ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಮ್ಮಿನಿ ಎಂದೂ ನೋಡಿರಲಿಲ್ಲ. ತುಸು ಗರ್ವ, ಸ್ವಲ್ಪ ಆತ್ಮನಿಂದೆ, ಕೊಂಚ ಆನಂದ ಇವೆಲ್ಲಾ ಬಾದಲನ ಮನಸಿನಲ್ಲಿ ಉಂಟಾದುವು. ಕೊನೆಗೆ ಅವನು ಆನಂದಪರವಶ ನಾಗಿ ಚಪ್ಪಳೆಬಾರಿಸುತ್ತ-ವಾಃ ! ವಾಃ ! ದಾದಾ ! ಹೊಡಿ ! ಕಡಿ ! ನೀಚ ಪರಾಣ ರನ್ನು ತುಂಡುಗಡಿ! ” ಎಂದು ಒದರಿದನು. - ಗೋರಾಸಿಂಗನು ಆನಂದದಿಂದ ಉನ್ಮತ್ತನಾದನು ಅವನ ಖಡ್ಗವು ಇನ್ನಷ್ಟು ವೇಗದಿಂದ ಸಂಚರಿಸಹತ್ತಿತು ಗೋರಾಸಿಂಗನಿಗೆ ಈಗ ಆದಷ್ಟು ಆನಂದವು ಹಿಂದೆ ಎಂದೂ ಆಗಿರಲಿಲ್ಲ. ಇಂದಿನ ಮಹಾಯಾತ್ರೆಯ ಮಾರ್ಗದಲ್ಲಿ ಅವನ ಪ್ರಿಯತಮನಾದ ಬಾದಲನು, ಅವನ ನೇತ್ರದ ಮಣಿಯು, ಬಳಿಯಲ್ಲಿ ನಿಂತು ಕೊಂಡು ಅವನಿಗೆ ಆವೇಶವುಂಟಾಗುವಂತೆ ಪ್ರೋತ್ಸಾಹವಚನಗಳಿಂದ ಹುರಿ ದುಂಬಿಸುತ್ತಿದ್ದನು. ಮನುಷ್ಯನಿಗೆ ಇದಕ್ಕಿಂತ ಹೆಚ್ಚಾಗಿನ್ನೇನು ಬೇಕು ? ಇಂಧ ಮಹಾಸಂಗ್ರಾಮದ ಮಧ್ಯದಲ್ಲಿಯೂ ಗೋ ರಾಸಿಂಗನ ಕಣ್ಣುಗಳಿಂದ ಆನಂದಾಶ್ರುಗಳು ಉದುರಿದವು. ಅಕಸ್ಮಾತ್ ಗೋರಾಸಿಂಗನ ಕುದ ರೆಯು ಒಬ್ಬ ವರಾಣ ಸೈನಿಕರ ಕಡತದಿಂದ ಬಿದ್ದು ಹೋಯಿತು. ಗೋರಾಸಿ:ಗನ ಹೃದಯವು ಕ್ಷಣಹೊತ್ತು ನಡುಗಿತು. ಆದರೆ ಪಕ್ಷಣದಲ್ಲಿಯೇ ಅನು ಧೈರ್ಯದಿಂದ ನೆಲದ ಮೇಲೆ ನಿಂತುಕೊಂಡೇ ಯುದ್ಧವನ್ನು ಆರಂಭಿಸಿದನು. ನೂರಾರು ವರಾಣವೀರರು ಏಕಕಾಲದಲ್ಲಿ ಗೋರಾಸಿಂಗನನ್ನು ಆಕ್ರ ಮಣ ಮಾಡಿದರು. ಹತ್ತು ಮಂದಿ ವರಾಣರು ಸುತ್ತುಕಡೆಯಿಂದ ಅವನ ಮೇಲೆ ಕತ್ತಿಗಳನ್ನು ಬೀಸಿದರು. ಆದರೆ ಅವುಗಳಲ್ಲಿ ಒಂದಾದರೂ ಅವನ ಮೈಗೆ ಸೋ೦ಕಲಿಲ್ಲ. ಅವನ ಉದ್ದವಾದ ಕತ್ತಿಯು ತಿರುಗುವ ವೇಗದಲ್ಲಿ ಅವೆಲ್ಲವೂ ಪ್ರತಿಹತವಾಗಿ ಹೋದುವು. ಮೂವರ ಕತ್ರಿಗಳು ಝುಣ ಝುಣ ಶಬ್ದದೊಂ ದಿಗೆ ದೂರ ಸಿಡಿದು ಬಿದ್ದು ವು. ಇನ್ನಿಬ್ಬರ ಬಾಹುಗಳು ಕತ್ತರಿಸಿ ಕತ್ತಿಯೊಂ ದಿಗೆ ನೆಲಕ್ಕುರುಳಿದುವು. ಉದ ವಾದ ಗಡ್ಡಗಳಿಂದ ಮೆರೆಯುವ ಪರಾಣರ ರುಂಡಗಳು ಕತ್ತರಿಸಿ ಉರುಳಿಬಿದ್ದವು. ತಲೆಗಳ ಮೇಲೆ ತಲೆಗಳು ಕತ್ತರಿಸಿ ಬಿದ್ದುವು; ಶವಗಳ ಮೇಲೆ ಶವಗಳು ಬಿದ್ದು ವು. ರಕ್ತವು ಪ್ರವಾಹಗೊಂಡು ಹರಿ ಯಿತು. ಆದರೂ ಯುದ್ದಕ್ಕೆ ತೆರಪಿಲ್ಲ. ಗೋರಾಸಿಂಗನ ಕತ್ತಿಯು ಏಕಕಾಲ ೧೧೪