ಹನಿ ದರೆ ಅಲ್ಲಾವುದ್ದೀನನಿಗೆ ದಿಲ್ಲಿಗೆ ತಿರುಗಿ ಹೋಗುವುದೇ ಯೋಗ್ಯವೆನಿಸುವುದು, ಆ3 ದಿಶ್ವರನಾಗಿ ಇಂಧ ಯಃಕಶ್ಚಿತನಾದ ರಾಣನನ್ನು ಜಯಿಸುವುದಾಗ ದಿದ್ದರೆ ಜನರಲ್ಲಿ ಅವಹಾಸ್ಯಕ್ಕೆ ಗುರಿಯಾಗಬೇಕಾಗುವುದಲ್ಲಾ' ಎಂಬುದು ಒಂದು ಯೋಚನೆ; ಯಾವ ನಮ್ಮಿನಿಯ ಸಲುವಾಗಿ ನಾನು ಇಷ್ಟೊಂದು ಕಷ್ಟ ನಷ್ಟ ಗಳನ್ನು ಸಹಿಸಿದೆನೋ ಆ ನನಿಯ ಮೋರೆಯನ್ನು ಕೂಡ ನೋಡದೆ ಹೇಗೆ ತಿರುಗಿ ಹೋಗಲೆಂಬುದು ಇನ್ನೊಂದು ವಿಚಾರ; ಇವೆರಡೂ ಭಾವನೆಗಳು ಮನ ಸ್ಸಿನಲ್ಲಿ ಬಂದಕೂಡಲೆ ಅವನು “ಈ ಚಿತ್ತೂರು ದುರ್ಗವನ್ನು ವಶಮಾಡಿಕೊಳ್ಳ ಲಾರದೆ ಹೋದರೆ ನನ್ನ ಹೆಸರು ಅಲ್ಲಾವುದ್ದೀನನಲ್ಲ ” ಎಂದು ಪ್ರತಿಜ್ಞೆ ಮಾಡು ವನು. ಹೀಗಾಗಿ ಅಲ್ಲಾವುದ್ದೀನನ ಮನಸ್ಸು ಹೊಯ್ದಾಡಲಾರಂಭಿಸಿತು. ಅವನು ಒಂದೇ ಸವನೆ ಅನೇಕ ದಿನಗಳ ವರೆಗೆ ವಿಚಾರವಾಡಿದನು. ಆದರೂ ಅವನಿಂದ ಯಾವುದನ್ನೂ ನಿರ್ಣಯಿಸುವುದಾಗಲಿಲ್ಲ. ಅಲ್ಲಾವುದ್ದೀನನು ಚಿತ್ತೂರನ್ನು ಮುತ್ರಿ ಸುಮಾರು ೧೮ ತಿಂಗಳಾಗುತ್ತ ಬಂದಿತ್ತು, ಇಂಧ ಪ್ರಸಂಗದಲ್ಲಿ ಇನ್ನೊಂದು ಸಂಕಟವೊದಗಿತು. ಅಲ್ಲಾವುದ್ದೀನನು “ಏನು ಮಾಡಲಿ ? ಹೇಗೆ ಮಾಡಲಿ?' ಎಂದು ಯೋಚಿಸುತ್ತ ಕುಳಿತುಕೊಂಡಾಗ ದಿಲ್ಲಿಯಿಂದ ಒಬ್ಬ ಸರದಾರನು ಬಂದು'.. “ಮೊಗಲ ಸೇನಾವತಿಯಾದ ತುರ್ಕಿ ಖಾನನು ದೊಡ್ಡದೊಂದು ಸೈನ್ಯವನ್ನು ತೆಗೆದುಕೊಂಡು ಬಂದು ದಿಲ್ಲಿಯನ್ನು ಮುತ್ತಿರುವನು! ಅವನು ಕೆಲವು ದಿನಗಳಲ್ಲಿಯೇ ಲಗ್ಗೆ ಹತ್ತಿ ರಾಜಧಾನಿಯನ್ನು ವಶ ಮಾಡಿಕೊಳ್ಳುವನು! ಸೇನಾವತಿಯಾದ ಜಾಫರಖಾನನು ಒಳಗೆ ತಕ್ಕಷ್ಟು ಸೈನ್ಯ ಸನ್ನಾಹವಿಲ್ಲದೆ ಇರುವುದರಿಂದ ಬಾದಷಹರ ಆಗಮನವನ್ನು ನಿರೀಕ್ಷಿಸು ತಲಿರುವನು! ” ಎಂದು ವಿಜ್ಞಾಪಿಸಿದನು. ಇದನ್ನು ಕೇಳಿ ಅಲ್ಲಾವುದ್ದೀನನ ಎದೆಯು ದಗ್ಗೆಂದಿತು. ಅವನು ಕೂಡಲೆ ಅರ್ಧ ಸೈನಿಕರು ದಿಲ್ಲಿಗೆ ತಿರುಗಿ ಹೋಗಬೇಕೆಂದು ಅಪ್ಪಣೆಕೊಟ್ಟು ಕಳುಹಿಸಿದನು. ಬಳಿಕ ತನ್ನ ಮುಖ್ಯ ಮುಖ್ಯ ಮಂತ್ರಿಗಳನ್ನೂ ಸರದಾರರನ್ನೂ ಕೂಡಿಸಿ ಸಭೆ ಗೊಂಡು ಚಿತ್ತೂರಿನವರ ಸಂಗಡ ಒಪ್ಪಂದವಾಡಿಕೊಳ್ಳಬೇಕೆಂದು ನಿರ್ಣಯಿ ಸಿದನು. fo
ಪುಟ:ಪದ್ಮಿನಿ .djvu/೧೦೫
ಗೋಚರ