ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ದಿನಿ ಆತನೆಡೆಗೆ ನುಗ್ಗಿ ಬರುತ್ತಲಿತ್ತು. ಗೋರಾಸಿಂಗನು ಇದೇ ಕೊನೆಯ ಪ್ರಯತ್ನ ವೆಂದು ಅಂದುಕೊಂಡನು, ಆತನು ಈ ಸಾರೆ ಬಾದಲನನ್ನು ರಕ್ಷಿಸಿಕೊಳ್ಳದಿದ್ದರೆ ಪುನಃ ಆಶೆಯಿದ್ದಿಲ್ಲ. ಈಗ ಬಾದಲನನ್ನು ಸುತ್ತಿದ್ದ ವರಾಣ ಸೈನಿಕರ ಭಯವು ಅಷ್ಟೊಂದು ಇಲ್ಲದಿದ್ದರೂ ಮಹಾಸಾಗರದ ಭಯಂಕರವಾದ ಅಲೆಯಂತೆ ಬಹು ದೂರದಿಂದಲೂ ಏರಿ ಬರುತ್ತಿದ್ದ ವರಾಣಸೇನೆಯು ಅಲ್ಲಿಗೆ ಬಂದು ಮುಟ್ಟಿದರೆ ಮಾತ್ರ ಬಾದಲನು ವಾರಾಗುವದು ಮಹಾ ಪ್ರಯಾಸವೇ ಸರಿ. ಗೋರಾಸಿಂಗನ ಅಶ್ವವು ನಾಲ್ವೇ ಹಾರು ಹಾರಿ ಬಾದಲನ ಬಲಪಾರ್ಶ್ವ ದಲ್ಲಿ ಬಂದು ನಿಂತಿತು, ಪರಾಣರು ಅವರಿಬ್ಬರನ್ನೂ ಸುತ್ತುಗಟ್ಟಿದರು. ಗೋರಾಸಿಂಗನ ಶಸ್ತ್ರಚಾಲನ ಕ್ರಮವನ್ನು ನೋಡಿ ಪರಾಣರು ಬೆರಗಾ ದರು ಎಂಧ ಹಸ್ತಚಾವ! ಎಂಧ ರಣಕುಶಲತೆ' ಈ ವೃದ್ಧನೂ ಬಾಲಕನ ಯಾರೆಂದು ಅವರು ಯೋಚಿಸತೊಡಗಿದರು. ಅವರು ಈ ಮೊದಲು ಅನೇ ಕರು ಯುದ್ಧ ಮಾಡುವ ರೀತಿಯನ್ನು ಕಂಡಿದ್ದರು, ಆದರೆ ಇಂಥ ಅಪೂರ್ವ ವಾದ ಯುದ್ಧವಿದ್ಯೆಯ ಮಾದರಿಯನ್ನು ಅವರು ಎಂದೆಂದೂ ನೋಡಿರಲಿಲ್ಲ. ಪರಾಣರು ಸಮಯ ನೋಡಿ ಕಾಗೆಯುವ ಯೋಚನೆಯಲ್ಲಿದ್ದರು ! ಗೋರಾಸಿಂಗನು ಬಾದಲನನ್ನು ಕುರಿತು -ಬಾದಲ, ನಡೆ' ನಡೆ! ದುರ್ಗದ ಕಡೆಗೆ ನಡೆ ! ತಡಮಾಡಿದರೆ ಮಹಾ ಸಂಕಟವು ಸಂಭವಿಸುವುದು , ವರಾಣ ರೊಡನೆ ಯುದ್ಧ ಮಾಡುತ್ತ ನಿಲ್ಲುವುದು ನಮ್ಮ ಸದ್ಯದ ಉದ್ದೇಶವಲ್ಲ. ನಮ್ಮ ಧೈಯವೇನೋ ನಮಗೆ ಸಾಧ್ಯವಾಗಿ ಹೋಗಿದೆ ನೋಡು; ವರಾಣಸೇನೆಯು ಹೇಗೆ ಧಾವಿಸಿಬರುತ್ತಿರುವುದು ' ಅದು ಇಲ್ಲಿ ಬಂದು ಮುಟ್ಟಿದರೆ ನಮ್ಮ ಅವ ಸ್ಥೆಯು ಸಮುದ್ರದ ತೆರೆಯ ನಡುವೆ ಸಿಕ್ಕಿದ ಚಿಪ್ಪಾಡಿಯಂತಾಗಿ ಹೋಗ ಬಹುದು, ಅದರಿಂದ ಹೊತ್ತು ನೋಡಿ ಕುದುರೆಯನ್ನು ಹಿಂದಕ್ಕೆ ದುರ್ಗದ ಕಡೆಗೆ ಬಿಡು, ತಡಮಾಡಿದರೆ ಮೋಸವಾಗುವುದು.” ಎಂದನು. ಆದರೆ ಬಾದಲನು, ಹೂ ಇಲ್ಲ; ಹಾ ಇಲ್ಲ. ಏಕೆಂದರೆ ರಣೋನ್ಮತ್ತನಾದ ಬಾದಲನು ಈಗ ಪ್ರಜ್ಞಾವಸ್ಥೆಯಲ್ಲಿದ್ದಿಲ್ಲ. ಕೇವಲ ಶತ್ರುಗಳನ್ನು ತುಂಡುಗಡಿಯು ವುದರಲ್ಲಿಯೇ ಆಸಕ್ತನಾಗಿದ್ದನು. ಗೊರಾಸಿಂಗನ ಮಾತುಗಳು ಅವನ ಕಿವಿಯೊ ೧೧೨