ನರನಯ ೩೦ರ ಅವನ ಮೋಹಮಗ್ರವಾದ ಮನೆದೇವತೆಯೇ ಈ ಮಾತನ್ನು ಆಡಿರಬಹುದೇ? ಅವನು ಈ ಧ್ವನಿಯನ್ನು ಕೇಳಿದವನೇ ಸ್ಮತಿಹೀನನಾಗಿ ಬಿಟ್ಟನು. ಯಾವದೋ ಒಂದು ಅಜ್ಞಾತವಾದ ಶಕ್ತಿಯು ಅವನನ್ನು ಎದುರಿಗಿದ್ದ ದರ್ವಣದ ಕಡೆಗೆ ಎಳೆದೊಯ್ಯ ತೊಡಗಿತು. ಅವನು ಆ ದರ್ಪಣದ ಬಳಿಗೆ ಹೋಗಿ ಅದರ ಮೇಲೆ ಮುಕ್ಕರಿಸಿ ಬೀಳಲಾದನು ! ಇದನ್ನು ನೋಡಿ ಭೀಮ ಸಿಂಹನು'-“ಶಾ ಹೇನ್ ಶಾ! ಇದೇನು ಮಾಡು ತೀರಿ? ಸಾವಧಾನ! ಪದ್ಮನಿಯನ್ನು ಅವಮಾನವಡಿಸಲಾಗದು! ” ಎಂದನು. ಅಲ್ಲಾವುದ್ದೀನನು ಬೆಚ್ಚಿ ಹಿಂಜರಿದು ನಿಂತನು. ಎದುರಿಗಿದ್ದ ಕನ್ನಡಿಯ ಇದ್ದ ಭುವನಮೋಹಿನಿಯಾದ ರಮಣಿಯ ಪ್ರತಿಬಿಂಬವು ಈಗ ಅಲ್ಲಿರಲಿಲ್ಲ. ಅದರ ಸ್ಥಳದಲ್ಲಿ ಒರೆಗಳೆದ ಖಡ್ಗವನ್ನು ಹಿಡಿದು ನಿಂತಿದ್ದ ಉಜ್ವಲವಾದ ಕ್ಷತ್ರಿಯ ತೇಜ ದಿಂದೊಪ್ಪುವ ಬಾಲಕನ ಛಾಯೆಯು ಸ್ಥಾಪಿತವಾಗಿತ್ತು ! ಅಲ್ಲಾವುದ್ದೀನನಿಗೆ ಅದು ಯಾರ ಪ್ರತಿಬಿಂಬವೆಂಬುದು ತಿಳಿಯಲಿಲ್ಲ. ಆದರೆ ಭೀಮಸಿಂಹನಿಗೆ ತಿಳಿ ಯಿತು. ಅದು ಸೇನಾವತಿ ಬಾದಲಿನದಾಗಿದ್ದಿತು. ಭೀಮಸಿಂಹನು ಅಲ್ಲಾವುದ್ದೀ ನನ ಕೈಯನ್ನು ಹಿಡಿದುಕೊಂಡು ಅವನನ್ನು ಮತ್ತೊಂದು ಕೋಣೆಗೆ ಕರೆ ದೊಯ್ದನು. ಮತ್ತು,-“ಬಾದಷಹರೇ ! ಬಾಲಕನ ಅಪರಾಧವನ್ನು ಕ್ಷಮಿಸ ಬೇಕು ! ಅತಿಧಿಗಳನ್ನು ಅವಮಾನವಡಿಸುವುದು ರಜಪೂತರಿಗೆ ಧರ್ಮವಲ್ಲ. ಈ ವಿಚಾರವು ಆ ಬಾಲಕನಿಗಿನ್ನೂ ತಿಳಿಯದು ! ” ಎಂದನು, ಅಲ್ಲಾವುದ್ದೀನನು ಸುಮ್ಮನೆ ರಾಣನ ಸಂಗಡ ಹೊರಗೆ ಬಂದು ಕುದುರೆ ಯನ್ನು ಏರಿ ಹೊರಟನು. ಅವನ ಅಂತರಂಗದಲ್ಲಿ ಉಂಟಾದ ಮಹಾ ಉದ್ವೇ ಗವು ಇನ್ನೂ ಶಾಂತವಾಗಿರಲಿಲ್ಲ. ಅದರಿಂದಲೇ ಅವನಿಗೆ ಭೀಮಸಿಂಹನ ಮಾತುಗಳ ಅರ್ಧವು ಸರಿಯಾಗಿ ಆಗಲಿಲ್ಲ. ದುರ್ಗದ ಹೊರಗೆ ಬರುವವರೆಗೂ ಅಲ್ಲಾವುದ್ದೀನನು 'ಪಿಟ್' ಎಂದು ಮಾತಾಡಲಿಲ್ಲ. ಅವನ ಮನಸ್ಸಿನಲ್ಲಿ ರಜಪೂತರ ಸರಳವಾದ ಸ್ವಭಾವ, ಮನ ಸ್ಸಿನ ಉದಾರತೆ, ಅತುಲವಾದ ಶೌರ್ಯ ಇವು ತಕ್ಕಮಟ್ಟಿಗೆ ಪ್ರತಿಬಿಂಬಿತವಾ ಗಿದ್ದುವು. ಹಿಂದೆ ಎಂದೂ ಹುಟ್ಟದೆ ಇದ್ದಂಥ ಕೃತಜ್ಞತೆಯೆಂಬ ಸದ್ಗುಣದ ೯೭
ಪುಟ:ಪದ್ಮಿನಿ .djvu/೧೧೨
ಗೋಚರ