ಮೂರನೆಯ ಖ೦ಡ ಏಳನೆಯ ಪರಿಚ್ಛೇದ ಮಾರನೆಯ ದಿನ ಮಧ್ಯಾಹ್ನದ ಮೇಲೆ ದುರ್ಗದ ಶಿಖರದಲ್ಲಿ ನಿಂತಿದ್ದ ಸೇನಾಪತಿ ಬಾಗಲನು ಒಂದು ಆಶ್ಚರ್ಯಕರವಾದ ನೋಟವನ್ನು ನೋಡಿದನು. ವರಾಣ ಸವಾರನೊಬ್ಬನು ವೇಗದಿಂದ ದುರ್ಗದ ಕಡೆಗೆ ಬರು ತಿದ್ದನು. ಅವನ ಕೈಯಲ್ಲಿ ಸಂಧಿಸೂಚಕವಾದ ಬಿಳಿಯ ನಿಶಾನೆಯಿತ್ತು. ಸವಾ ರನು ನಮೀವಕೆ ಬಂದ ಕೂಡಲೆ ದುರ್ಗದ ಕಾವಲುಗಾರರು ಬಾಗಿಲನ್ನು ತೆಗೆದು ಅವನನ್ನು ಒಳಗೆ ಬಿಟ್ಟರು. ಅಲ್ಲಾವುದ್ದೀನನು ತಾನಾಗಿಯೇ ಸಂಧಿಯ ಪ್ರಸ್ತಾವವನ್ನು ಎತ್ತಿರುವನೆಂಬ ಸುದ್ದಿಯು ಕ್ಷಣಮಾತ್ರದಲ್ಲಿ ದುರ್ಗದಲ್ಲೆಲ್ಲ ಹಬ್ಬಿತು ರಜಪೂತ ಸರದಾರರೆಲ್ಲರಿಗೂ ವರಮಾನಂದವಾಯಿತು. ದ್ವಾರಪಾಲಕರಲ್ಲೊನು ಆ ಸವಾರನನ್ನು ಕರೆದುಕೊಂಡು ರಾಣನ ಅರ ಮನೆಯ ಬಳಿಗೆ ಬಂದನು, ರಾಣನು ಸವಾರನು ಕೊಟ್ಟ ಪತ್ರವನ್ನು ತಟ್ಟನೆ ಒಡೆದು ಓದತೊಡಗಿದನು, ಮೊದಲು ಅವನ ಮುಖದಲ್ಲಿ ಆನಂದದ ಹೊಳವು ಕಂಡಿತು. ಕೂಡಲೆ ವಿಷಾದದ ಛಾಯೆಯು ಮುಖವನ್ನೆಲ್ಲ ಆವರಿಸಿ ಬಿಟ್ಟಿತು ! ಬಳಿಯಲ್ಲಿಯೇ ಕುಳಿತಿದ್ದ ಭೀಮಸಿಂಹನು ರಾಣನ ಮುಖಲಕ್ಷಣಗಳನ್ನು ನೋಡಿ, “ರಾಣಾಜೀ, ವರಾಣನು ಹೇಳುವುದೇನು ? ” ಎಂದನು. ರಾಣನು ಮಾತಾಡದೆ ಮುಖವನ್ನು ತಗ್ಗಿಸಿ ಪತ್ರವನ್ನು ಭೀಮ ಸಿಂಹನ ಕೈಯಲ್ಲಿ ಕೊಟ್ಟನು ಭೀಮಸಿಂಹನು ವತ್ರವನ್ನು ಓದಿ ನೋಡಿದು ಅದರ ಸಾರಾಂಶವು ಈ ರೀತಿಯಾಗಿತ್ತು :- ಮಹಾರಾಣಾ, ನಿಮ್ಮ ಶೌರ್ಯ ಸಾಹಸಗಳನ್ನು ನೋಡಿ ನನಗೆ ಅತ್ಯಂತ ಆನಂದವಾ ಯಿತು. ಇಡೀ ಹಿಂದುಸ್ಥಾನದಲ್ಲೆಲ್ಲ ಚಿತ್ತೂರಿನ ರಜಪೂತರೇ ನನ್ನ ಎದುರು ನಿಂತು ಯುದ್ಧ ಮಾಡಿದವರು. ನಾನು ನಿಮ್ಮ ಸ್ನೇಹವನ್ನು ಕೋರುವೆನು, ರಾಣಾ, ಇನ್ನೊಂದು ವಿಚಾರವಿದೆ ತಾವು ಅತಿಥಿವತ್ಸಲರೆಂದು ಕೇಳಿ ದೇನೆ. ಇಂದು ನಾನು ತಮ್ಮ ಅತಿಧಿ; ತಾವು ಈ ಅತಿಧಿಯ ಆಶೆಯನ್ನು ೯೧
ಪುಟ:ಪದ್ಮಿನಿ .djvu/೧೦೬
ಗೋಚರ