ವಿಷಯಕ್ಕೆ ಹೋಗು

ಪುಟ:ಪದ್ಮಿನಿ .djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮನಿ ಕಿಶೋರವಯಸ್ಕನಾದ ಬಾದಲನಿಗೆ ಅರುಣ ಸಿಂಹನ ಇಷ್ಟೆಲ್ಲ ಮಾತಿನ ಅರ್ಥವಾಗಲಿಲ್ಲ. ಅವನು:-“ಆರುಣ, ಹಾಗಾದರೆ ನಿನಗಿನ್ನು ದುರ್ಗದಲ್ಲಿ ಸ್ಥಳವಿಲ್ಲ. ಹಾಯಮ್ ! ಎಂಧ ಪ್ರಮಾದವಾಯಿತು ! ವಿಧಿಯ ಮಹಿಮೆಯು ವಿಚಿತ್ರವಾದದ್ದು. ಒಳ್ಳೆಯದು, ನೀನು ನಿನ್ನ ಸ್ಥಾನಕ್ಕೆ ಹೋಗು. ನಾನು ದುರ್ಗವನ್ನು ಪ್ರವೇಶಿಸುವೆನು, ರಾಣರವರು ನನ್ನ ದಾರಿಯನ್ನು ನೋಡುತ್ತಿ ದ್ದಾರು. ” ಎನ್ನುತ್ತ ಹೊರಡಲು ಸಿದ್ಧನಾದನು. - ಅರುಣ'- ಬಾದಲ, ಒಳ್ಳೇದು ಹೋಗಿಬಾರಪ್ಪಾ ಮಗು. ಅಮ್ಮನಾ ಗಲಿ ನದಿನೀದೇವಿಯವರಾಗಲಿ ನನ್ನನ್ನು ಕೇಳಿದರೆ ನಾನು ಸುಖವಾಗಿರುವೆನೆಂದು ಹೇಳು. ಬಾದಲನು ಅಗುಣಸಿಂಹನನ್ನು ಬೀಳ್ಕೊಂಡು ದುರ್ಗದ ಮಹಾದ್ವಾರಕ್ಕೆ ಬಂದು ಸೇರಿದನು. ರಾಣಾಲಕೃಣ ಸಿಂಹನೂ ಭೀಮಸಿಂಹನೂ ಮಿಕ್ಕ ಸರದಾ ರರೂ ಅಲ್ಲಿ ಅವನ ಇದಿರು ನೋಡುತ್ತಲಿದ್ದರು. ಬಾದಲನನ್ನು ಕಂಡೊಡನೆ ರಾ ಣನು ಮುಂದೆ ಬಂದು ಅವನನ್ನು ಕುದುರೆಯಿಂದ ಇಳಿಸಿಕೊಂಡು ಅಭಿಮನ್ಯು ಚಕ್ರಬಿಂಬದ ಕದನದಲ್ಲಿ ವಿಜಯ ಶಾಲಿಯಾಗಿ ಬಂದೆಯೇನಪ್ಪಾ ಮಗು, ದಾದಾ ಗೋರಾಸಿಂಗನೆಲ್ಲಿ? ಬಾದಲನ ಹೃದಯದಲ್ಲಿ ರಣೋನ್ಮುತ್ತತೆಯಿಂದ ಮರೆಯಾಗಿದ್ದ ದುಃಖದ ಪ್ರವಾಹವು ಕಟ್ಗೊಡೆದ ಜಲ ಪ್ರವಾಹದಂತೆ ಹೊರಸೂಸಿ ಹರಿಯಿತು. ಬಾದ ಲನು ಬಿಕ್ಕಿಬಿಕ್ಕಿ ಅಳಹತ್ತಿದನು. ಇದನ್ನು ಕಂಡ ರಾಣ ಭೀಮಸಿಂಹನೂ ದುಃಖವೇಗದಿಂದ ಕಳವಳಗೊಂಡರು, ರಾಣನು:-*ಚಿತ್ತೂರಿನ ಉದ್ಧಾರಕ್ಕಾಗಿ ರಣದೇವತೆಗೆ ಸ್ವ ಶರೀರವನ್ನೇ ಬಲಿಯಾಗಿ ಅರ್ಪಿಸಿದ ವೀರಾಧಿವೀರ ಗೋರಾ ಸಿಂಗನ ಶರೀರವನ್ನು ಈಗಲೇ ಶೋಧಿಸಿಕೊಂಡು ಬಂದವರಿಗೆ ಈ ವಜ್ರದ ಬಿ ರುದಿನ ಬಳೆಯನ್ನು ಕೊಡುವೆನು” ಎಂದನು, ಆರೆಂಟು ಜನ ರಜಪೂತ ಸವಾ ನುರ್ಗದಿಂದ ಇಳಿದು ಹೊರಟರು. ೧೨೨