ಸದ್ವಿನಿ ದರು. ಇನ್ನು ಅವರಿಂದ ಚಿತ್ತೂರಿಗೆ ಭಯವಿಲ್ಲ. ಅಲ್ಲಾವುದ್ದೀನನು ಬೆಳಗಾ ಗುವುದರೊಳಗೆ ಇಲ್ಲಿಂದ ಹೊರಟುಹೋಗುವನು; ಆದರೆ ನನ್ನ ಮನಸ್ಸಿಗೆ ಮಾತ್ರ ಸ್ವಲ್ಪವೂ ಶಾಂತಿಯಿಲ್ಲ. ಯಾರೂ ನನ್ನನ್ನು ಇಂದು ಯುದ್ಧಕ್ಕಾಗಿ ಕರೆದಿರಲಿಲ್ಲ. ನಾನೇ ಯುದ್ಧರಂಗದಲ್ಲಿ ಮರಣ ಹೊಂದಿ ಈ ಪಾಪಿಜೀವಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಕೊಡಬೇಕೆಂದು ಬಂದಿದ್ದೆನು, ಆದರೆ ಅದೂ ಸಾಧಿ ಸಲಿಲ್ಲ. ಮೃತ್ಯುದೇವತೆಗೂ ನಾನು ಬೇಡವಾದೆನು. ನನಗೆ ಇನ್ನೆಲ್ಲಿ ಆಶ್ರಯ ! ಬಾದಲ, ನನಗೆ ಪ್ರಾಯಶ್ಚಿತ್ತದ ಮಾರ್ಗವನ್ನಾದರೂ ತೋರಿಸುವೆಯಾ ! ಬಾದಲ-ಅರುಣ, ಯಾತಕ್ಕೆ ವ್ಯಸನನಡುವೆ? ಸುಮ್ಮನೆ ನನ್ನ ಸಂಗಡ ದುರ್ಗಕ್ಕೆ ನಡೆ. ಇಂದು ನಿನ್ನ ಸಾಹಸದಿಂದ ಚಿತ್ತೂರು ಉದ್ಧಾರವಾಯಿತು, ರಾಣರವರು ನಿಶ್ಚಯವಾಗಿಯೂ ನಿನ್ನನ್ನು ಕ್ಷಮಿಸುವರು. ಸಂಶಯವಿಲ್ಲ ” ಅರುಣ ಸಿಂಹನು ತಲೆಯನ್ನು ತಗ್ಗಿಸಿ-ಬಾದಲ, ಆ ಮಾತು ಎಂದಿಗೂ ಆಗದು, ಚಿತ್ತೂರಿನಲ್ಲಿ ನನಗೆ ಇನ್ನು ಸ್ಥಳವಿಲ್ಲ. ಚಿತ್ತೂರಿಗೆ ತಿರುಗಿಹೋ ಗುವ ಆಶೆಯು ಇನ್ನು ಮೇಲೆ ನನಗಿರುವುದಿಲ್ಲ. ಚಿತ್ತೂರಿನ ಸುಖದುಃಖಗ ಇಲ್ಲಿ ಪಾಲುಗಾರನಾಗಬೇಕೆಂಬುದಿಷ್ಟೆ ನನ್ನ ಅಪೇಕ್ಷೆ. ಒಂದು ವೇಳೆ ಚಿತ್ತೂರಿನವರು ಸುಖದ ದಿನಗಳಲ್ಲಿ ನನ್ನನ್ನು ಸ್ಮರಿಸಿಕೊಳ್ಳದೆ ಇದ್ದರೂ ದುಃ ಖದ ಕಾಲದಲ್ಲಿಯಾದರೂ ಸ್ಮರಿಸಿ ಅವರ ದುಃಖ ನಲ್ಲಿ ನನ್ನನ್ನು ಪಾಲುಗಾರನ ನ್ನಾಗಿ ಮಾಡಿಕೊಂಡರೆ, ನಾನು ಕೃತಾರ್ಧನಾಗುವೆನು ” ಎಂದನು. ಬಾದಲನಿಗೆ ಈ ಮಾತಿನ ಅರ್ಥವಾಗಲಿಲ್ಲ. ಅವನು ವಿಸ್ಮಿತನೇತ್ರದಿಂದ ಅರುಣ ಸಿಂಹನ ಮುಖವನ್ನು ನೋಡುತ್ತ ನಿಂತುಕೊಂಡನು. ಅರುಣಸಿಂಹನು ಮುಖವನ್ನು ಸ್ವಲ್ಪ ಮೇಲಕ್ಕೆತ್ತಿ, ವಿಸ್ಮಿತನೇತ್ರದಿಂದ ತನ್ನನ್ನು ನೋಡುತ್ತ ನಿಂತಿರುವ ಬಾದಲನ ಮೊರೆಯನ್ನು ನೋಡಿ ಮೆಲ್ಲನೆ ನಕ್ಕನು. ಹಾಗು-ಬಾದ, ನಾನು ಹೇಳಿದ್ದು ತಿಳಿಯಲಿಲ್ಲವೇ ? ನಿನಗೆ ಹೇಗೆ ತಾನೇ ತಿಳಿದೀತು ? ಆ ಭಿಲ್ಲರ ಸೇನೆಯನ್ನು ನೋಡಿದೆಯಾ ?” ಎಂದನು. ಬಾದಲನು ಆಶ್ಚರ್ಯದಿಂದ ಆ ಭಿಲ್ಲರು ಎಲ್ಲಿಯವರು? ಆ ರೀತಿಯಾಗಿ ಮಹಾಸಾಗರದ ತೆರೆಯಂತೆ ಬಂದು ಪರಾಣರನ್ನು ದಿಕ್ಕುದಿಕ್ಕಿಗೆ ಓಡಿಸಿಬಿಟ್ಟರು ಅರುಣ, ಅವರನ್ನೆಲ್ಲ ನೀನು ಎಲ್ಲಿ ಸಂಪಾದಿಸಿದೆ ?” ಎಂದನು. ೧೨೦
ಪುಟ:ಪದ್ಮಿನಿ .djvu/೧೩೫
ಗೋಚರ