ಪುಟ:ಪದ್ಮರಾಜಪುರಾನ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕ್ಕಿಂತಲೂ ಇನ್ನೂ ರು ವರ್ಷಗಳ ಹಿಂದೆ + ಈ ಪುರಾಣವು ಬರೆಯಲ್ಪಟ್ಟಿತು. ಉಭಯ ಕವಿತಾವಿಶಾರದನಾದ ಈ ಕವಿಯು ಮಹಾಕವಿ' ಎಂಬುವುದಕ್ಕೆ ಈ ಮಹಾಕಾವ್ಯವೇ ಸಾಕ್ಷಿ. ಈತನು ಕಥಾನಾಯಕರ ವಂಶದಲ್ಲಿಯೇ ಹುಟ್ಟಿದವನೆಂದು ಈ ಗ್ರಂಥದ 1 ನೇ ಸಂಧಿಯಲ್ಲಿ ವಿವರಿಸಿರುವ ವಂಶಾವಳಿ ಯಿಂದ ವ್ಯಕ್ತಪಡುತ್ತದೆ. ( 16 ರಿಂದ 29 ವರೆಗಿನ ಪದ್ಯಗಳನ್ನು ನೋಡಿ) ಈ ವಂಶದವರು ಆರಾಧ್ಯ ಬ್ರಾಹ್ಮಣ ಕುಲಕ್ಕೆ ಸೇರಿದವರು. ಆರಾಧ್ಯಕುಲ ಶಿರೋರತ್ನರೆಂದು ವಿಶ್ಲೇಷಿಸಲ್ಪಟ್ಟಿದ್ದಾರೆ. ಈ ಪದ್ಮಣಾರರಿಗೆ ಕಮ್ಮೆ ಕುಲದ ಗೌರಸದಣಾಯಕರ ಮಗಳಾದ ಮಾದೇವಿಯು ಮದುವೆಯಾಗಿತ್ತು. ಇವರ ವಂಶಸ್ಥರು ಕೆರೆಯ ಪಂಡಿತರೆನ್ನಿ ಸಿಕೊಂಡು, ಈಗಲೂ ಇರುತ್ತಾರೆ. ಇವರ ಪೈಕಿ ಒಬ್ಬರಾದ ಮೈಸೂರು ಡಿಸ್ಟಿಕ್ಸ್ ಹೆಗ್ಗಡದೇವನಕೋಟೆ ತಾಲ್ಲೂಕು ಅಂಡುಗೆರೆಯಲ್ಲಿ ನಮ್ಮ ಸಮಾಸ ಬಂಧುಗಳಾದ ವೇ|| ಸಕಲೇಶ್ವರಾರಾಧ್ಯರಲ್ಲಿ ಈ ಪ್ರರಾಣದ ಒಂದು ಪ್ರತಿಯು ನನಗೆ ದೊರೆಯಿತು. ಅದು ತಕ್ಕ ಮಟ್ಟಿಗೂ ಶುದ್ದ ವಾದ ಪ್ರತಿ. ಆ ಕವಿತಾಯೋಗ್ಯತೆಯನ್ನು ನೋಡಿ ಆನಂದಪರವಶನಾ ಗಿ, ಇಂತಹ ಸತ್ಕಾವ್ಯವನ್ನು ಮುದ್ರಣ ಮಾಡಿಸಿ ಪ್ರಕಟಿಸಿದರೆ, ರಸಜ್ಞರಿಗೆ ಪರಮಾನಂದವನ್ನು ಉಂಟುಮಾಡದಿರಲಾರದೆಂದು ನಂಬಿ, ಈ ಕಾರದಲ್ಲಿ ನಾನು ಉದ್ಯುಕ್ತನಾದನು. ಆದರೆ, ಮೇಲೆ ಹೇಳಿದ ವಾಲೆ ಪ್ರತಿಯು ವಾಲೆಗಳ ಕೊನೆಕೊನೆಗಳಲ್ಲಿ ಸ್ವಲ್ಪ ಶಿಥಿಲವಾಗಿದ್ದುದರಿಂದ, ತತ್ಕೃಣವೆ ನನ್ನ ಸಂಕಲ್ಪವು ಸಫಲವಾಗಲು ಅವಕಾಶತಪ್ಪಿತು. ಹಾಗೆಯೇ ಅಲ್ಲಲ್ಲಿ ವಿಚಾರ ಮಾಡುತ್ತಿರುವಾಗ ಈಶ್ವರಾನುಗ್ರಹದಿಂದ ಅದೇ ವಂಶದವರಾದ ವೇ|| ಗುರೂ ರು ಕಾಶೀಆರಾಧ್ಯರಲ್ಲಿ ಮತ್ತೊಂದು ಪ್ರತಿಯು ದೊರೆಯಿತು. ಇದು ಮೊದ ಲನೇದರಷ್ಟು ಶುದ್ದ ಪ್ರತಿಯಲ್ಲದಿದ್ದರೂ, ಅದರ ಲೋಪಗಳನ್ನು ಸರಿಮಾಡಿಕೊ ಳ್ಳುವುದಕ್ಕೆ ಮಾತ್ರ ಸಾಕಾದಷ್ಟು ಸಹಾಯಕರವಾಯಿತು. ಇವೆರಡು ಪ್ರತಿ ಗಳನ್ನೂ ಇಟ್ಟು ಕೊಂಡು ಯಥಾವತಿ ಪರಿಷ್ಕರಿಸಿ ಈಗ ಅಚ್ಚು ಹಾಕಿಸಿದೆನು.

  • ಇದರ ಕಾಲವು ಕ್ರಿಸ್ತಶಕದ ೧೩೮೫ನೇ ಸಂವತ್ಸರವೆಂದು ಮ|| ಆರ್. ನರಸಿಂಹಾ ಚಾರ್ ಮತ್ತು ಎಸ್. ಜಿ. ನರಸಿಂಹಾಚಾರ್ ಇವರು ಬರೆದಿರುವ ಕರ್ನಾಟಕ ಕವಿಚರಿತೆಯಲ್ಲಿ ನಿರ್ಣಯಿಸಲ್ಪಟ್ಟಿದೆ.

s