ನರನರು ಖಂಡ ಗೋರಾಸಿಂಗ:- ರಾಣಾ, ಹೀಗೆ ಗಾಬರಿಯಾಗಲು ಕಾರಣವಿಲ್ಲ. ಪರಾಣರು ಮೇಲೆ ಏರಿಬರಲಿ, ಸೇನಾಪತಿ ಬಾದಲನು ಆಗಲೇ ಬಂದಿರುವನು. ಅವನು ವೈರಿಗಳ ಮೇಲೆ ಕಲ್ಲುಬಿರುವುದನ್ನು ನಿಲ್ಲಿಸಬೇಕೆಂದು ಅಪ್ಪಣೆಮಾಡಿ ರುವನು. ತಾವೆಲ್ಲರೂ ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ಭೀಮಸಿಂಹನು ವಿಸ್ಮಿತನೇತ್ರದಿಂದ ಗೋರಾಸಿಂಗನ ಮುಖವನ್ನು ನೋಡುತ್ತ ನಿಂತುಕೊಂಡನು. ಅವನು ಮನಸ್ಸಿನಲ್ಲಿ ಇದು ಬಾದಲನ ಅಪ್ಪಣೆ ಯಲ್ಲವೆಂತಲೂ ಇದರಲ್ಲಿ ಗೋರಾಸಿಂಗನ ಕೌಶಲವೇನಾದರೂ ಇರಬೇಕೆಂತಲೂ ಭಾವಿಸಿಕೊಂಡು ಎಲ್ಲ ಸೈನಿಕರಿಗೂ ಅದರಂತೆ ಅಪ್ಪಣೆ ಕಳುಹಿಸಿದನು. ಕ್ಷಣ ಮಾತ್ರದಲ್ಲಿ ಮೇಲಿನಿಂದ ಬೀಳುವ ಕಲ್ಲಿನ ಮಳೆಯು ಪೂರಾ ನಿಂತುಹೋಯಿತು. ಮೇಲಿನಿಂದ ಕಲ್ಲು ಬೀಳುವುದು ನಿಂತಕೂಡಲೆ ಪರಾಣ ಸೈನಿಕರು ತಡ ವಿಲ್ಲದೆ ದುರ್ಗವನ್ನು ಏರಿಬರತೊಡಗಿದರು. ಆದರೂ ದುರ್ಗದ ಕೆಳಗಿನ ನರ್ವ ತವು ತುಂಬಾ ಕಡಿದಾಗಿದ್ದುದರಿಂದ ಅವರಿಗೆ ಏರಿಬರಲು ಬಹು ಪ್ರಯಾಸವಾ ಯಿತು. ಅಡಿಯಿಂದ ಮುನ್ನೂರು ಅಡಿ ಎತ್ತರವಾದ ದರಿಯನ್ನು ಏರಿ ಬಂದು ಆ ಮೇಲೆ ದುರ್ಗದ ಗೋಡೆಯನ್ನು ಏರಬೇಕು! ಕಗ್ಗತ್ತಲೆಯಲ್ಲಿ ಏರಿಬರುವಾಗ ಎಷ್ಟೋ ಮಂದಿ ಪರಾಣರು ಕಾಲುಜಾರಿ ಉರುಳಿಬಿದ್ದರು. ಆದರೂ ಅವರಿಗೆ ಮನಸ್ಸಿನಲ್ಲಿ ಇನ್ನೊಂದು ಧೈರ್ಯವಿತ್ತು ! ರಜಪೂತರು ಮೇಲೆ ಸಂಗ್ರಹಿಸಿಟ್ಟು ಕೊಂಡಿದ್ದ ಬಂಡೆಗಲ್ಲುಗಳೆಲ್ಲ ಇಷ್ಟರಲ್ಲಿಯೇ ತೀರಿಹೋದುವೆಂದು ಅವರು ತಿಳಿದು ಕೊಂಡಿದ್ದರು. ಅದರಿಂದ ಅವರು ಒಳ್ಳೇ ಉತ್ಸಾಹದಿಂದ ಜಯಧ್ವನಿಗೈಯುತ್ತ ಏರಿಬರತೊಡಗಿದರು ! ಆದರೆ ಇದೇನು ? ಸಾವಿರಾರು ಮಂದಿ ವರಾಣ ಸೈನಿಕರು ಮೇಲಿನಿಂದ ಕೆಳವರೆಗೆ ಸಾಲು ಗೊಂಡು ಏರಿಬರತೊಡಗಿದ್ದರುಒಂದೊಂದು ಸಾಲಿನಲ್ಲಿ ನೂರಾರು ಜನರಿ ದ್ದರು. ಅವರಲ್ಲಿ ಹಲವರು ದರಿಯ ಭಾಗವನ್ನು ಏರಿಬಂದು, ದುರ್ಗದ ಗೋಡೆ ಯನ್ನು ಏರುವುದಕ್ಕೆ ಆರಂಭಿಸಿದ್ದರು. ಇಷ್ಟರಲ್ಲಿ ಅಕಸ್ಮಾತ್ ಬಾದನು ತನ್ನ ಸೈನಿಕರಿಗೆ ಅಪ್ಪಣೆಕೊಟ್ಟನು. ರಜಪೂತರು ಮೊದಲಿನಂತೆ ಒಂದೇಸವನೆ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಉರುಳಿಸತೊಡಗಿದರು ಒಂದೊಂದು ಕಲ್ಲಿ ೮೫
ಪುಟ:ಪದ್ಮಿನಿ .djvu/೧೦೦
ಗೋಚರ