ಹನಿ ಪತಿವ್ರತಾ ಶಿರೋಮಣಿಯಾದ ನಮ್ಮಿನೀದೇವಿಯು ತನ್ನ ಕರ್ತವ್ಯವಾಲನಕ್ಕಾಗಿ ನಿರುವಾಯಳಾಗಿ ಈ ವಿಚಾರವನ್ನು ಒಪ್ಪಿಕೊಂಡಳೆಂಬುದು ಆ ಮೂಢನಿಗೇನು ಗೊತ್ತು ? ಪತಿಯ ವರದೇವತೆಯೆಂದು ತಿಳಿದಿದ್ದ ಪಮ್ಮಿನಿಯ ಕುಲಶೀಲಗ ಳನ್ನು ಈ ನೀಚನು ಎತ್ತಬಲ್ಲನು ? ಅನೇಕ ವಿಘ್ನಗಳಿಂದ ಮಲಿನವಾಗಿದ್ದ ವನಿಯ ಮೇಲಿನ ಅವನ ಮನಸ್ಸಿನ ಮೋಹವು ಈಗ ಪುನಃ ಉಜ್ವಲವಾ ಯಿತು. ಅವನು, ನಾನು ಇನ್ನು ಅವನರ ಮಾಡಿ ಅರ್ಧ ಸೈನಿಕರನ್ನು ತಿರುಗಿ ಕಳುಹಿಸಿ ಮೂರ್ಖತನ ಮಾಡಿದೆನೆಂದು ಭಾವಿಸಿಕೊಂಡನು. ಮೋಹದಲ್ಲಿ ತೊಳಲುತ್ತಿದ್ದ ಅಲ್ಲಾವುದ್ದೀನನು ಮೊದಲು ನಮ್ಮಿನಿಯ ರೂಪಲಾವಣ್ಯಗಳನ್ನು ಕನ್ನಡಿಯಲ್ಲಿಯಾದರೂ ನೋಡಿ ಆನಂದವಡುವೆನೆಂದು ಅಂದುಕೊಂಡು ರಜಪೂತರ ಹೇಳಿಕೆಗೆ ಒಪ್ಪಿದನು. ಅವನು ಅಲ್ಪ ಪರಿವಾರದೊ ಡನೆ ದುರ್ಗದೊಳಗೆ ಬರಬೇಕೆಂದು ಗೊತ್ತಾಯಿತು, ಯುದ್ಧವು ನಿಂತಿತು. ಮಾರನೆಯದಿನ ಗೊತ್ತಾದಂತೆ ಅಲ್ಲಾವುದ್ದೀನನು ಒಳಗೆ ಬರಲು ಭೀಮ ಸಿಂಹನು ಅವನನ್ನು ಕರೆದುಕೊಂಡು ಪದ್ಮನಿಯ ಅರಮನೆಗೆ ಹೋದನು. ಅಲ್ಲಿ ತುಸು ಹೊತ್ತಿನವರೆಗೆ ಗಾಯನ ನರ್ತನಾದಿಗಳು ನಡೆದ ಬಳಿಕ ಭೀಮಸಿಂಹನು ಅವನನ್ನು ಕರೆದುಕೊಂಡು ಮತ್ತೊಂದು ಕೋಣೆಗೆ ಹೋದನು. ಅಲ್ಲಿ ಬಾಗಿ ಲಿನ ಎದುರಿಗೆ ಒಂದು ನಿಲುವುಗನ್ನಡಿಯನ್ನಿಟ್ಟಿದ್ದರು. ಅಲ್ಲಾವುದ್ದೀನನು ಆ ಕನ್ನಡಿಯ ಎದುರಿಗೆ ನಿಂತುಕೊಂಡನು. ಅವನ ಹಿಂದೆ ನಿಂತಿದ್ದ ಭೀಮಸಿಂಹನು ಸಂಜ್ಞೆಯನ್ನು ಮಾಡಿದ ಕೂಡಲೆ ಎದುರಿಗಿದ್ದ ಕನ್ನಡಿಯ ಮೇಲಿನ ಪರದೆಯ ಪ್ರತಿಬಿಂಬವು ಸರಿಯಿತು. ಅಲ್ಲಾವುದ್ದೀನನು ಕ್ಷಣಹೊತ್ತು ತಟಸ್ಥನಾಗಿ ನಿಂತು ಬಿಟ್ಟನು! ಅವನ ದೇಹವು ಶಿಲಾಪ್ರತಿಮೆಯಂತಾಗಿ ಹೋಯಿತು. ಎಂಥ ಮನೋಹರವಾದ ರೂಪವದು ! ಅಲ್ಲಾವುದ್ದೀನನಿಗೆ, ಅಂತರಂಗದಲ್ಲಿ ಮನೋ ಹರವಾದೊಂದು ವೀಣೆಯು ಸ್ಪಷ್ಟವಾಗಿ ನುಡಿಯುತ್ತಿದ್ದಂತೆ ಭಾಸವಾಯಿತು, ಆ ಮೃದುಮಧುರವಾದ ವೀಣೆಯ ಧ್ವನಿಯು ಬರಬರುತ್ತ ಸ್ಪಷ್ಟವಾಗುತ್ತ ಬಂದಂತೆ ತೋರಿತು ! ಕೊನೆಗೆ ಆ ಧ್ವನಿಯು ಸುಸ್ಪಷ್ಟವಾಗಿ ಹೇಳಿದಂತೆ ಭಾಸ ವಾಯಿತು. “ ಅಲ್ಲಾವುದ್ದೀನ, ನೀನು ಈ ಜಗತ್ತಿನಲ್ಲಿ ಹುಟ್ಟಿದ್ದು ವ್ಯರ್ಥ !” ೯L
ಪುಟ:ಪದ್ಮಿನಿ .djvu/೧೧೧
ಗೋಚರ