ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನಯ ಖಂಡ ದಲ್ಲಿ ನೂರಾರು ಕೋಲುಮಿಂಚುಗಳ ಹಾಗೆ ಹೊಳೆಯತ್ತ ಶತ್ರುಬಲವನ್ನು ಸೀಳಿ ಒಗೆಯಲಾರಂಭಿಸಿತು. ಬಳಿಯಲ್ಲಿ ನಿಂತಿದ್ದ ಬಾದಲನು “ ಜಯ ! ರಜಪೂತ ವೀರನಿಗೆ ಜಯ ! ” ಎಂದು ಒದರಿದನು, ಗೋರಾಸಿಂಗನ ರಣೋಲ್ಲಾಸವು ಇಮ್ಮಡಿಸಿತ್ತು, ಅವನ ನಾಲ್ಕು ದಿಕ್ಕುಗಳಲ್ಲಿಯೂ ಯವನ ಸೇನೆ ! ಮೈಮೇಲೆಲ್ಲ ಯವನರ ರಕ್ತಧಾರೆ ! ಪದತಲದಲ್ಲಿ ಯವನರ ಪ್ರೇತ ? ಯವನರ ಮುಂಡ ! ಬಹು ಸಂಖ್ಯಾಕವಾದ ಆ ಯವನರ ಸೇನೆಯನ್ನು ಗೋರಾಸಿಂಗನು ನಿಮ ವಾದ ಉತ್ಸಾಹದಿಂದಲೂ ಅತುಲವಾದ ಸ್ಫೂರ್ತಿಯಿಂದಲೂ ಈಡಿಲ್ಲದೆ ಹೊಡೆದು ಕೆಡವಿದನು ಆದರೆ ಎಷ್ಟು ಹೊತ್ತು ತಾನೇ ಈಡಾಗಬಲ್ಲನು? ಕ್ರಮ ವಾಗಿ ಆತನ ಬಾಹುಗಳಲ್ಲಿ ಬಲವು ಕುಂದು ಬಂದಿತು. ಗಾಯಗಳಿಂದ ರಕ್ತವು ಸುರಿದು ದೇಹವು ನಿರ್ಬಲವಾಗುತ್ತ ಬಂದಿತು. ಕತ್ತಿಯು ಕಂಪಿತವಾಯಿತು. ಮೈಮೇಲಿನ ಎಚ್ಚರಿಕೆಯು ಹೋಗುತ್ತ ಬಂದಿತು ಆಗ ಗೊರಾಸಿಂಗನು* ಬಾದಲ ! ಸಾಧ್ಯವಿದ್ದರೆ ಇನ್ನಾದರೂ ಆತ್ಮರಕ್ಷಣೆ ಮಾಡಿಕೊ ನನ್ನ ಕೆಲ ಸವು ತೀರಿತು. ನನಗೆ ತಲೆತಿರುಗುತ್ತದೆ. ದೃಷ್ಟಿ ಶಕ್ತಿಯು ಕುಂದುತ್ತ ಬಂದಿತ್ತು, ನಾನಿನ್ನು ನಿಲ್ಲಲಾರೆನು.' ಎಂದು ಹೇಳಿದನು. ಗೋರಾಸಿಂಗನ ಬೆನ್ನ ಮೇಲಿನ ಭಯಂಕರವಾದ ಖಡ್ಗದ ಗಾಯವು ಅವರಿಬ್ಬರಲ್ಲಿ ಯಾರಲಕ್ಷಕ್ಕೂ ಬಂದಿರಲಿಲ್ಲ. ಬಾದಲನು ಗೋರಾಸಿಂಗನ ಮುಂದೆ ಬಂದು ನಿಂತು ಪುನಃ ಯುದ್ದ ವನ್ನು ಆರಂಭಿಸಿದನು. ಗೊರಾಸಿಂಗನು ಗಾಯ ಹೊಂದಿ ಕೈ ಸೋತು ಹಿಂಜರಿ ದುದನ್ನು ನೋಡಿ ವರಾಣರು ಜಯಘೋಷ ಮಾಡಲಾಂಭಿಸಿದರು. ವರಾಣ ಸೇನಾವತಿಯಾದ ಮಲಿಕಕಾಫರನು, “ ಹೊಡೆಯಿರಿ ! ಆ ಪೋರನನ್ನು ಹೊಡೆಯಿರಿ! ಮುದುಕನ ಕೆಲಸವು ತಿ?ರಿತು ! ಆ ಪೋರನ ಹೊಡೆಯಿರಿ ! ಏನು ನೋಡುತ್ತೀರಿ ?” ಎಂದು ಒದರಿ ಹೇಳಿದನು. ಆದರೆ ವರಣ ಸೈನಿಕರಿಗೆ ಆ ಪೋರನನ್ನು ಹೊಡೆಯುವುದು ಹಾಗಿರಲಿ, ಕೊತ್ಮಿಂಚಿನಂತೆ ಝಳಪಿಸುತ್ತಿ ರುವ ಆ ಬಾಲಕನ ಖಡ್ಗದ ಕಡತದಿಂದ ಜೀವವನ್ನು ಉಳಿಸಿಕೊಳ್ಳಬೇಕಾದರೆ ಸಾಕು ಸಾಕಾಗಿ ಹೋಯಿತು. ಬಾಲಕನು ಸಾಮಾನ್ಯನಾಗಿರಲಿಲ್ಲ, ಇಷ್ಟು ಹೊತ್ತಿನವರೆಗೆ ಗೋರಾಸಿಂಗನು ಯುದ್ಧ ಮಾಡುತ್ತಿದ್ದನು. ಆಗ ಬಾದಲನು ೧೧೫