಳ್ಳಲು ಕೇವಲಿ ಗಳು ಅವನ್ನೂ ಇತರರ ಭವಾವಳಿಯನ್ನೋ ವಿಶದವಾಗಿ ತಿಳಿಸಿದರು. ತರುವಾಯ ರಾಮಲಕ್ಷ್ಮಣರು ಲವಕುಶರೊಡನೆ ಅಯೋಧ್ಯೆಯನ್ನು ಹೊಕ್ಕು ರಾಜ್ಯಸುಖಾ ಯತ್ತ ಮನರಾಗಿ ಅನೇಕ ವರ್ಷ ಸ೦ತೋಷದಿ೦ದಿದ ರು. ಹೀಗಿರುವಾಗ ಸುರ ಪರಿಷತ್ತಿನಲ್ಲಿ ಮಧ್ಯವರ್ತಿಯಾದ ಸೌಧ ಎದ್ರನು ಧರ ನಿರೂಪಣಮಾಡುವಲ್ಲಿ, ಗತಿಗಳಲ್ಲೆಲ್ಲ ಮನುಜ ಗತಿಯ ಪಾವನವಾದುದೆಂದೂ ಮಿಕ್ಕ ಗತಿಗಳು ಮುಕ್ಕಿ ಸುಖವನ್ನು ಕೊಡಲಾರವೆಂದೂ ಹೇಳಲು, ಆ ಸಭೆಯ ಲ್ಲಿದ್ದ ಗೀರ್ವಾಣನೊಬ್ಬನು “ ರಾಮನು ಮನುಜ ಗತಿಯನ್ನು ಪಡೆದು ಉತ್ತಮ ನೆನಿಸಿಕೊ೦ಡಿದರೂ ದೀಕೈಗೊಳ್ಳಲಿಲ್ಲವಲ್ಲಾ ! ಆದುದರಿಂದ ಮನುಷ, ಭವವೇ ದೀಕ್ಷೆಗೆ ಕಾರಣವೆಂದು ಹೇಗೆ ಹೇಳುವಿರಿ? " ಎಂದು ಕೇಳಿದನು. ಅದಕ್ಕೆ ವಿಭಾವಸು ನೆಂಬ ದೇವನು ರಾಮನಿಗೆ ಲಕ್ಷಣನಲ್ಲಿರುವ ಸ್ನೇಹ ಕಾರಣದಿಂದ ತಸವ
ಪುಟ:ಪಂಪರಾಮಾಯಣ ಕಥೆ.djvu/೭೯
ಗೋಚರ